ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾಸಿಮ್ ಜಾಫರ್ ಈ ತಮಾಷೆಯ ಮೀಮ್‌ ಹಿಂದೆ ಗಂಭೀರ ಕತೆಯಿದೆ!

Former India cricketer Wasim Jaffer leaves Twitter in splits with special meme

ನವದೆಹಲಿ: ಭಾರತದ ಮಾಜಿ ಬ್ಯಾಟ್ಸ್‌ಮನ್‌ ವಾಸಿಮ್ ಜಾಫರ್ ತನ್ನ ಬ್ಯಾಟಿಂಗ್‌ ಶಕ್ತಿಗಾಗಿ ಹೆಚ್ಚು ಹೆಸರಾದವರು. 260 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 19,410 ರನ್ ದಾಖಲೆ ಜಾಫರ್ ಹೆಸರಿನಲ್ಲಿದೆ. ಟೀಮ್ ಇಂಡಿಯಾ ಪರ ಕೂಡ ಜಾಫರ್ 31 ಟೆಸ್ಟ್‌ ಪಂದ್ಯಗಳನ್ನಾಡಿ 1944 ರನ್ ಗಳಿಸಿದ್ದಾರೆ. ಬ್ಯಾಟಿಂಗ್‌ ವಿಚಾರಕ್ಕೆ ಸುದ್ದಿಗಾಗುತ್ತಿದ್ದ ಜಾಫರ್ ಈಗೀಗ ತಮಾಷೆಯ ಮೀಮ್ಸ್‌ಗಾಗಿ ಗಮನ ಸೆಳೆಯತೊಡಗಿದ್ದಾರೆ.

ಪುರುಷ-ಮಹಿಳೆಯರ ಸೇರಿಸಿದ ಭಾರತದ ಅತ್ಯುತ್ತಮ ಟಿ20 XI ಹೇಗಿದೆ ನೋಡಿ!ಪುರುಷ-ಮಹಿಳೆಯರ ಸೇರಿಸಿದ ಭಾರತದ ಅತ್ಯುತ್ತಮ ಟಿ20 XI ಹೇಗಿದೆ ನೋಡಿ!

ಮೈದಾನದಲ್ಲೂ ತಮಾಷೆಯಾಗಿರುತ್ತಿದ್ದ ವಾಸಿಮ್ ಜಾಫರ್ ಈಗ ವಿಭಿನ್ನ ಮೀಮ್‌ಗಾಗಿ ಸಾಮಾಜಿಕ ಜಾಲತಾಣಿಗರ ಗಮನ ತನ್ನತ್ತ ಹಸಿಕೊಂಡಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಅತೀ ತಮಾಷೆಯೆನಿಸುವ ಮೀಮ್‌ಗಳನ್ನು ಟ್ವಿಟರ್‌ನಲ್ಲಿ ಹಾಕಿಕೊಳ್ಳುತ್ತಿರುವ ಜಾಫರ್ ಈ ಬಾರಿಯೂ ಭಿನ್ನ ಮೀಮ್‌ ಪೋಸ್ಟ್‌ ಮಾಡಿದ್ದಾರೆ.

WTCಗೆ ಸಂಬಂಧಿಸಿ ಮೀಮ್

WTCಗೆ ಸಂಬಂಧಿಸಿ ಮೀಮ್

ಮೇ 24ರ ಸೋಮವಾರ ಟ್ವಿಟರ್‌ನಲ್ಲಿ ಒಂದು ತಮಾಷೆಯ ಮೀಮ್‌ ಅನ್ನು ವಾಸಿಮ್ ಜಾಫರ್ ಪೋಸ್ಟ್‌ ಮಾಡಿದ್ದಾರೆ. ಈ ಮೀಮ್‌ ಮುಂಬರಲಿರುವ ಭಾರತ-ನ್ಯೂಜಿಲೆಂಡ್‌ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಸಂಬಂಧಿಸಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಅಂಪೈರಿಂಗ್ ಯಾರು ಮಾಡಬೇಕು ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಜಾಫರ್ ಮೀಮ್ ತಯಾರಿಸಿದ್ದಾರೆ.

