ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA T20: ಟೀಂ ಇಂಡಿಯಾದ ಈ ಆಟಗಾರನ ಪ್ರದರ್ಶನದ ಬಗ್ಗೆ ರೀತಿಂದರ್ ಸೋಧಿ ಅಸಮಾಧಾನ

Former Indian cricketer Reetinder Sodhi Unhappy With Harshal Patels Bowling

ಭಾರತದ ಮಾಜಿ ಕ್ರಿಕೆಟಿಗ ರೀತಿಂದರ್ ಸೋಧಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಲ್ ರೌಂಡರ್ ಹರ್ಷಲ್ ಪಟೇಲ್ ಪ್ರದರ್ಶನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕಡಿಮೆ ಮೊತ್ತಕ್ಕೆ ಪತನಗೊಂಡಾಗ ಹರ್ಷಲ್ ಪಟೇಲ್ ಉತ್ತಮವಾಗಿ ಬೌಲಿಂಗ್ ಮಾಡುವ ಮೂಲಕ ಸರಣಿಯನ್ನು ಚೆನ್ನಾಗಿ ಪ್ರಾರಂಭಿಸಿದರು, ಎರಡು ವಿಕೆಟ್‌ಗಳನ್ನು ಪಡೆದರು ಮತ್ತು ಕೇವಲ 26 ರನ್‌ಗಳನ್ನು ಬಿಟ್ಟುಕೊಟ್ಟರು. ಆದರೆ, ಎರಡನೇ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರು. ನಾಲ್ಕು ಓವರ್‌ಗಳಲ್ಲಿ 45 ರನ್‌ಗಳನ್ನು ನೀಡಿದರು ಮತ್ತು ವಿಕೆಟ್ ಪಡೆಯಲು ವಿಫಲರಾದರು.

T20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರT20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರ

ಮಂಗಳವಾರ ಅಕ್ಟೋಬರ್ 4 ಇಂದೋರ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಕೂಡ ಹರ್ಷಲ್ ಪಟೇಲ್ ಕಳಪೆ ಪ್ರದರ್ಶನ ನೀಡಿದರು. ನಾಲ್ಕು ಓವರ್‌ಗಳಲ್ಲಿ ವಿಕೆಟ್ ಪಡೆಯದೆ 49 ರನ್ ನೀಡಿದರು.

ಹರ್ಷಲ್ 2022 ರ ಟಿ 20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ 15 ಜನರ ತಂಡದಲ್ಲಿ ಭಾಗವಾಗಿದ್ದಾರೆ ಮತ್ತು ಟೂರ್ನಮೆಂಟ್‌ನಲ್ಲಿ ಸ್ಲಾಗ್ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ಉತ್ತಮ ಪ್ರದರ್ಶನ ನೀಡಬೇಕೆಂದು ತಂಡ ನಿರೀಕ್ಷೆ ಮಾಡುತ್ತದೆ. ಬೆನ್ನುನೋವಿನಿಂದಾಗಿ ಜಸ್ಪ್ರೀತ್ ಬುಮ್ರಾ ವಿಶ್ವಕಪ್‌ನಿಂದ ಹೊರಗುಳಿದ ನಂತರ ಹರ್ಷಲ್ ಪಟೇಲ್ ಫಾರ್ಮ್ ತಂಡಕ್ಕೆ ಚಿಂತೆ ಮಾಡುತ್ತದೆ.

ಹರ್ಷಲ್ ಪಟೇಲ್ ಬೇಗನೆ ಪಾಠ ಕಲಿಯಲಿ

ಹರ್ಷಲ್ ಪಟೇಲ್ ಬೇಗನೆ ಪಾಠ ಕಲಿಯಲಿ

ರೀತಿಂದರ್ ಸೋಧಿ ಹರ್ಷಲ್ ಪಟೇಲ್‌ ಪ್ರದರ್ಶನದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ. ಅವರ ನಿಧಾನಗತಿಯ ಎಸೆತಗಳಿಂದ ಪ್ರಯೋಜನವಾಗಿಲ್ಲ ಎಂದು ಹೇಳೀದ್ದಾರೆ.

