ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಧುನಿಕ ಕ್ರಿಕೆಟ್‌ನ ವಿವಾದಾತ್ಮಕ ಶಾಟ್ ಬ್ಯಾನ್ ಆಗಲಿ ಎಂದ ಕಿವೀಸ್ ಮಾಜಿ ಕ್ರಿಕೆಟಿಗ

Former New Zealand cricketer Scott Styris said switch hit should banned from cricket

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಟಿ20 ಮಾದರಿ ಪರಿಚಯವಾದ ಬಳಿಕ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಬ್ಯಾಟಿಂಗ್ ಹಾಗೂ ಬೌಲರ್‌ಗಳು ಅನೇಕ ಭಿನ್ನ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದಾರೆ. ಅದರಲ್ಲೂ ಸ್ವಿಚ್ ಹಿಟ್ ಕೂಡ ಒಂದು. ಇದೀಗ ಈ ಶಾಟ್‌ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಗೊಳಿಸಬೇಕು ಎಂದು ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಅಭಿಪ್ರಾಯಪಟ್ಟಿದ್ದಾರೆ. ಬ್ಯಾಟ್ಸ್‌ಮನ್ ಕೈ ಹಾಗೂ ಕಾಲನ್ನು ಬದಲಾಯಿಸಿಕೊಂಡು ಬ್ಯಾಟಿಂಗ್ ನಡೆಸಬಾರದು ಎಂದಿದ್ದಾರೆ ಸ್ಕ್ವಾಟ್ ಸ್ಟೈರಿಸ್.

ಇದೇ ವಿಚಾರವಾಗಿ ಇತ್ತೀಚೆಗೆ ಆರ್ ಅಶ್ವಿನ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸ್ವಿಚ್ ಹಿಟ್ ನಿಷೇಧದ ಬಗ್ಗೆ ಅಶ್ವಿನ್ ಮಾತನಾಡದಿದ್ದರೂ ಈ ಪ್ರಯತ್ನದಲ್ಲಿ ವಿಫಲವಾಗಿ ಚೆಂಡು ಕಾಲಿಗೆ ಬಡಿದಲ್ಲ ಅದನ್ನು ಲೆಗ್‌ ಬಿಫೋರ್ ವಿಕೆಟ್ ಎಂದು ಪರಿಗಣಿಸಬೆಕು ಎಂದಿದ್ದರು. ಹೀಗಾದಲ್ಲಿ ಮಾತ್ರವೇ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮಾನತೆಯನ್ನು ಕಾಣಬಹುದು ಎಂದಿದ್ದರು ಆರ್ ಅಶ್ವಿನ್.

Ind vs Eng: ಲಾರ್ಡ್ಸ್‌ನಲ್ಲಿ ಭಾರತಕ್ಕೆ ಭಾರೀ ಸೋಲು: ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್Ind vs Eng: ಲಾರ್ಡ್ಸ್‌ನಲ್ಲಿ ಭಾರತಕ್ಕೆ ಭಾರೀ ಸೋಲು: ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್

ಸ್ವಿಚ್ ಹಿಟ್ ಆಡಲಿ, ಆದರೆ..

ಸ್ವಿಚ್ ಹಿಟ್ ಆಡಲಿ, ಆದರೆ..

ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಸ್ವಿಚ್ ಹಿಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಬ್ಯಾಟರ್‌ಗಳಿಗೆ ಸ್ವಿಚ್ ಹಿಟ್‌ಗೆ ಅವಕಾಶ ಕೊಡಬಹುದು, ಆದರೆ ಅದರಲ್ಲಿ ಅವರು ಎಡವಿದರೆ ಅದನ್ನು ಎಲ್‌ಬಿಡಬ್ಲ್ಯು ಎಂದು ಪರಿಗಣಿಸಬೇಕು. ಬ್ಯಾಟರ್‌ಗಳು ತಿರುಗಿದ ಕಾರಣಕ್ಕೆ ಎಲ್‌ಬಿಡಬ್ಲ್ಯು ಎಂದು ಪರಿಗಣಿಸದಿರುವುದು ಎಷ್ಟು ಸರಿ? ಎಲ್ಲಾ ಮಾದರಿಯಲ್ಲಿಯೂ ಇದಕ್ಕೆ ಔಟ್ ನೀಡಿದರೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸ್ವಲ್ಪ ಸಮಾನತೆ ಬರಬಹುದು" ಎಂದಿದ್ದರು ಅಶ್ವಿನ್.

