ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಕೊಹ್ಲಿ ನಿರ್ಧಾರಕ್ಕೆ ಮಾಜಿ ಆಟಗಾರರ ಅಸಮಾಧಾನ

Former India players give thumbs down to Kohlis number four move

ಟೀಮ್ ಇಂಡಿಯಾ ಅಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲುಕಂಡಿದೆ. ಆಸ್ಟ್ರೇಲಿಯಾ ತಂಡದ ಸಂಘಟಿತ ಹೋರಾಟಕ್ಕೆ ಎಲ್ಲೂ ಸರಿಯಾದ ಪ್ರತ್ಯುತ್ತರ ನೀಡದ ಟೀಮ್ ಇಂಡಿಯಾ ತಲೆಬಾಗಿದೆ. ಈ ಮಧ್ಯೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೆಗೆದುಕೊಂಡ ಒಂದು ನಿರ್ಧಾರಕ್ಕೆ ಟೀಮ್ ಇಂಡಿಯಾದ ಮಾಜಿ ಆಟಗಾರರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಹೌದು, ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುವ ನಿರ್ಧಾರವನ್ನು ಮಾಡಿದ್ದರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ರಾಹುಲ್ ಈ ಮೂವರೂ ಉತ್ತಮ ಫಾರ್ಮ್‌ನಲ್ಲಿದ್ದರಿಂದ ತಾನು ಒಂದು ಸ್ಥಾನ ಕೆಳ ಕ್ರಮಾಂಕದಲ್ಲಿ ಬರಲು ಸಿದ್ಧ ಎಂದು ಪಂದ್ಯದ ಆರಂಭಕ್ಕೂ ಮುನ್ನವೇ ಕೊಹ್ಲಿ ತಿಳಿಸಿ ಅದರಂತೇ ನಾಲ್ಕನೇ ಕ್ರಮಾಂಕದಲ್ಲಿ ಪಂದ್ಯದಲ್ಲಿ ಆಡಿದ್ದರು.

ಪಾಕಿಸ್ತಾನ ದಂತಕತೆಗೆ ಕೊಹ್ಲಿಗಿಂತ ಮತ್ತೊಬ್ಬನ ಆಟ ಹೆಚ್ಚು ಇಷ್ಟವಂತೆ!ಪಾಕಿಸ್ತಾನ ದಂತಕತೆಗೆ ಕೊಹ್ಲಿಗಿಂತ ಮತ್ತೊಬ್ಬನ ಆಟ ಹೆಚ್ಚು ಇಷ್ಟವಂತೆ!

ಟೀಮ್ ಇಂಡಿಯಾ ನಾಯಕನ ಈ ನಿರ್ಧಾರ ಮಾಜಿ ಆಟಗಾರರ ಅಸಮಾದಾನಕ್ಕೆ ಕಾರಣವಾಗಿದೆ. ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್ ಮತ್ತು ಸಂಜಯ್ ಮಂಜೇರ್ಕರ್ ವಿರಾಟ್ ಕೊಹ್ಲಿಯ ಈ ತೀರ್ಮಾನ ಸರಿಯಾದ ನಿರ್ಧಾರವಲ್ಲ ಎಂದಿದ್ದಾರೆ.

ಕೆಟ್ಟ ನಿರ್ಧಾರವೆಂದ ಲಕ್ಷ್ಮಣ್

ಕೆಟ್ಟ ನಿರ್ಧಾರವೆಂದ ಲಕ್ಷ್ಮಣ್

ಈ ನಿರ್ಧಾರ ಸರಿಯಾಗಿದೆ ಎಂದು ನನಗೆ ಅನಿಸುತ್ತಿಲ್ಲ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಕೊಹ್ಲಿ ತಮ್ಮ ಕ್ರಮಾಂಕದಲ್ಲು ಬದಲಾವಣೆ ಮಾಡದೆ ಕೆಎಲ್ ರಾಹುಲ್‌ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಇಳಿಸುವ ನಿರ್ಧಾರವನ್ನು ಮಾಡಬಹುದಾಗಿತ್ತು ಎಂದಿದ್ದಾರೆ.

ಹರ್ಭಜನ್‌ಗೂ ಇಷ್ಟವಾಗದ ನಿರ್ಧಾರ

ಹರ್ಭಜನ್‌ಗೂ ಇಷ್ಟವಾಗದ ನಿರ್ಧಾರ

ಹರ್ಭಜನ್ ಸಿಂಗ್‌ ಕೂಡ ಇದೇ ರಿತಿಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿರುವ ವಿರಾಟ್ ಕೊಹ್ಲಿ ತಮ್ಮ ಕ್ರಮಾಂಕವನ್ನು ಬದಲಾವಣೆ ಮಾಡದೆ ಅದೇ ಕ್ರಮಾಂಕದಲ್ಲಿ ಮುಂದುವರಿಯಬೇಕು, ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿದ್ದಾರೆ ಅದನ್ನು ಬದಲಾಯಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಮಂಜ್ರೆಕರ್ ಅಪಸ್ವರ

ಮಂಜ್ರೆಕರ್ ಅಪಸ್ವರ

ಟೀಮ್ ಇಂಡಿಯಾದ ಮತ್ತೋರ್ವ ಮಾಜಿ ಆಟಗಾರ ಸಂಜಯ್ ಮಂಜ್ರೆಕರ್ ಅಪಸ್ವರ ಹೇಳಿಕೆ ನೀಡಿದ್ದಾರೆ. ಐದನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್‌ ಅವರನ್ನು ಕಣಕ್ಕಿಳಿಸಿದ್ದು ಉತ್ತಮ ನಿರ್ಧಾರವಲ್ಲ. ನಾಲ್ಕನೇ ಕ್ರಮಾಂಕದಲ್ಲಿ ನೆಲೆಯಾಗಲು ಸಮಯವನ್ನು ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ.

ಕೊಹ್ಲಿ ವೈಫಲ್ಯ:

ಕೊಹ್ಲಿ ವೈಫಲ್ಯ:

ನಾಲ್ಕನೇ ಕ್ರಮಾಂಕದಲ್ಲಿ ಆಡಲು ಕಣಕ್ಕಿಳಿದ ವಿರಾಟ್ ಕೊಹ್ಲಿ ಕಳಪೆ ಆಟವನ್ನು ಪ್ರದರ್ಶಿಸಿದರು.14 ಎಸೆತ ಎದುರಿಸಿದ ವಿರಾಟ್ ಕೊಹ್ಲಿ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಐಯ್ಯರ್ ಕೂಡ ವಿಫಲರಾದರು. 9 ಎಸೆತ ಎದುರಿಸಿದ ಶ್ರೇಯಸ್ ಐಯ್ಯರ್ ಕೇವಲ 4 ರನ್ ಮಾತ್ರವೇ ಗಳಿಸಿ ನಿರಾಸೆ ಉಂಟುಮಾಡಿದರು.

Story first published: Wednesday, January 15, 2020, 12:28 [IST]
Other articles published on Jan 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X