ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ ಮಾಜಿ ಆಲ್ ರೌಂಡರ್ ಕ್ರಿಸ್ ಕೇರ್ನ್ಸ್‌ಗೆ ಪಾರ್ಶ್ವವಾಯು

Former New Zealand all-rounder Chris Cairns suffers paralysis after life-saving surgery

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್ ಮಾಜಿ ಆಲ್ ರೌಂಡರ್ ಕ್ರಿಸ್ ಕೇರ್ನ್ಸ್ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಹೃದಯ ಶಸ್ತ್ರ ಚಿಕಿತ್ಸೆಯ ಬಳಿಕ ಕೇರ್ನ್ಸ್‌ ಸ್ಥಿತಿ ಗಂಭೀರವಾಗಿತ್ತು. ಶಸ್ತ್ರ ಚಿಕಿತ್ಸೆಯ ಬಳಿಕ ಕೇರ್ನ್ಸ್‌ ಕಾಲುಗಳು ಪಾರ್ಶ್ವವಾಯುಗೀಡಾಗಿದೆ ಎಂದು ತಿಳಿದು ಬಂದಿದೆ.

ಭಾರತ vs ಇಂಗ್ಲೆಂಡ್: ವಿಶೇಷ ದಾಖಲೆ ಸರಿದೂಗಿಸಿದ ಜೋ ರೂಟ್ಭಾರತ vs ಇಂಗ್ಲೆಂಡ್: ವಿಶೇಷ ದಾಖಲೆ ಸರಿದೂಗಿಸಿದ ಜೋ ರೂಟ್

51ರ ಹರೆಯದ ಕ್ರಿಸ್ ಕೇರ್ನ್ಸ್‌ ಅವರು ವಾಸವಾಗಿರುವ ಆಸ್ಟ್ರೇಲಿಯಾದ ಕ್ಯಾನ್ಬೆರಾಕ್ಕೆ ವಾಪಸ್ಸಾಗಿದ್ದಾರೆ. ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಕೇರ್ನ್ಸ್ ಚೇತರಿಸಿಕೊಳ್ಳಲು ಸುದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಅವರನ್ನು ಲೈಫ್ ಸಪೋರ್ಟ್‌ನೊಂದಿಗೆ ಸಿಡ್ನಿಯ ಸೇಂಟ್ ವಿನ್ಸೆಂಟ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಸಿಡ್ನಿಯಲ್ಲಿ ಜೀವ ಉಳಿಸುವ ತುರ್ತು ಹೃದಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕ್ರಿಸ್ ಕೇರ್ನ್ಸ್ ಬೆನ್ನುಮೂಳೆಯಲ್ಲಿ ಪಾರ್ಶ್ವವಾಯು ಉಂಟಾಗಿದೆ. ಇದು ಅವರ ಕಾಲುಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಿದೆ"ಎಂದು ಕೇರ್ನ್ಸ್ ವಕೀಲ ಆ್ಯರನ್ ಲಾಯ್ಡ್ ಸ್ಟಫ್.ಕೊ.ಎನ್‌ಝಡ್. ಜೊತೆ ಹೇಳಿಕೆ ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ಶತಕ ಸಿಡಿಸಿ ಸಚಿನ್, ದ್ರಾವಿಡ್ ದಾಖಲೆ ಹಿಂದಿಕ್ಕಿದ ಜೋ ರೂಟ್ಭಾರತ vs ಇಂಗ್ಲೆಂಡ್: ಶತಕ ಸಿಡಿಸಿ ಸಚಿನ್, ದ್ರಾವಿಡ್ ದಾಖಲೆ ಹಿಂದಿಕ್ಕಿದ ಜೋ ರೂಟ್

Rishab Pant ಅವರಿಗೆ umpire ತಮ್ಮ ಶೈಲಿ ಬದಲಿಸಲು ಹೇಳಿದ್ದೇಕೆ | Oneindia Kannada

"ಈ ಕಾರಣದಿಂದಾಗಿ ಕ್ರಿಸ್ ಆಸ್ಟ್ರೇಲಿಯಾದ ಬೆನ್ನುಮೂಳೆ ಚಿಕಿತ್ಸೆಗೆ ಸ್ಪೆಷಾಲಿಸ್ಟ್‌ಗಳಿರುವ ಆಸ್ಪತ್ರೆಯಲ್ಲಿ ಚೇತರಿಕೆಗಾಗಿ ಪ್ರಮುಖ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ," ಎಂದು ಆ್ಯರನ್ ಲಾಯ್ಡ್ ಮಾಹಿತಿ ನೀಡಿದ್ದಾರೆ. ಬ್ಯಾಟಿಂಗ್ ಆಲ್ ರೌಂಡರ್ ಆಗಿದ್ದ ಕ್ರಿಸ್, ನ್ಯೂಜಿಲೆಂಡ್ ಪರ 62 ಟೆಸ್ಟ್‌ ಪಂದ್ಯಗಳಲ್ಲಿ 3320 ರನ್, 218 ವಿಕೆಟ್, 215 ಏಕದಿನ ಪಂದ್ಯಗಳಲ್ಲಿ 4950 ರನ್, 201 ವಿಕೆಟ್‌ ದಾಖಲೆ ಹೊಂದಿದ್ದಾರೆ.

Story first published: Friday, August 27, 2021, 13:13 [IST]
Other articles published on Aug 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X