ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅನಿಲ್ ಕುಂಬ್ಳೆ ನಾಯಕರಾದ ಮೇಲೆ ನನ್ನ ಕ್ರಿಕೆಟ್ ಜೀವನಕ್ಕೆ ಉತ್ತೇಜನ ಸಿಕ್ಕಿತು: ಸೆಹ್ವಾಗ್

Sehwag
Virat Kohli ಕ್ಯಾಪ್ಟನ್ ಆದಾಗ ಏನ್ ಮಾಡಿದ್ರು ಗೊತ್ತಾ! | #cricket | Oneindia Kannada

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಬಾರಿ ತ್ರಿಶಕ ಸಿಡಿಸಿರುವ ಭಾರತದ ಆಟಗಾರ ಸೆಹ್ವಾಗ್ ತನ್ನ ವೃತ್ತಿ ಜೀವನದಲ್ಲಿ ಎದುರಿಸಿದ ಕಠಿಣ ಕ್ಷಣಗಳನ್ನ ನೆನಪಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನದೇ ಶೈಲಿಯಲ್ಲಿ ಬ್ಯಾಟಿಂಗ್ ಆಡುತ್ತಿದ್ದ ಸೆಹ್ವಾಗ್ ಫಾರ್ಮ್ ವೈಫಲ್ಯ ಅನುಭವಿಸಿದ್ದರು.

ಫಾರ್ಮ್ ವೈಫಲ್ಯದ ಸಂದರ್ಭದಲ್ಲಿ ಅದೇ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅವಕಾಶ ಸಿಗದೆ ಹೊರಗುಳಿದಿದ್ದರು. ಈ ಸಂದರ್ಭದಲ್ಲಿ ಜಂಭೋ ಖ್ಯಾತಿಯ ಅನಿಲ್‌ ಕುಂಬ್ಳೆ ನಾಯಕತ್ವ ವಹಿಸಿಕೊಂಡ ಬಳಿಕ ತನ್ನ ವೃತ್ತಿ ಜೀವನದಲ್ಲಾದ ಬದಲಾವಣೆ ಕುರಿತು ಸೆಹ್ವಾಗ್ ಮಾತನಾಡಿದ್ದಾರೆ. ಸೆಹ್ವಾಗ್ ಅವರ ಕ್ರಿಕೆಟ್ ಪಯಣದ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಎರಡು ತ್ರಿಶತಕ ದಾಖಲಿಸಿದ ನನ್ನನ್ನು ಟೆಸ್ಟ್ ತಂಡದಿಂದ ಕೈ ಬಿಟ್ಟರು

ಎರಡು ತ್ರಿಶತಕ ದಾಖಲಿಸಿದ ನನ್ನನ್ನು ಟೆಸ್ಟ್ ತಂಡದಿಂದ ಕೈ ಬಿಟ್ಟರು

ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕ ದಾಖಲಿಸಿರುವ ನನ್ನನ್ನು ಟೆಸ್ಟ್ ತಂಡದಿಂದ ಕೈಬಿಡಲಾಗುವುದು ಎಂದು ನಾನು ಭಾವಿಸಿರಲಿಲ್ಲ. ಅವರು(ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ) ನನ್ನನ್ನು ತಂಡದಿಂದ ತೆಗೆದುಹಾಕಿದರು. ಅವರು ನನಗೆ ಬೆಂಬಲ ನೀಡಲು ಅವಕಾಶ ನೀಡಿದ್ದರೆ ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಗಳಿಸುತ್ತಿದ್ದೆ. ನನ್ನ ಕ್ರಿಕೆಟ್ ಕೆರಿಯರ್ ಮುಗಿಯಬೇಕಿತ್ತು ಎಂದು ರಾಹುಲ್ ದ್ರಾವಿಡ್ ನಾಯಕತ್ವದ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.

