ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಮಾಜಿ ಆಲ್ ರೌಂಡರ್ ಯೂಸುಫ್ ಪಠಾಣ್‌ಗೆ ಕೊರೊನಾವೈರಸ್

Former India All-Rounder Yusuf Pathan Tests Positive For Coronavirus

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಯೂಸುಫ್‌ ಪಠಾಣ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಶನಿವಾರ (ಮಾರ್ಚ್ 27) ಪಠಾಣ್ ಈ ಸಂಗತಿ ತಿಳಿಸಿದ್ದಾರೆ. ಇದೇ ದಿನ ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಕೂಡ ತನಗೆ ಕೋವಿಡ್-19 ಇರುವುದಾಗಿ ತಿಳಿಸಿದ್ದರು.

ಭಾರತ vs ಇಂಗ್ಲೆಂಡ್: 3ನೇ ಏಕದಿನಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ XIಭಾರತ vs ಇಂಗ್ಲೆಂಡ್: 3ನೇ ಏಕದಿನಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ XI

ಟ್ವೀಟ್‌ ಮಾಡಿರುವ ಯೂಸುಫ್ ಪಠಾಣ್, 'ನನಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ರೋಗದ ಸಣ್ಣ ಗುಣಲಕ್ಷಣಗಳಿವೆ. ನಾನೀಗ ಮನೆಯಲ್ಲಿ ಕ್ವಾರಂಟೈನ್ ಪಾಲಿಸುತ್ತಿದ್ದೇನೆ. ಸೂಚಿಸಲಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ನಾನು ಪಾಲಿಸುತ್ತಿದ್ದೇನೆ,' ಎಂದು ಬರೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಯೂಸುಫ್ ಸನ್ ರೈಸರ್ಸ್ ಹೈದರಾಬಾದ್ ಪರ ಕಡೇಯ ಪಂದ್ಯ ಆಡಿದ್ದರು.

ಸಚಿನ್ ತೆಂಡೂಲ್ಕರ್, ಯೂಸೂಫ್ ಪಠಾಣ್ ಇಬ್ಬರೂ ಇತ್ತೀಚೆಗೆ ಮುಕ್ತಾಯಗೊಂಡ ರೋಡ್ ಸೇಫ್ಟಿ ವರ್ಲ್ಡ್‌ ಸೀರೀಸ್ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದರು. ಈ ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್‌ ಚಾಂಪಿಯನ್ಸ್ ಆಗಿ ಹೊರಹೊಮ್ಮಿತ್ತು. ಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್‌ ಮತ್ತು ಶ್ರೀಲಂಕಾ ಲೆಜೆಂಡ್ಸ್‌ ಮಧ್ಯೆ ಕಾದಾಟ ನಡೆದಿತ್ತು.

ODIನಲ್ಲಿ ಅತಿ ಹೆಚ್ಚು ಬಾರಿ 300+ ರನ್ ಚೇಸ್ ಮಾಡಿರುವ ಟಾಪ್ 5 ತಂಡಗಳಿವುODIನಲ್ಲಿ ಅತಿ ಹೆಚ್ಚು ಬಾರಿ 300+ ರನ್ ಚೇಸ್ ಮಾಡಿರುವ ಟಾಪ್ 5 ತಂಡಗಳಿವು

ರೋಡ್‌ ಸೇಫ್ಟಿ ಫೈನಲ್‌ನಲ್ಲಿ ಯೂಸುಫ್ ಅಜೇಯ 62 ರನ್ ಕೊಡುಗೆ ನೀಡಿದ್ದಲ್ಲದೆ 2 ಪ್ರಮುಖ ವಿಕೆಟ್‌ ಕೂಡ ಮುರಿದಿದ್ದರು. ರೋಡ್ ಸೇಫ್ಟಿ ಟೂರ್ನಿಯಲ್ಲಿ ಸಚಿನ್, ಯೂಸೂಫ್ ಅಲ್ಲದೆ ವೆಸ್ಟ್‌ ಇಂಡೀಸ್‌ನ ದಂತಕತೆ ಬ್ರಿಯಾನ್ ಲಾರಾ, ಶ್ರೀಲಂಕಾದ ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶನ್, ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್‌, ಭಾರತದ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್ ಮೊದಲಾದವರೂ ಆಡಿದ್ದರು.

Story first published: Saturday, March 27, 2021, 23:22 [IST]
Other articles published on Mar 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X