ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಂಜಯ್ ಮಂಜ್ರೇಕರ್ ಬೆಂಬಲಕ್ಕೆ ನಿಂತ ಭಾರತದ ಮಾಜಿ ವಿಕೆಟ್‌ ಕೀಪರ್

Former India wicket-keeper urges BCCI to reconsider Sanjay Manjrekar decision

ಮುಂಬೈ, ಮಾರ್ಚ್ 19: ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಚಂದ್ರಕಾಂತ್ ಪಂಡಿತ್, ಇತ್ತೀಚೆಗಷ್ಟೇ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಲ್ಪಟ್ಟ ಸಂಜಯ್ ಮಂಜ್ರೇಕರ್ ಬೆಂಬಲಕ್ಕೆ ನಿಂತಿದ್ದಾರೆ. ಮಂಜ್ರೇಕರ್ ಯಾರ ವಿರುದ್ಧವೂ ಇಲ್ಲ ಎಂದು ಪಂಡಿತ್ ಹೇಳಿದ್ದಾರೆ. ಮಂಜ್ರೇಕರ್ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದ ಕಿತ್ತೊಗೆದಿದ್ದ ಬಿಸಿಸಿಐ ಅದಕ್ಕೆ ಯಾವುದೇ ಕಾರಣವನ್ನು ಹೇಳಿಕೊಂಡಿರಲಿಲ್ಲ.

ಕೊರೊನಾ ವೈರಸ್ : ವಿಚಿತ್ರ ಅವತಾರದಲ್ಲಿಕೊರೊನಾ ವೈರಸ್ : ವಿಚಿತ್ರ ಅವತಾರದಲ್ಲಿ"stay At Home" ಚಾಲೆಂಜ್ ಸ್ವೀಕರಿಸಿದ ಕ್ರಿಸ್ ಗೇಲ್: ವಿಡಿಯೋ

ಕೆಲವಾರು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿದ್ದ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಸಂಜಯ್ ಮಂಜ್ರೇಕರ್ ಸಾಮನ್ಯವಾಗಿ ಬಿಸಿಸಿಐ ಕಾಮೆಂಟರಿ ಪ್ಯಾನೆಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಬಾರಿಯ ಐಪಿಎಲ್‌ ವೇಳೆಯೂ ಮಂಜ್ರೇಕರ್, ಕಾಮೆಂಟರಿ ಪ್ಯಾನೆಲ್‌ನಲ್ಲಿ ಕಾಣಿಸಿಕೊಳ್ಳುವುದರಲ್ಲಿದ್ದರು.

ಆವತ್ತು ಕೊಹ್ಲಿ 'ಪಂಚಿಂಗ್ ಬ್ಯಾಗ್‌'ನಂತೆ ಅನ್ನಿಸಿತ್ತು ಎಂದ ಆಸೀಸ್ ಕೋಚ್!ಆವತ್ತು ಕೊಹ್ಲಿ 'ಪಂಚಿಂಗ್ ಬ್ಯಾಗ್‌'ನಂತೆ ಅನ್ನಿಸಿತ್ತು ಎಂದ ಆಸೀಸ್ ಕೋಚ್!

ಆದರೆ ಬಿಸಿಸಿಐಯು ಮಂಜ್ರೇಕರ್ ಅವರನ್ನು ಪ್ಯಾನೆಲ್‌ನಿಂದ ಹೊರಗಿಟ್ಟಿದ್ದು ಮಾಜಿ ಆಟಗಾರ ಚಂದ್ರಕಾಂತ್‌ಗೆ ಸರಿಕಂಡಿಲ್ಲ.

ಧರ್ಮಶಾಲಾದಲ್ಲಿ ಮಂಜ್ರೇಕರ್ ಇರಲಿಲ್ಲ

ಧರ್ಮಶಾಲಾದಲ್ಲಿ ಮಂಜ್ರೇಕರ್ ಇರಲಿಲ್ಲ

ಧರ್ಮಶಾಲಾದಲ್ಲಿ ನಡೆದಿದ್ದ ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಸಂಜಯ್, ಬಿಸಿಸಿಐ ಕಾಮೆಂಟರಿ ಪ್ಯಾನೆಲ್‌ನಲ್ಲಿ ಇರಲಿಲ್ಲ. ಆ ವೇಳೆ ಕಾಮೆಂಟರಿ ಪ್ಯಾನೆಲ್‌ನ ಸುನಿಲ್ ಗವಾಸ್ಕರ್, ಲಕ್ಷ್ಮಣ್ ಶಿವರಾಮಕೃಷ್ಣನ್ ಮತ್ತು ಮುರಳಿ ಕಾರ್ತಿಕ್ ಉಪಸ್ಥಿತರಿದ್ದರು. ಆದರೆ ಆ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಸತ್ಯ ಹೇಳುವವರು ಇಷ್ಟವಾಗೋಲ್ಲ