"ಹರ್ಷಲ್ ಪಟೇಲ್ ದೊಡ್ಡ ನಿರಾಸೆಯನ್ನುಂಟುಮಾಡಿದ್ದಾರೆ. ಅವರು ಉತ್ತಮವಾದ ನಿಧಾನಗತಿಯ ಎಸೆತವನ್ನು ಬೌಲ್ ಮಾಡುತ್ತಾರೆ. ಆದರೆ ನೀವು ನಿಮ್ಮ ಅಸ್ತ್ರವನ್ನು ಅತಿಯಾಗಿ ಬಳಸಿದರೆ, ಎದುರಾಳಿ ಬ್ಯಾಟರ್‌ಗಳು ಅದಕ್ಕೆ ತಮ್ಮನ್ನು ತಾವು ಹೊಂದಿಸಿಕೊಳ್ಳುತ್ತಾರೆ ಮತ್ತು ನೀವು ಊಹಿಸಬಹುದಾದವರಾಗುತ್ತೀರಿ."

"ನೀವು ನಿಖರವಾದ ವ್ಯತ್ಯಾಸಗಳನ್ನು ಹೊಂದಿರಬೇಕು ಮತ್ತು ಟೀಮ್ ಇಂಡಿಯಾ ಎದುರಾಳಿ ತಂಡವು 200 ಕ್ಕಿಂತ ಹೆಚ್ಚು ಸ್ಕೋರ್ ಮಾಡುವುದನ್ನು ಬಯಸುವುದಿಲ್ಲ. ಆದ್ದರಿಂದ ಹರ್ಷಲ್ ಪಟೇಲ್ ಬೇಗನೆ ಕಲಿಯಬೇಕಾಗಿದೆ."

ಐಸಿಸಿ ಟಿ20 ರ‍್ಯಾಂಕಿಂಗ್: ನಂ. 1 ಸ್ಥಾನಕ್ಕೆ ಸೂರ್ಯಕುಮಾರ್ ಮತ್ತಷ್ಟು ಹತ್ತಿರ: ಕೊಹ್ಲಿ, ರೋಹಿತ್‌ಗೆ ನಿರಾಸೆ

ಹರ್ಷಲ್ ಪಟೇಲ್ ಬೇಗನೆ ಪಾಠ ಕಲಿಯಲಿ

ಹರ್ಷಲ್ ಪಟೇಲ್ ಬೇಗನೆ ಪಾಠ ಕಲಿಯಲಿ

ರೀತಿಂದರ್ ಸೋಧಿ ಹರ್ಷಲ್ ಪಟೇಲ್‌ ಪ್ರದರ್ಶನದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ. ಅವರ ನಿಧಾನಗತಿಯ ಎಸೆತಗಳಿಂದ ಪ್ರಯೋಜನವಾಗಿಲ್ಲ ಎಂದು ಹೇಳೀದ್ದಾರೆ.

"ಹರ್ಷಲ್ ಪಟೇಲ್ ದೊಡ್ಡ ನಿರಾಸೆಯನ್ನುಂಟುಮಾಡಿದ್ದಾರೆ. ಅವರು ಉತ್ತಮವಾದ ನಿಧಾನಗತಿಯ ಎಸೆತವನ್ನು ಬೌಲ್ ಮಾಡುತ್ತಾರೆ. ಆದರೆ ನೀವು ನಿಮ್ಮ ಅಸ್ತ್ರವನ್ನು ಅತಿಯಾಗಿ ಬಳಸಿದರೆ, ಎದುರಾಳಿ ಬ್ಯಾಟರ್‌ಗಳು ಅದಕ್ಕೆ ತಮ್ಮನ್ನು ತಾವು ಹೊಂದಿಸಿಕೊಳ್ಳುತ್ತಾರೆ ಮತ್ತು ನೀವು ಊಹಿಸಬಹುದಾದವರಾಗುತ್ತೀರಿ."

"ನೀವು ನಿಖರವಾದ ವ್ಯತ್ಯಾಸಗಳನ್ನು ಹೊಂದಿರಬೇಕು ಮತ್ತು ಟೀಮ್ ಇಂಡಿಯಾ ಎದುರಾಳಿ ತಂಡವು 200 ಕ್ಕಿಂತ ಹೆಚ್ಚು ಸ್ಕೋರ್ ಮಾಡುವುದನ್ನು ಬಯಸುವುದಿಲ್ಲ. ಆದ್ದರಿಂದ ಹರ್ಷಲ್ ಪಟೇಲ್ ಬೇಗನೆ ಕಲಿಯಬೇಕಾಗಿದೆ."

