ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಯಾಕೆ ಐಪಿಎಲ್‌ನ ಬೆಸ್ಟ್ ಕ್ಯಾಪ್ಟನ್: ಕಾರಣ ಹೇಳಿದ ಮಾಜಿ ಟೀಮ್ ಇಂಡಿಯಾ ಕೋಚ್

Former India Batting Coach Explains Why Rohit Sharma Is Best Captain In Ipl

ಐಪಿಎಲ್‌ನ ಬೆಸ್ಟ್ ನಾಯಕ ಯಾರು ಎಂಬುದು ಸಧ್ಯ ಹೆಚ್ಚು ಚರ್ಚೆಯಲ್ಲಿರುವ ಪ್ರಶ್ನೆಯಾಗಿದೆ. ಹೆಚ್ಚಿನ ಕ್ರಿಕೆಟ್ ಪಂಡಿತರು ಮತ್ತು ಮಾಜಿ ಕ್ರಿಕೆಟಿಗರು ಈ ಬಗ್ಗೆ ತಮ್ಮದೇ ರೀತಿಯಲ್ಲಿ ವಿಶ್ಲೇಷಣೆಯನ್ನು ಮಾಡುತ್ತಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ನಾಲ್ಕು ಬಾರಿ ಮುಂಬೂ ಇಂಡಿಯನ್ಸ್‌ನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿ ಧೋನಿ ವಿರಾಟ್ ಕೊಹ್ಲಿಯಂತಾ ನಾಯಕರನ್ನು ಹಿಂದಿಕ್ಕಿ ರೋಹಿತ್ ಶರ್ಮಾ ಹೆಸರು ಜೋರಾಗಿ ಕೇಳಿ ಬರ್ತಿದೆ.

ಟೀಮ್ ಇಂಡಿಯಾದ ಮಾಜಿ ಸಹಾಯಕ ಕೋಚ್ ಸಂಜಯ್ ಬಂಗಾರ್ ಐಪಿಎಲ್‌ನ ಬೆಸ್ಟ್ ಕ್ಯಾಪ್ಟನ್‌ ಯಾರು ಎಂಬ ಪ್ರಶ್ನೆಗೆ ರೋಹಿತ್ ಶರ್ಮಾ ಹೆಸರನ್ನೇ ಹೇಳಿದ್ದಾರೆ. ಜೊತೆಗೆ ಅದಕ್ಕೆ ಕಾರಣವನ್ನೂ ನೀಡಿದ್ದಾರೆ ಸಂಜಯ್ ಬಂಗಾರ್.

ರೋಹಿತ್ ಸಕ್ಸಸ್‌ಗೆ ಕಾರಣ

ರೋಹಿತ್ ಸಕ್ಸಸ್‌ಗೆ ಕಾರಣ

ಟೀಮ್ ಇಂಡಿಯಾದ ಮಾಜಿ ಸಹಾಯಕ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಯಶಸ್ಸಿಗೆ ಕಾರಣವನ್ನು ಹೇಳಿದ್ದಾರೆ. ಒತ್ತಡದ ಸಂದರ್ಭದಲ್ಲಿ ರೋಹಿತ್ ಶರ್ಮಾ ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳು ಶರ್ಮಾ ಸಕ್ಸಸ್‌ಗೆ ಕಾರಣ ಎಂದಿದ್ದಾರೆ.

ಸಮಬಲದ ಹೋರಾಟದಲ್ಲಿ ಮುನ್ನಡೆ

ಸಮಬಲದ ಹೋರಾಟದಲ್ಲಿ ಮುನ್ನಡೆ

ಸಮಬಲದ ಪಂದ್ಯಗಳಲ್ಲಿ ಮುಂಬೈ ತಂಡದ ಗೆಲುವಿನ ಸಂಖ್ಯೆಗಳೂ ಇಲ್ಲಿ ಪ್ರಮುಖ ವಿಚಾರವಾಗುತ್ತದೆ. ಸಮಬಲದ ಹೋರಾಟದ ವೇಳೆ ಮುಂಬೈ ಇಂಡಿಯನ್ಸ್ ತಂಡ ಅತಿ ಹೆಚ್ಚಿನ ಗೆಲುವನ್ನು ಸಾಧಿಸಿದೆ. ಅತ್ಯಂತ ಕಠಣವೆನಿಸಿದ ಪಂದ್ಯಗಳಲ್ಲೂ ಮುಂಬೈ ಗೆಲುವನ್ನು ಸಾಧಿಸಿದೆ. ಇದು ನಾಯಕನಾಗಿ ರೋಹಿತ್ ಶರ್ಮಾ ತಂಡವನ್ನು ನಿಭಾಯಿಸಿದ ರೀತಿಗೆ ಸಾಕ್ಷಿಯಾಗುತ್ತದೆ ಎಂದು ಬಂಗಾರ್ ಹೇಳಿದ್ದಾರೆ.

