ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ತಂಡ ಈ ರೀತಿಯ ಆಟಗಾರನಿಗಾಗಿ ಕಾಯುತ್ತಿತ್ತು ಎಂದ ಮಾಜಿ ಕ್ರಿಕೆಟಿಗ

Former New Zealand Cricketer Simon Doull Praises Washington Sundar Batting

ಟೀಂ ಇಂಡಿಯಾದಲ್ಲಿ ರವೀಂದ್ರ ಜಡೇಜಾ ನಂತರ ಆ ರೀತಿಯ ಮತ್ತೊಬ್ಬ ಆಲ್‌ರೌಂಡರ್ ಆಟಗಾರನಿಗಾಗಿ ಹುಡುಕಾಡುತ್ತಿತ್ತು. ಅಕ್ಷರ್ ಪಟೇಲ್ ಆ ಸ್ಥಾನವನ್ನು ತುಂಬುವ ಭರವಸೆ ತೋರಿಸಿದ್ದರಾದರೂ ಅವರು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದೆ ನಿರಾಸೆ ಮೂಡಿಸಿದ್ದರು.

ನ್ಯೂಜಿಲೆಂಡ್‌ ವಿರುದ್ಧದ ಸರಣಿಯ ನಂತರ ಮುಕ್ತಾಯದ ನಂತರ ನ್ಯೂಜಿಲೆಂಡ್‌ ತಂಡದ ಮಾಜಿ ಕ್ರಿಕೆಟಿಗ ಸೈಮನ್ ಡೌಲ್, ವಿಶೇಷವಾಗಿ ಭಾರತದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರ ಜೊತೆ ವಾಷಿಂಗ್ಟನ್ ಸುಂದರ್ ಭಾರತ ತಂಡದಲ್ಲಿ ಉತ್ತಮ ಆಲ್‌ರೌಂಡರ್ ಆಗುವ ಭರವಸೆ ಇದೆ ಎಂದು ಹೇಳಿದ್ದಾರೆ.

ಅದರಲ್ಲೂ, ಪಾಂಡ್ಯ ಮತ್ತು ಜಡೇಜಾ ನಂತರ ಭಾರತದ ಮಧ್ಯಮ ಕೆಳ ಕ್ರಮಾಂಕದ ಬ್ಯಾಟಿಂಗ್‌ ಅನ್ನು ಮತ್ತಷ್ಟು ಶಕ್ತಿಯುತವನ್ನಾಗಿ ಮಾಡುವ ಸಾಮರ್ಥ್ಯ ಅವರಿಗೆ ಇದೆ ಎಂದು ಡೌಲ್ ಹೇಳಿದ್ದಾರೆ.

ಬುಧವಾರ ಕ್ರೈಸ್ಟ್‌ಚರ್ಚ್‌ನ ಹೇಗ್ಲೆ ಓವಲ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ತಮ್ಮ ಚೊಚ್ಚಲ ಅರ್ಧಶತಕ ಗಳಿಸುವ ಮೂಲಕ ಗಮನ ಸೆಳೆದರು.

 ಉತ್ತಮ ಪ್ರದರ್ಶನ ನೀಡಿದ ಸುಂದರ್

ಉತ್ತಮ ಪ್ರದರ್ಶನ ನೀಡಿದ ಸುಂದರ್

ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಗಳು ಕೈಕೊಟ್ಟಾಗ ವಾಷಿಂಗ್ಟನ್ ಸುಂದರ್ ಅತ್ಯುತ್ತಮ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಆಸರೆಯಾದರು. 64 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ ಅವರ ಜವಾಬ್ದಾರಿಯುತ ಇನ್ನಿಂಗ್ಸ್ ನೆರವಿನಿಂದ ಭಾರತ 219 ರನ್‌ಗಳ ಗೌರವಾನ್ವಿತ ಮೊತ್ತ ಕಲೆ ಹಾಕಿತು.