ಸತ್ಯ ಹೇಳುವವರು ಇಷ್ಟವಾಗೋಲ್ಲ

'ನಾನು ಆತನನ್ನು (ಮಂಜ್ರೇಕರ್) ಚಿಕ್ಕವನಿದ್ದಾಗಿನಿಂದ ನೋಡುತ್ತಿದ್ದೇನೆ. ಇನ್ನೊಬ್ಬರಿಗೆ ತೊಂದರೆ ಮಾಡುವನಲ್ಲ ಆತ. ಆನನಲ್ಲಿ ನಾನು ಯಾವಾಗಲೂ ಮೆಚ್ಚಿಕೊಳ್ಳುವ ಗುಣವೆಂದರೆ ಆತ ಏನಿದ್ದರೂ ನೇರವಾಗಿ ಹೇಳಿಕೊಳ್ಳುವ ವ್ಯಕ್ತಿ. ನಮ್ಮೆದುರಿಗೆ ಸತ್ಯವನ್ನೇ ಹೇಳುವ ವ್ಯಕ್ತಿ ಎಲ್ಲರಿಗೂ ಇಷ್ಟವಾಗುವುದಿಲ್ಲ,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ ಪಂಡಿತ್ ಹೇಳಿದ್ದಾರೆ.

ಬಿಸಿಸಿಐ ನಿರ್ಧಾರ ಮರು ಪರಿಶೀಲಿಸಲಿ

ಬಿಸಿಸಿಐ ನಿರ್ಧಾರ ಮರು ಪರಿಶೀಲಿಸಲಿ

'ಕಾಮೆಂಟೇಟರ್ ಆಗಿರುವಾಗ ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ಸಂಗತಿಗಳು ಹೇಳಿಹೋಗುತ್ತದೆ. ಬಹುಶಃ ಅದು ಎಲ್ಲರಿಗೂ ಇಷ್ಟವಾಗದಿರಬಹುದು. ಅದರರ್ಥ ಆತ ಬೇಕೆಂದೇ ಹೇಳಿದ್ದಾನೆ ಎಂದಲ್ಲ. ಕಾಮೆಂಟೇಟರ್ ಆಗಿ ಆತ ತನ್ನ ಕೆಲಸ ಮಾಡುತ್ತಾನಷ್ಟೆ. ಹಾಗಂತ ಆತನನ್ನು ಪ್ಯಾನೆಲ್‌ನಿಂದ ಕಿತ್ತು ಹಾಕಿರುವುದಕ್ಕೆ ನಾನು ಯಾರನ್ನೂ ದೂಷಿಸುವುದಿಲ್ಲ. ಆದರೆ ಬಿಸಿಸಿಐ ತನ್ನ ನಿರ್ಧಾರ ಮರು ಪರಿಶೀಲಿಸಬೇಕೆಂದು ಕೋರುತ್ತಿದ್ದೇನೆ,' ಎಂದು ಪಂಡಿತ್ ವಿನಂತಿಸಿದ್ದಾರೆ.

ಭಾರತ ಪರ ಬ್ಯಾಟಿಂಗ್, ಕೀಪಿಂಗ್

ಭಾರತ ಪರ ಬ್ಯಾಟಿಂಗ್, ಕೀಪಿಂಗ್

ಮುಂಬೈ ಮೂಲದ, 58ರ ಹರೆಯದವರಾದ ಚಂದ್ರಕಾಂತ್ ಪಂಡಿತ್, ಟೀಮ್ ಇಂಡಿಯಾ ಪರ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಮಾಡುತ್ತಿದ್ದವರು. 8 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 171 ರನ್, 23 ಏಕದಿನ ಇನ್ನಿಂಗ್ಸ್‌ಗಳಲ್ಲಿ 290 ರನ್, 138 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 48.57 ಸರಾಸರಿಯಲ್ಲಿ 8,209 ರನ್ ದಾಖಲೆ ಹೊಂದಿದ್ದಾರೆ.

Story first published: Thursday, March 19, 2020, 17:10 [IST]
Other articles published on Mar 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X