ಭಾರತದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್‌ಗೆ ಕೊರೊನಾ ವೈರಸ್ ದೃಢ

Former Indian Cricketer Chetan Chauhan Tests Positive For Coronavirus

ಕೊರೊನಾ ವೈರಸ್ ಹಾವಳಿ ದೇಶವನ್ನು ಇನ್ನಿಲ್ಲದಷ್ಟು ಹಿಂಡಿ ಹಿಪ್ಪೆ ಮಾಡುತ್ತಿದೆ. ಭಾರತದ ಮಾಜಿ ಕ್ರಿಕೆಟಿಗ ಚೇತನ್ ಚೌಹಾನ್ ಅವರಿಗೂ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ. ಶುಕ್ರವಾರ ಚೇತನ್ ಚೌಹಾನ್ ಕೊರೊನಾ ವೈರಸ್ ಪರೀಕ್ಷೆಗೆ ಒಳಪಟ್ಟಿದ್ದರು.

ಚೇತನ್ ಚೌಹಾಣ್ ಕುಟುಂಬದ ಇತರ ಸದಸ್ಯರು ಕೂಡ ಕೊರೊನಾ ವೈರಸ್ ಪರೀಕ್ಷೆಗೆ ಒಳಪಟ್ಟಿದ್ದು ಅವರ ಬರದಿ ಇನ್ನಷ್ಟೇ ಬರಬೇಕಿದೆ. ಅವರೆಲ್ಲರೂ ಈಗ ಹೋಮ್‌ ಕ್ವಾರಂಟೈನ್‌ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚೇತನ್ ಚೌಹಾಣ್ ಲಕ್ನೋದ ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

ಮಾಜಿ ಕ್ರಿಕೆಟಿಗರು ಕೊರೊನಾ ವೈರಸ್ ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಚೇತನ್ ಚೌಹಾಣ್ ಮೂರನೆಯವರಾಗಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಸ್ಕಾಟ್ಲೆಂಡ್‌ನ ಮಜೀದ್ ಹಕ್ ಕೂಡ ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಇನ್ನು ಇಂಗ್ಲೆಮಡ್ ಪ್ರವಾಸಕ್ಕೂ ಮುನ್ನ ಪರೀಕ್ಷೆಗೊಳಪಟ್ಟಿದ್ದ ಪಾಕಿಸ್ತಾನದ ಆಟಗಾರರಲ್ಲಿ ಹತ್ತು ಆಟಗಾರರು ಕೊರೊನ ಸೋಂಕಿಗೆ ತುತ್ತಾಗಿದ್ದರು.

ಚೇತನ್ ಚೌಹಾಣ್ 40 ಟೆಸ್ಟ್ ಮತ್ತು 7 ಏಕದಿನ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಟೆಸ್ಟ್‌ನಲ್ಲಿ 31.57ರ ಸರಾಸರಿಯಲ್ಲಿ 2084 ರನ್ ಗಳಿಸಿದ್ದರೆ ಏಕದಿನದಲ್ಲಿ 21.85ರ ಸರಾಸರಿಯಲ್ಲಿ 153 ರನ್ ಗಳಿಸಿದ್ದಾರೆ. ಮಹಾರಾಷ್ಟ್ರ ಮತ್ತು ಡೆಲ್ಲಿ ತಂಡವನ್ನು ರಣಜಿಯಲ್ಲಿ ಪ್ರತಿನಿಧಿಸಿದ್ದು 1981ರಲ್ಲಿ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ವಾರ್ನರ್ or ರೋಹಿತ್: ತನ್ನ ನೆಚ್ಚಿನ ಓಪನಿಂಗ್ ಪಾರ್ಟ್ನರ್ ಹೆಸರಿಸಿದ ರಾಯ್

ಇನ್ನು ಹಿರಿಯ ಕ್ರಿಕೆಟಿಗ ಲಕ್ಷ್ಮೀ ರತನ್ ಶುಕ್ಲಾ ಅವರ ಪತ್ನಿ ಸ್ಮಿತಾ ಸನ್ಯಾಲ್ ಶುಕ್ಲಾಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಪಶ್ಚಿಮ ಬಂಗಾಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉಪಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 39 ವರ್ಷದ ಲಕ್ಷ್ಲೀ ರತನ್ ಶುಕ್ಲಾ ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಕ್ರೀಡಾ ಸಚಿವರೂ ಆಗಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, July 12, 2020, 9:00 [IST]
Other articles published on Jul 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more