ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಟಿ20 ಆಡುವ ತಂಡಕ್ಕೆ ಸುನೀಲ್ ಜೋಶಿ ಕೋಚ್!

By Mahesh

ಬೆಂಗಳೂರು, ಡಿ.20: ಭಾರತ ತಂಡ ಮಾಜಿ ಕ್ರಿಕೆಟರ್ ಕರ್ನಾಟಕದ ಸುನೀಲ್ ಜೋಶಿ ಅವರು ವಿಶ್ವ ಟಿ20 ಆಡಲಿರುವ ಒಂದು ತಂಡಕ್ಕೆ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ದೇಶಿ ಕ್ರಿಕೆಟ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಕೋಚ್ ಆಗಿ ಯಶಸ್ಸುಗಳಿಸಿದ್ದ ಜೋಶಿ ಅವರು ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೂರು ಸೀಸನ್ ಆಡಿದ್ದರು. [ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]

ಈಗ ಒಮಾನ್ ದೇಶದ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಶ್ವ ಟಿ20ಗಾಗಿ ಅಭ್ಯಾಸ ನಡೆಸಿರುವ ಒಮಾನ್ ಗೆ ಜೋಶಿ ಅವರು ಮುಖ್ಯ ಕೋಚ್ ದುಲೀಪ್ ಮೆಂಡಿಸ್ ಜೊತೆ ಸೇರಲಿದ್ದಾರೆ.

ಮಾರ್ಚ್ 11ರಿಂದ ಏಪ್ರಿಲ್ 3 ರ ತನಕ ಭಾರತದಲ್ಲಿ ವಿಶ್ವಟಿ20 ಟೂರ್ನಿ ನಡೆಯಲಿದೆ. ಇದಕ್ಕಾಗಿ ರಾಜ್‌ಕೋಟ್‌ನಲ್ಲಿ ಡಿ.20 ರಿಂದ ಆರಂಭವಾಗಲಿರುವ 10 ದಿನಗಳ ಪೂರ್ವ ತಯಾರಿ ಶಿಬಿರ ಆರಂಭಗೊಳ್ಳಲಿದೆ.

Former Indian spinner Sunil Joshi joins Oman as bowling coach

ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. 10 ತಂಡಗಳು ನೇರ ಪ್ರವೇಶ ಪಡೆಯುತ್ತವೆ. ಉಳಿದ ಆರು ಅಸೋಸಿಯೇಟ್ ದೇಶಗಳು ಐರ್ಲೆಂಡ್ ಹಾಗೂ ಸ್ಕಾಟ್ಲಂಡ್‌ನಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಅರ್ಹತಾ ಟೂರ್ನಿಗೆ ಆಯ್ಕೆಯಾಗಿವೆ.

ಒಮನ್ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಹಾಲೆಂಡ್ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಒಮನ್ ಎ ಗುಂಪಿನಲ್ಲಿದ್ದು, ಧರ್ಮಶಾಲಾದಲ್ಲಿ ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಹಾಲೆಂಡ್ ವಿರುದ್ಧ ಆಡಲಿದೆ. ಗ್ರೂಪ್ ಹಂತದಲ್ಲಿ ಗೆಲ್ಲುವ ತಂಡಗಳು ಸೂಪರ್-10ರ ಹಂತಕ್ಕೆ ಅರ್ಹತೆ ಪಡೆದುಕೊಳ್ಳುತ್ತವೆ. [ಧರ್ಮಶಾಲದಲ್ಲಿ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್ ಸಮರ]

ದುಲೀಪ್‌ಗೆ ಭಾರತದ ಸ್ಪಿನ್ ಸಹಾಯಕ ಪಿಚ್‌ನಲ್ಲಿ ಹೇಗೆ ಆಡಬೇಕು ಹಾಗೂ ಬೌಲಿಂಗ್ ಮಾಡಬೇಕೆಂದು ಚೆನ್ನಾಗಿ ಗೊತ್ತಿದೆ. ನನ್ನ ಕಾರ್ಯಶೈಲಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ನನ್ನ ಜ್ಞಾನ ಹಾಗೂ ಅನುಭವವನ್ನು ಒಮನ್ ತಂಡಕ್ಕೆ ನೀಡುವೆ''ಎಂದು ಸುಮಾರು 160 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 615 ವಿಕೆಟ್‌ಗಳನ್ನು ಕಬಳಿಸಿರುವ 45 ವರ್ಷ ವಯಸ್ಸಿನ ಜೋಶಿ ಪ್ರತಿಕ್ರಿಯಿಸಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X