ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇರ್ಫಾನ್ ಪಠಾಣ್ ಬಗ್ಗೆ ಮಾಜಿ ಕೋಚ್ ಗ್ರೇಗ್ ಚಾಪೆಲ್ ಕುತೂಹಲಕರ ಹೇಳಿಕೆ !

Former India Coach Greg Chappell Reacts On Irfan Pathan

ಟೀಮ್ ಇಂಡಿಯಾದ ವಿವಾದಿತ ಕೋಚ್ ಗ್ರೇಗ್ ಚಾಪೆಲ್ ಮಾಜಿ ಆಲ್‌ ರೌಂಡರ್ ಇರ್ಫಾನ್ ಪಠಾಣ್ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾದ ಕೋಚ್‌ ಆಗಿದ್ದ ಗ್ರೇಗ್ ಚಾಪೆಲ್ ಟೀಮ್ ಇಂಡಿಯಾ ಆಟಗಾರರ ಬಗ್ಗೆ ನಾನಾ ಅಪವಾದಗಳನ್ನು ಮಾಡಿ ಸುದ್ದಿಯಾಗಿದ್ದರು. ಇದೇ ಮೊದಲ ಬಾರಿ ಎಂಬಂತೆ ಟೀಮ್ ಇಂಡಿಯಾ ಆಟಗಾರನೋರ್ವನನ್ನು ಹೊಗಳಿ ಹೇಳಿಕೆ ನೀಡಿದ್ದಾರೆ.

ಇರ್ಫಾನ್ ಪಠಾಣ್ ಓರ್ವ ಧೈರ್ಯವಂತ ಹಾಗೂ ನಿಸ್ವಾರ್ಥ ಮನೋಭಾವದ ವ್ಯಕ್ತಿ ಎಂದು ಗ್ರೇಗ್ ಚಾಪೆಲ್ ಹಾಡಿಹೊಗಳಿದ್ದಾರೆ. ತಂಡದ ಅಗತ್ಯಕ್ಕೆ ತಕ್ಕಂತೆ ಯಾವ ಪಾತ್ರವನ್ನು ನಿರ್ವಹಿಸಲು ಕೂಡ ಇರ್ಫಾನ್ ಪಠಾಣ್ ಹಿಂದ ಮುಂದೆ ನೋಡುತ್ತಿರಲಿಲ್ಲ. ತಾನೊಬ್ಬ ಸಮರ್ಥ ಆಲ್‌ರೌಂಡರ್ ಎಂದು ಸಾಭೀತು ಪಡಿಸಿದ್ದರು. ಇರ್ಫಾನ್ ಸ್ವಿಂಗ್ ಬೌಲಿಂಗ್ ಅದ್ಭುತವಾಗಿತ್ತು ಎಂದು ಚಾಪೆಲ್ ಹೇಳಿಕೆ ನೀಡಿದ್ದಾರೆ.

ಸಾರ್ವಕಾಲಿಕ ದಾಖಲೆ ಬರೆದ ರಾಸ್‌ ಟೇಯ್ಲರ್: ಮಾಧ್ಯಮದ ಮುಂದೆ ಕಣ್ಣೀರು!ಸಾರ್ವಕಾಲಿಕ ದಾಖಲೆ ಬರೆದ ರಾಸ್‌ ಟೇಯ್ಲರ್: ಮಾಧ್ಯಮದ ಮುಂದೆ ಕಣ್ಣೀರು!

ಗ್ರೆಗ್ ಚಾಪೆಲ್ 2005ರಿಂದ 2007ರ ಅವಧಿಯಲ್ಲಿ ಎರಡು ವರ್ಷಗಳ ಕಾಲ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ಈ ಅವಧಿಯಲ್ಲಿ ತಂಡದಲ್ಲಿ ಸಾಕಷ್ಟು ಬಿರುಕಿನ ವಾತಾವರಣ ಉಂಟಾಗಿ ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರಿತ್ತು.

ಬೌಲರ್ ಆಗಿ ಬಂದು ಆಲ್‌ರೌಂಡರ್ ಆಗಿ ಮಿಂಚಿದ್ದ ಪಠಾಣ್

ಬೌಲರ್ ಆಗಿ ಬಂದು ಆಲ್‌ರೌಂಡರ್ ಆಗಿ ಮಿಂಚಿದ್ದ ಪಠಾಣ್

ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಮೊನ್ನೆಯಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರು. 19ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಗೆ ಕಾಲಿಟ್ಟ ಇರ್ಫಾನ್ ಪಠಾನ್ ಬಳಿಕ ಆಲ್ರೌಂಡರ್ ಆಗಿ ಮಿಂಚಿದರು. ಬಳಿಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮೊನಚು ಕಳೆದುಕೊಂಡ ಪಠಾಣ್ ತಂಡದಿಂದ ಸ್ಥಾನವನ್ನೇ ಕಳೆದುಕೊಂಡಿದ್ದರು.