ಬೇಕು/ಬೇಡ ಎಂದು ತಮಾಷೆ

ಬೇಕು/ಬೇಡ ಎಂದು ತಮಾಷೆ

ಜಾಫರ್ ಹಾಕಿಕೊಂಡಿರುವ ಪೋಸ್ಟ್‌ನಲ್ಲಿ ಬೇಕು, ಬೇಡ ಎಂಬುದಕ್ಕೆ ವೈರಲ್ ಆಗಿದ್ದ ವ್ಯಕ್ತಿಯ ಶೈಲಿಯಲ್ಲಿ ಜಾಫರ್ ಕೂಡ ಪೋಸ್ ನೀಡಿದ್ದಾರೆ. ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಅಂಪೈರಿಂಗ್‌ಗೆ ಸಂಬಂಧಿಸಿ ಇಬ್ಬರು ಜನಪ್ರಿಯ ಅಂಪೈರ್‌ಗಳ ಚಿತ್ರ ಹಾಕಿಕೊಂಡಿದ್ದಾರೆ. ಮೇಲಿನ ಚಿತ್ರದಲ್ಲಿ ಇಂಗ್ಲೆಂಡ್‌ನ ಅಂಪೈರ್ ರಿಚರ್ಡ್ ಕೆಟಲ್ಬರೋ ಇದ್ದರೆ, ಕೆಳಗಿನ ಚಿತ್ರದಲ್ಲಿ ಶ್ರೀಲಂಕಾದ ಅಂಪೈರ್ ಕುಮಾರ್ ಧರ್ಮಸೇನಾ ಅವರ ಚಿತ್ರವಿದೆ. ಕೆಟಲ್ಬರೋ ಅಂಪೈರಿಂಗ್ ಬೇಡ, ಧರ್ಮಸೇನಾ ಅಂಪೈರಿಂಗ್ ಇರಲಿ ಎಂಬರ್ಥದಲ್ಲಿ ಹೀಗೆ ತಮಾಷೆ ಮಾಡಲಾಗಿದೆ.

ಮೀಮ್ ಹಿಂದಿದೆ ಗಂಭೀರ ಕತೆ!

ಮೀಮ್ ಹಿಂದಿದೆ ಗಂಭೀರ ಕತೆ!

ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರಿಚರ್ಡ್ ಕೆಟಲ್ಬರೋ ಅಂಪೈರಿಂಗ್ ಬೇಡ, ಧರ್ಮಸೇನಾ ಅಂಪೈರ್ ಬೇಕು ಎಂದ ಜಾಫರ್ ತಮಾಷೆಯಾಗಿ ತಯಾರಿಸಿರುವ ಈ ಮೀಮ್‌ ಹಿಂದೆ ಒಂದು ಗಂಭೀರ ಕತೆಯಿದೆ. ಅದೇನೆಂದರೆ ರಿಚರ್ಡ್ ಕೆಟಲ್ಬರೋ ಅಂಪೈರ್ ಆಗಿದ್ದ ಐಸಿಸಿ ಪ್ರಮುಖ ಪಂದ್ಯಗಳಲ್ಲಿ ಭಾರತ ಗೆದ್ದಿದ್ದೇ ಇಲ್ಲ.

ಕುತೂಹಲಕಾರಿ ಕಾರಣ ಇಲ್ಲಿದೆ

ಕುತೂಹಲಕಾರಿ ಕಾರಣ ಇಲ್ಲಿದೆ

ರಿಚರ್ಡ್ ಕೆಟಲ್ಬರೋ ಅಂಪೈರ್‌ ಆಗಿದ್ದ 2014ರ ಟಿ20 ವಿಶ್ವಕಪ್‌ ಫೈನಲ್‌ (ಶ್ರೀಲಂಕಾ ವಿರುದ್ಧ), 2015ರಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್‌ ಸೆಮಿಫೈನಲ್, 2017ರಲ್ಲಿ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ, 2019ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ ಇದರಲ್ಲಿ ಯಾವುದರಲ್ಲೂ ಭಾರತ ಗೆದ್ದಿಲ್ಲ. ಅದೇ ಧರ್ಮಸೇನಾ ಅವರು ಇಂಗ್ಲೆಂಡ್-ನ್ಯೂಜಿಲೆಂಡ್ 2019ರ ವಿಶ್ವಕಪ್‌ ಫೈನಲ್‌ನಲ್ಲಿ 4 ಓವರ್ ಥ್ರೋ ರನ್ ಕೊಡುಗೆ ನೀಡಿದ್ದರು.

Story first published: Tuesday, May 25, 2021, 17:12 [IST]
Other articles published on May 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X