ಮಾಜಿ ಕ್ರಿಕೆಟಿಗ ಬಿ ವಿಜಯಕೃಷ್ಣ ನಿಧನ, ಸಿಎಂ ಯಡಿಯೂರಪ್ಪ ಸಂತಾಪ

ಬೆಂಗಳೂರು: ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗರಾಗಿದ್ದ ಬಿ ವಿಜಯಕೃಷ್ಣ ಹೃದಯಾಘಾತದಿಂದಾಗಿ ಬುಧವಾರ (ಜೂನ್ 16) ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

WTC Final: ಟೀಮ್ ಇಂಡಿಯಾ ಕಾಂಬಿನೇಶನ್ ಸಮಸ್ಯೆಗೆ ಸುನಿಲ್ ಗವಾಸ್ಕರ್ ನೀಡಿದ ಪರಿಹಾರವಿದುWTC Final: ಟೀಮ್ ಇಂಡಿಯಾ ಕಾಂಬಿನೇಶನ್ ಸಮಸ್ಯೆಗೆ ಸುನಿಲ್ ಗವಾಸ್ಕರ್ ನೀಡಿದ ಪರಿಹಾರವಿದು

ತಮ್ಮ 15 ವರ್ಷಗಳ ವೃತ್ತಿ ಜೀವನದಲ್ಲಿ ಅಪ್ರತಿಮ ಆಲ್ ರೌಂಡರ್ ಆಗಿದ್ದ ಬಿ ವಿಜಯಕೃಷ್ಣ ಅವರು 80 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿ 2297 ರನ್ ಗಳನ್ನು ಗಳಿಸಿ 194 ವಿಕೆಟ್ ಗಳನ್ನು ಪಡೆದಿದ್ದರು. ಕರ್ನಾಟಕ ರಣಜಿ ಟ್ರೋಫಿಯನ್ನು ಎರಡು ಬಾರಿ ಗೆಲ್ಲಲು ಅವರು ಪ್ರಮುಖ ಕಾರಣರಾಗಿದ್ದರು ಎಂದು ಯಡಿಯೂರಪ್ಪ ಸ್ಮರಿಸಿದ್ದಾರೆ.

ವಿಜಯಕೃಷ್ಣ ನಿಧನದಿಂದ ಅತ್ಯುತ್ತಮ ಕ್ರಿಕೆಟಿಗನನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮುಖ್ಯಮಂತ್ರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಭಾರತ vs ಇಂಗ್ಲೆಂಡ್ ವುಮೆನ್ಸ್ ಟೆಸ್ಟ್: ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಮೇಲುಗೈಭಾರತ vs ಇಂಗ್ಲೆಂಡ್ ವುಮೆನ್ಸ್ ಟೆಸ್ಟ್: ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಮೇಲುಗೈ

1970s & 1980ರ ವೇಳೆ ಕರ್ನಾಟಕ ಕ್ರಿಕೆಟ್‌ ಬೆಳೆಯುವಲ್ಲಿ ವಿಜಯಕೃಷ್ಣ ಪ್ರಮುಖ ಕಾರಣರಾಗಿದ್ದರು. ಪ್ರತಿಭಾವಂತ ಕ್ರಿಕೆಟರ್ ಆಗಿದ್ದರೂ ಟೀಮ್ ಇಂಡಿಯಾದಲ್ಲಿ ಆಡಲು ಅವಕಾಶ ಸಿಗದ ಆಟಗಾರರ ಸಾಲಿನಲ್ಲಿ ವಿಜಯಕೃಷ್ಣ ಅವರೂ ಒಬ್ಬರಾಗಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, June 17, 2021, 10:05 [IST]
Other articles published on Jun 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X