ಹೆಚ್ಚಿನ ರನ್ ಬಿಟ್ಟುಕೊಡುತ್ತಿದ್ದಾರೆ

ಹೆಚ್ಚಿನ ರನ್ ಬಿಟ್ಟುಕೊಡುತ್ತಿದ್ದಾರೆ

ಹರ್ಷಲ್ ಪಟೇಲ್ ಜೊತೆಗೆ, ಉಮೇಶ್ ಯಾದವ್ ಮತ್ತು ದೀಪಕ್ ಚಾಹರ್‌ ಕೂಡ ಹೆಚ್ಚಿನ ರನ್ ಬಿಟ್ಟುಕೊಟ್ಟ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಉಮೇಶ್ ಯಾದವ್ ತಮ್ಮ ಮೂರು ಓವರ್‌ಗಳಲ್ಲಿ 34 ರನ್‌ಗಳನ್ನು ನೀಡಿದರು, ಆದರೆ ಎರಡನೇ ಟಿ20 ಪಂದ್ಯದಲ್ಲಿ ಕಡಿಮೆ ರನ್ ಬಿಟ್ಟುಕೊಟ್ಟಿದ್ದ ಚಹರ್ ಮೂರನೇ ಪದ್ಯದಲ್ಲಿ ತಮ್ಮ ನಾಲ್ಕು ಓವರ್‌ಗಳಲ್ಲಿ 48 ರನ್‌ಗಳನ್ನು ಬಿಟ್ಟುಕೊಟ್ಟರು.

ಬುಮ್ರಾ ಗಾಯಗೊಂಡಿದ್ದರಿಂದ, ಟಿ 20 ವಿಶ್ವಕಪ್‌ಗೆ ತಂಡಕ್ಕೆ ತಡವಾಗಿ ಪ್ರವೇಶಿಸಲು ಈ ಜೋಡಿಗೆ ಸುವರ್ಣಾವಕಾಶವಿದೆ ಎಂದು ಮಾಜಿ ಕ್ರಿಕೆಟಿಗ ನಂಬಿದ್ದಾರೆ. ಆದಾಗ್ಯೂ, ಇಬ್ಬರೂ ಆಟಗಾರರು ತಲಾ ಒಂದು ವಿಕೆಟ್ ಪಡೆದರೂ ಪ್ರಭಾವ ಬೀರಲು ವಿಫಲರಾದರು.

ಫೀಲ್ಡಿಂಗ್‌ಗೆ ತಕ್ಕಹಾಗೆ ಬೌಲಿಂಗ್ ಮಾಡಲಿ

ಫೀಲ್ಡಿಂಗ್‌ಗೆ ತಕ್ಕಹಾಗೆ ಬೌಲಿಂಗ್ ಮಾಡಲಿ

"ಯಾರ್ಕರ್‌ಗಳನ್ನು ಉತ್ತಮವಾಗಿ ನಿರ್ವಹಿಸುವ ಮತ್ತು ಅವರ ಫೀಲ್ಡ್‌ಗೆ ಬೌಲಿಂಗ್ ಮಾಡುವ ಪ್ರಬಲ ಬೌಲಿಂಗ್ ದಾಳಿಯನ್ನು ಹೊಂದಿರಬೇಕು. ಸತತವಾಗಿ ರನ್ ಸೋರಿಕೆ ಮಾಡುತ್ತಿರುವುದರಿಂದ ನಾನು ಹರ್ಷಲ್ ಅವರನ್ನು ಇಲ್ಲಿ ಪ್ರತ್ಯೇಕಿಸಲು ಬಯಸುತ್ತೇನೆ. ಈ ಪ್ರದರ್ಶನಗಳು ಖಂಡಿತವಾಗಿಯೂ ಅವರ ಆತ್ಮವಿಶ್ವಾಸವನ್ನು ಘಾಸಿಗೊಳಿಸುತ್ತವೆ." ಎಂದು ಸೋಧಿ ಹೇಳಿದ್ದಾರೆ.

"ಉಮೇಶ್ ಯಾದವ್ ಮತ್ತು ದೀಪಕ್ ಚಹಾರ್ ಅವರಂತಹವರು ತಮ್ಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಮಗೆ ಜೀವನದಲ್ಲಿ ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ." ಎಂದು ಹೇಳಿದ್ದಾರೆ.

Story first published: Wednesday, October 5, 2022, 17:20 [IST]
Other articles published on Oct 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X