ಅನಿಲ್ ಕುಂಬ್ಳೆ ನನಗೆ ಸಾಕಷ್ಟು ಸಹಾಯ ಮಾಡಿದರು

ಅನಿಲ್ ಕುಂಬ್ಳೆ ನನಗೆ ಸಾಕಷ್ಟು ಸಹಾಯ ಮಾಡಿದರು

ಅನಿಲ್ ಕುಂಬ್ಳೆ ನಾಯಕರಾದ ನಂತರವೇ ನನ್ನ ಕ್ರಿಕೆಟ್ ಜೀವನಕ್ಕೆ ಉತ್ತೇಜನ ಸಿಕ್ಕಿತು. ಆಸ್ಟ್ರೇಲಿಯಾ ಪ್ರವಾಸದ ಮೊದಲ 2 ಟೆಸ್ಟ್‌ಗಳಲ್ಲಿ ನನಗೆ ಅವಕಾಶ ನೀಡಲಿಲ್ಲ. 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ತರಬೇತಿ ಪಂದ್ಯ ನಡೆದಿತ್ತು. ಈ ವೇಳೆ ನನ್ನೊಂದಿಗೆ ಮಾತನಾಡಿದ ಕುಂಬ್ಳೆ, ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರೆ ಮುಂದಿನ ಪಂದ್ಯದಲ್ಲಿ ಆಡುವ ಅವಕಾಶ ನೀಡುವುದಾಗಿ ಹೇಳಿದ್ದರು ಎಂದು ಸೆಹ್ವಾಗ್ ಕುಂಬ್ಳೆಯನ್ನು ನೆನೆದರು.

ಅತ್ಯಂತ ಕಠಿಣ ಇನ್ನಿಂಗ್ಸ್‌ ನೆನೆದ ಸೆಹ್ವಾಗ್

ಅತ್ಯಂತ ಕಠಿಣ ಇನ್ನಿಂಗ್ಸ್‌ ನೆನೆದ ಸೆಹ್ವಾಗ್

ಆದರೆ ಆ ಪಂದ್ಯದಲ್ಲಿ ಸೆಹ್ವಾಗ್ ಬಾರಿಸಿದ ಶತಕದಿಂದಾಗಿ ಅವರಿಗೆ ಪರ್ತ್ ಟೆಸ್ಟ್ ನಲ್ಲಿ ಅವಕಾಶ ನೀಡಿತು. ನಂತರದ ಅಡಿಲೇಡ್ ಟೆಸ್ಟ್‌ನಲ್ಲಿ ಸೆಹ್ವಾಗ್ ಮೊದಲ ಇನ್ನಿಂಗ್ಸ್‌ನಲ್ಲಿ 63 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 151 ರನ್ ಗಳಿಸಿದರು. ಸೆಹ್ವಾಗ್ ಅವರು ತಮ್ಮ ಜೀವನದ ಅತ್ಯಂತ ಕಠಿಣ 63 ರನ್ ಗಳಿಸಿದರು ಎಂದು ನೆನಪಿಸಿಕೊಂಡಿದ್ದಾರೆ.

ಕುಂಬ್ಳೆ ಕುರಿತು ಹೊಗಳಿದ ಸೆಹ್ವಾಗ್‌

ಕುಂಬ್ಳೆ ಕುರಿತು ಹೊಗಳಿದ ಸೆಹ್ವಾಗ್‌

ನಾನು ತುಂಬಾ ಒತ್ತಡದಲ್ಲಿದ್ದೆ, ಈ ವೇಳೆ ಇದನ್ನು ಹೋಗಲಾಡಿಸಲು ನಾನು ಅಂಪೈರ್‌ನೊಂದಿಗೆ ಮಾತನಾಡುತ್ತಿದ್ದೆ ಮತ್ತು ನನ್ನ ನೆಚ್ಚಿನ ಹಾಡನ್ನು ಗುನುಗುತ್ತಾ ನಗುತ್ತಾ ಆಡುತ್ತಿದ್ದೆ. ಅನಿಲ್ ಬಾಯ್ ನನ್ನ ಮೇಲೆ ಇಟ್ಟಿದ್ದ ನಂಬಿಕೆ ಉಳಿಸಿಕೊಳ್ಳಲು ಆಡಿದ್ದೇನೆ ಎಂದರು. ಸೈಮಂಡ್ಸ್ ಮಂಕಿಗೇಟ್‌ ವಿಚಾರದಲ್ಲಿ ಕುಂಬ್ಳೆ ನಾಯಕನಾಗಿ ಮಿಂಚಿದ್ದರು. ಕುಂಬ್ಳೆ ಮಾತ್ರ ಇಲ್ಲದಿದ್ದರೆ ಆ ಸರಣಿ ನಡೆಯುತ್ತಿರಲಿಲ್ಲ. ಹರ್ಭಜನ್ ಅವರ ಕ್ರಿಕೆಟ್ ಜೀವನ ಬೇಗ ಮುಗಿಯುತ್ತಿತ್ತು ಎಂದು ಹೇಳಿದ್ದಾರೆ.

Story first published: Wednesday, May 25, 2022, 23:51 [IST]
Other articles published on May 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X