ಫಲಿತಾಂಶ ಆಚೆಗಿಟ್ಟರೂ ಶರ್ಮಾನೆ ಬೆಸ್ಟ್

ಫಲಿತಾಂಶ ಆಚೆಗಿಟ್ಟರೂ ಶರ್ಮಾನೆ ಬೆಸ್ಟ್

ಮೇಲಿನದಷ್ಟು ಕೇವಲ ಫಲಿತಾಂಶ ಆಧಾರದಲ್ಲಿ ಹೇಳಿದ ಮಾತುಗಳು, ಅದನ್ನು ಹೊರತು ಪಡಿಸಿ ನಾಯಕತ್ವವನ್ನೇ ದೃಷ್ಟಿಯಲ್ಲಿಟ್ಟುಕೊಂಡರೂ ರೋಹಿತ್ ಶರ್ಮಾನ ಚತುರತೆ ಮತ್ತು ತೆಗೆದುಕೊಳ್ಳುವ ನಿರ್ಧಾರಗಳ ಆಧಾರದಲ್ಲಿ ನೋಡಿದಾಗಲೂ ರೋಹಿತ್ ಶರ್ಮಾನೆ ಉತ್ತಮ ನಾಯಕ ಎಂದು ಸಂಜಯ್ ಬಂಗಾರ್ ಕಾರಣವನ್ನು ನೀಡಿದ್ದಾರೆ.

ಗಂಭೀರ್‌ ಸೂಚಿಸಿದ್ದೂ ಶರ್ಮಾ ಹೆಸರನ್ನೇ

ಗಂಭೀರ್‌ ಸೂಚಿಸಿದ್ದೂ ಶರ್ಮಾ ಹೆಸರನ್ನೇ

ಇತ್ತೀಚೆಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಐಪಿಎಲ್‌ನ ಬೆಸ್ಟ್ ನಾಯಕ ಯಾರು ಎಂಬುದಕ್ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅವರು ಕೂಡ ರೋಹಿತ್ ಶರ್ಮಾ ಹೆಸರನ್ನೇ ಸೂಚಿಸಿದ್ದರು. ಮಾತ್ರವಲ್ಲ ಐಪಿಎಲ್ ಇತಿಹಾಸದಲ್ಲಿ ರೋಹಿತ್ ಅತ್ಯುತ್ತಮ ನಾಯಕ ಎಂಬ ಖ್ಯಾತಿಯೊಂದಿಗೆ ಅಭಿಯಾನವನ್ನು ಮುಗಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು ಗಂಭೀರ್

ಟೀಮ್ ಇಂಡಿಯಾದಲ್ಲೂ ನಾಯಕನಾಗಿ ಉತ್ತಮ ದಾಖಲೆ

ಟೀಮ್ ಇಂಡಿಯಾದಲ್ಲೂ ನಾಯಕನಾಗಿ ಉತ್ತಮ ದಾಖಲೆ

ಟೀಮ್ ಇಂಡಿಯಾದಲ್ಲಿ ಉಪನಾಯಕನಾಗಿರುವ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಲು ಸಿಕ್ಕ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 10 ಏಕದಿನ ಪಂದ್ಯದಲ್ಲಿ 8ರಲ್ಲಿ ಭಾರತ ಗೆಲುವನ್ನು ಸಾಧಿಸಿದೆ. ಇನ್ನು 19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಪಂದ್ಯಗಳಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ್ದರೆ ಕೇವಲ ನಾಲ್ಕು ಪಂದ್ಯಗಳಷ್ಟೇ ಕೈತಪ್ಪಿವೆ.

Story first published: Monday, April 20, 2020, 19:48 [IST]
Other articles published on Apr 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X