ಇರ್ಫಾನ್ ಹೊರಬೀಳಲು ಚಾಪೆಲ್ ಕಾರಣ!

ಇರ್ಫಾನ್ ಹೊರಬೀಳಲು ಚಾಪೆಲ್ ಕಾರಣ!

ಇದಾದ ಬಳಿಕ ಇರ್ಫಾನ್ ಪಠಾಣ್ ತಂಡದಿಂದ ಹೊರ ಬಿದ್ದಾಗ ಗ್ರೇಗ್ ಚಾಪೆಲ್ ಅವರ ನಿರ್ಧಾರದಿಂದಾಗಿಯೇ ಇರ್ಫಾನ್ ಪಠಾಣ್ ಬೌಲಿಂಗ್ ಬ್ಯಾಟಿಂಗ್ ವಿಫಲರಾದರು. ಇದಕ್ಕೆ ಚಾಪೆಲ್ ಅವರೇ ಕಾರಣ ಎಂಬ ಮಾತುಗಳು ತಜ್ಞರು ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು

ಸರಣಿ ವೈಟ್‌ವಾಶ್; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸಮೀಪಕ್ಕೆ ಆಸ್ಟ್ರೇಲಿಯಾ

ನಿವೃತ್ತಿಯ ಬಳಿಕ ಸ್ಪಷ್ಟನೆ ನೀಡಿದ ಪಠಾಣ್

ನಿವೃತ್ತಿಯ ಬಳಿಕ ಸ್ಪಷ್ಟನೆ ನೀಡಿದ ಪಠಾಣ್

ನಿವೃತ್ತಿಯ ಸಂದರ್ಭದಲ್ಲಿ ಸ್ವತಃ ಇರ್ಫಾನ್ ಪಠಾಣ್ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದರು. ತಂಡದಿಂದ ಕೈ ಬಿಡಲು ಗ್ರೆಗ್ ಚಾಪೆಲ್ ಕಾರಣ ಎಂಬ ವಿಚಾರಕ್ಕೆ ಪಠಾಣ್ ಕೆಲ ವಿಚಾರಗಳನ್ನು ಮರೆಮಾಚಲು ಆ ರೀತಿ ಸುದ್ದಿಯನ್ನು ಪ್ರಚಾರಮಾಡಲಾಯಿತು ಎಂದು ಚಾಪೆಲ್ ಅವರ ಪರವಹಿಸಿ ಮಾತನಾಡಿದ್ದರು.

ತಂಡವನ್ನು ಇಬ್ಭಾಗ ಮಾಡಿದ್ರಾ ಚಾಪೆಲ್

ತಂಡವನ್ನು ಇಬ್ಭಾಗ ಮಾಡಿದ್ರಾ ಚಾಪೆಲ್

ಲೆಜೆಂಡರಿ ಆಟಗಾರ ಸಚಿನ್ ತೆಂಡೂಲ್ಕರ್, ಟೀಮ್ ಇಂಡಿಯಾದ ಅಂದಿನ ನಾಯಕ ಸೌರವ್ ಗಂಗೂಲಿಯವರ ಮೇಲೆ ಸೇರಿದಂತೆ ಆರೋಪಗಳನ್ನು ಮಾಡಿ ವಿವಾದಕ್ಕೆ ಕಾರಣರಾಗದ್ದರು. ಟೀಮ್ ಇಂಡಿಯಾದ ಅಂದಿನ ನಾಯಕ ಸೌರವ್ ಗಂಗೂಲಿಯನ್ನು ತಂಡದಿಂದ ಕೈ ಬಿಡುವಂತೆ ಮಾಡಲು, ತಂಡದಲ್ಲಿ ಆಟಗಾರರ ಮಧ್ಯೆ ಭಿನ್ನಮತ ಮೂಡುವಂತೆ ಮೂಡಲು ಕಾರಣರಾಗಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು.

Story first published: Tuesday, January 7, 2020, 16:41 [IST]
Other articles published on Jan 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X