ಅಶ್ವಿನ್ ಅಭಿಪ್ರಾಯಕ್ಕೆ ಸಮ್ಮತಿಸಿದ ಸ್ಟೈರಿಸ್

ಅಶ್ವಿನ್ ಅಭಿಪ್ರಾಯಕ್ಕೆ ಸಮ್ಮತಿಸಿದ ಸ್ಟೈರಿಸ್

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ಕಾಟ್ ಸ್ಟೈರಿಸ್ ಆರ್ ಅಶ್ವಿನ್ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆರ್ ಅಶ್ವಿನ್ ಅವರ ಸಾಕಷ್ಟು ಅಭಿಪ್ರಾಯಗಳಿಗೆ ನನ್ನ ಒಪ್ಪಿಗೆಯಿದೆ. ಆದರೆ ಅದರ ಪರಿಹಾರಕ್ಕೆ ನನ್ನ ಒಪ್ಪಿಗೆಯಿಲ್ಲ ಎಂದಿದ್ದಾರೆ. ಅದರ ಬದಲಾಗಿ ಸ್ವಿಚ್ ಹಿಟ್ ಹೊಡೆತವನ್ನೇ ಬ್ಯಾನ್ ಮಾಡಬೇಕು ಎಂದಿದ್ದಾರೆ. ಬ್ಯಾಟರ್‌ಗಳು ತಮ್ಮ ಕೈ ಹಾಗೂ ಕಾಲನ್ನು ಬದಲಾಯಿಸಲು ಅವಕಾಶ ನಿಡಬಾರದು ಎಂದಿದ್ದಾರೆ ಕಿವೀಸ್ ಮಾಜಿ ಕ್ರಿಕೆಟಿಗ.

ರಿವರ್ಸ್ ಸ್ವೀಪ್ ಇರಲಿ ಎಂದ ಸ್ಟೈರಿಸ್

ರಿವರ್ಸ್ ಸ್ವೀಪ್ ಇರಲಿ ಎಂದ ಸ್ಟೈರಿಸ್

ಇನ್ನು ಈ ಸಂದರ್ಭದಲ್ಲಿ ರಿವರ್ಸ್ ಸ್ವೀಪ್ ಶಾಟ್ ಬಗ್ಗೆ ತಮ್ಮ ತಕರಾರು ಇಲ್ಲ ಎಂದಿದ್ದಾರೆ ಸ್ಟೈರಿಸ್. "ನೀವು ರಿವರ್ಸ್ ಸ್ವೀಪ್ ಅಥವಾ ರಿವರ್ಸ್ ಹಿಟ್ ಹೊಡೆತಗಳನ್ನು ಬಾರಿಸಬಹುದು. ಆದರೆ ವೈಯಕ್ತಿಕವಾಗಿ ನನಗಿಷ್ಟವಿಲ್ಲ. ಕೆವಿನ್ ಪೀಟರ್ಸನ್ ಅವರು ಸಂಪೂರ್ಣವಾಗಿ ಎಡಗೈ ಆಟಗಾರನ ರೀತಿ ಕೈ ಬದಲಾಯಿಸಿಕೊಂಡು ಸ್ವಿಚ್ ಹೊಟ್ ಬಾರಿಸುತ್ತಿದ್ದರು. ನೀವು ಸ್ವಿಚ್ ಹಿಟ್ ಅನ್ನು ಕ್ರಿಕೆಟ್‌ನಿಂದ ತೆಗೆಯಬಹುದು. ಆದರೆ ಎಲ್ಲಾ ರೀತಿಯ ರಿವರ್ಸ್ ಸ್ವೀಪ್ ಹಾಗೂ ರಿವರ್ಸ್ ಹಿಟ್‌ಗಳಿಗೆ ಅವಕಾಶ ನೀಡಬೇಕು. ಬಳಿಕ ನೀವು ಎಲ್‌ಬಿಡಬ್ಲ್ಯು ನಿಯಮದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಇದು ಬ್ಯಾಟಿಂಗ್ ಹಾಗೂ ಬೌಲಿಂಗ್‌ಗೆ ಸಮಾನ ನ್ಯಾಯ ನೀಡುತ್ತದೆ" ಎಂದಿದ್ದಾರೆ ಸ್ಕ್ವಾಟ್ ಸ್ಟೈರಿಸ್.

ವಿವಾದಾತ್ಮಕ ಹೊಡೆತ ಸ್ವಿಚ್ ಹಿಟ್

ವಿವಾದಾತ್ಮಕ ಹೊಡೆತ ಸ್ವಿಚ್ ಹಿಟ್

ಸ್ವಿಚ್ ಹಿಟ್ ಕ್ರಿಕೆಟ್‌ನ ಸಾಕಷ್ಟು ವಿವಾದಾತ್ಮಕ ಶಾಟ್‌ಗಳಲ್ಲಿ ಒಂದು. ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಈ ಶಾಟ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ಆ ಸಂದರ್ಭದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಮಾತ್ರವಲ್ಲದೆ ಇದು ನ್ಯಾಯಯುತವಾದ ಹೊಡೆತವಲ್ಲ ಎಂದು ಟೀಕೆಗಳು ಕೇಳಿಬಂದಿತ್ತು. ಆದರೆ ಬಳಿಕ ಇದನ್ನು ಕ್ರಮೇಣ ಕ್ರಿಕೆಟಿಗರು ಒಪ್ಪಿಕೊಳ್ಳಲು ಆರಂಭಿಸಿದ್ದರು. ಪ್ರಸ್ತುತ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಹೊಡೆತಗಳನ್ನು ಪರಿಣಾಮಕಾರಿಯಾಗಿ ಬಾರಿಸುತ್ತಾರೆ. ಈಗಲೂ ಈ ಶಾಟ್‌ ಬಗ್ಗೆ ಆಗಾಗ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದೆ.

Story first published: Friday, July 15, 2022, 16:33 [IST]
Other articles published on Jul 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X