ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೇಣಿಗೆ ಶರಣಾದ ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್ಮನ್ ವಿಬಿ ಚಂದ್ರಶೇಖರ್

Former Indian cricketer VB Chandrasekhar commits suicide

ಚೆನ್ನೈ, ಆಗಸ್ಟ್ 16: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು ತಮಿಳುನಾಡು ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವಿಬಿ ಚಂದ್ರಶೇಖರ್, ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಚಂದ್ರಶೇಖರ್ ಮೃತದೇಹ ಚೆನ್ನೈಯ ಮೈಲಾಪುರ್‌ನಲ್ಲಿರುವ ಅವರ ಮನೆಯಲ್ಲಿ ದೊರೆತಿದೆ.

ಐಪಿಎಲ್ 2020: ಸಹ ಪ್ರಾಯೋಜಕತ್ವದಿಂದ ಹಿಂದೆ ಸರಿದ ಹಾಟ್‌ಸ್ಟಾರ್ಐಪಿಎಲ್ 2020: ಸಹ ಪ್ರಾಯೋಜಕತ್ವದಿಂದ ಹಿಂದೆ ಸರಿದ ಹಾಟ್‌ಸ್ಟಾರ್

ಗುರುವಾರ (ಆಗಸ್ಟ್ 15) ತಡ ರಾತ್ರಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿಬಿ ಚಂದ್ರಶೇಖರ್ ಮೃತದೇಹ ಕಂಡುಬಂದಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಖಾತ್ರಿಪಡಿಸಿದ್ದಾರೆ. ಕೋಣೆಯ ಮುಚ್ಚಿದ್ದ ಬಾಗಿಲನ್ನು ಮುರಿದು ಚಂದ್ರಶೇಖರ್ ಮೃತದೇಹವನ್ನು ಹೊರಗೆ ತರಲಾಗಿದೆ ಎಂಬ ಮಾಹಿತಿ ಲಭಿಸಿದೆ.

ವೆಸ್ಟ್ ಇಂಡೀಸ್‌ ಟೆಸ್ಟ್ ಮುಂದಿರುವಾಗಲೇ ವಿರಾಟ್ ಕೊಹ್ಲಿ ಕೈ ಬೆರಳಿಗೆ ಗಾಯವೆಸ್ಟ್ ಇಂಡೀಸ್‌ ಟೆಸ್ಟ್ ಮುಂದಿರುವಾಗಲೇ ವಿರಾಟ್ ಕೊಹ್ಲಿ ಕೈ ಬೆರಳಿಗೆ ಗಾಯ

57ರ ಹರೆಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವಿಬಿ ಚಂದ್ರಶೇಖರ್‌ಗೆ ಸಾಲದ ಹೊರೆಯೂ ಇತ್ತು ಎನ್ನಲಾಗಿದೆ.

ಡೆತ್ ನೋಟ್ ಇಲ್ಲ

ಡೆತ್ ನೋಟ್ ಇಲ್ಲ

ನೇಣು ಬಿಗಿದ ಸ್ಥಿತಿಯಲ್ಲಿದ್ದ ಚಂದ್ರಶೇಖರ್ ಮೃತ ದೇಹವನ್ನು ರಾಯಪೇಟದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ದೊರೆತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಚಂದ್ರಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.

ಮನೆಯವರಿತ್ತ ಮಾಹಿತಿ

ಮನೆಯವರಿತ್ತ ಮಾಹಿತಿ

ಸಂಜೆ ಟೀ ಕುಡಿದ ಬಳಿಕ ಮಹಡಿಯಲ್ಲಿರುವ ತನ್ನ ರೂಮಿಗೆ ತೆರಳಿದ ಚಂದ್ರಶೇಖರ್, ಬಹಳ ಸಮಯವಾದರೂ ಹೊರಗೆ ಬರಲಿಲ್ಲ. ಬಾಗಿಲು ಬಡಿದಾಗ ಒಳಗಿನಿಂದ ಬಾಗಿಲು ಚಿಲಕ ಹಾಕಿದ್ದು ಕಂಡುಬಂತು. ಕಿಟಕಿಯಲ್ಲಿ ನೋಡಿದಾಗ ಚಂದ್ರಶೇಖರ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು ಎಂದು ಚಂದ್ರಶೇಖರ್ ಮನೆಯವರು ತಿಳಿಸಿದ್ದಾರೆ.

ಏಕದಿನಕ್ಕೆ ಪಾದಾರ್ಪಣೆ

ಏಕದಿನಕ್ಕೆ ಪಾದಾರ್ಪಣೆ

1988ರ ಡಿಸೆಂಬರ್ 10ರಂದು ವಿಶಾಖಪಟ್ನಂನಲ್ಲಿ ನಡೆದಿದ್ದ ಭಾರತ vs ನ್ಯೂಜಿಲೆಂಡ್‌ ನಡುವಣ ಏಕದಿನ ಪಂದ್ಯದಲ್ಲಿ ಚಂದ್ರಶೇಖರ್ ಪಾದಾರ್ಪಣೆ ಮಾಡಿದ್ದರು. 1990ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ಭಾರತ ಏಕದಿನ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು. ಭಾರತ ಪರ 7 ಏಕದಿನ ಇನ್ನಿಂಗ್ಸ್‌ಗಳಲ್ಲಿ ವಿಬಿಸಿ, 53 ಅಧಿಕ ರನ್ ಸೇರಿ ಒಟ್ಟಿಗೆ 88 ರನ್ ಗಳಿಸಿದ್ದಾರೆ.

ತಮಿಳುನಾಡು ಪ್ರೀಮಿಯರ್ ಲೀಗ್‌

ತಮಿಳುನಾಡು ಪ್ರೀಮಿಯರ್ ಲೀಗ್‌

ಐಪಿಎಲ್ ಮಾದರಿಯಲ್ಲಿ ನಡೆಯುವ ತಮಿಳುನಾಡು ಪ್ರೀಮಿಯರ್ ಲೀಗ್‌ ನಲ್ಲಿ ವಿಬಿ ಕಾಂಚಿವೀರನ್ ತಂಡವನ್ನು ನಡೆಸುತ್ತಿದ್ದ ಚಂದ್ರಶೇಖರ್ ಅವರ ಮೇಲೆ ಸಾಲದ ಹೊರೆಯೂ ಇತ್ತು ಎನ್ನಲಾಗಿದೆ. ವಿಬಿ ಚಂದ್ರಶೇಖರ್ ಚೆನ್ನೈಯಲ್ಲಿ ಕ್ರಿಕೆಟ್ ಕೋಚಿಂಗ್ ಸೆಂಟರ್ ಒಂದನ್ನೂ ಕೂಡ ನಡೆಸುತ್ತಿದ್ದರು.

Story first published: Friday, August 16, 2019, 13:07 [IST]
Other articles published on Aug 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X