ಸರಣಿಯ ಮೊದಲನೇ ಏಕದಿನ ಪಂದ್ಯದಲ್ಲಿ ಕೂಡ ವಾಷಿಂಗ್ಟನ್ ಸುಂದರ್ ಉತ್ತಮವಾಗಿ ಆಡಿದ್ದರು. 16 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ನೆರವಿನಿಂದ ಅಜೇಯ 37 ರನ್ ಗಳಿಸುವ ಮೂಲಕ ಭಾರತ 306 ರನ್‌ಗಳ ಉತ್ತಮ ಮೊತ್ತ ಕಲೆಹಾಕಲು ನೆರವಾಗಿದ್ದರು.

ಪಂತ್ ವಿಚಾರವಾಗಿ ಈ ಕಹಿ ಸತ್ಯವನ್ನು ಭಾರತೀಯರು ಒಪ್ಪಿಕೊಳ್ಳಲೇಬೇಕು: ದಾನಿಶ್ ಕನೇರಿಯಾ

ಭಾರತ ತಂಡಕ್ಕೆ ಈ ರೀತಿಯ ಆಟಗಾರ ಬೇಕು

ಭಾರತ ತಂಡಕ್ಕೆ ಈ ರೀತಿಯ ಆಟಗಾರ ಬೇಕು

ವಾಷಿಂಗ್ಟನ್ ಸುಂದರ್ ಪ್ರದರ್ಶನದ ಬಗ್ಗೆ ಡೌಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಆತನ ಆಟ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಭಾರತ ತಂಡ ಈ ರೀತಿಯ ಆಟಗಾರನಿಗಾಗಿ ಕಾಯುತ್ತಿತ್ತು ಎಂದು ಅನಿಸುತ್ತಿದೆ. ಹಾರ್ದಿಕ್ ಪಾಂಡ್ಯ ತಂಡಕ್ಕೆ ಮೊದಲನೇ ಆಯ್ಕೆಯಾಗಿದ್ದಾರೆ, ವಾಷಿಂಗ್ಟನ್ ಸುಂದರ್ ಕೂಡ ಬೌಲಿಂಗ್ ಮಾಡಲು ಫಿಟ್ ಆದರೆ, ತಂಡಕ್ಕೆ ರವೀಂದ್ರ ಜಡೇಜಾ ವಾಪಸ್ ಆದರೆ, ಭಾರತ ತಂಡ ಸಾಕಷ್ಟು ಬಲಿಷ್ಠವಾಗಲಿದೆ" ಎಂದು ಸೈಮನ್ ಡೌಲ್ ಹೇಳಿದರು.

"5, 6, 7 ಮತ್ತು 8ನೇ ಕ್ರಮಾಂಕದಲ್ಲಿ ಯಾವ ಆಟಗಾರರು ಆಡಬೇಕು ಎನ್ನುವುದು ತಿಳಿದಿದೆ. 6,7 ಮತ್ತು 8 ನೇ ಕ್ರಮಾಂಕದಲ್ಲಿ ಆಡುವವರು ಉತ್ತಮ ಬ್ಯಾಟರ್ ಕೂಡ ಆಗಿದ್ದರೆ, ಅದು ತಂಡವನ್ನು ಬಲಿಷ್ಠವನ್ನಾಗಿಸುತ್ತದೆ" ಎಂದು ಹೇಳಿದ್ದಾರೆ.

ಆತ ಉತ್ತಮ ಬ್ಯಾಟರ್ ಆಗಿದ್ದಾನೆ

ಆತ ಉತ್ತಮ ಬ್ಯಾಟರ್ ಆಗಿದ್ದಾನೆ

ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡುವ ಕೆಲವು ಚೆಂಡುಗಳನ್ನು ಆಡುತ್ತಿರಲಿಲ್ಲ. ಆತ ಉತ್ತಮವಾದ ಬಾಲ್‌ಗಳು ರಕ್ಷಣಾತ್ಮಕವಾಗಿ ಆಡುವುದು ಇಲ್ಲವೇ ಆಡದೇ ಬಿಡುವುದನ್ನು ಮಾಡುತ್ತಿದ್ದ. ಪ್ರತೊಯೊಬ್ಬ ಬ್ಯಾಟರ್ ಗೆ ಇದು ಮುಖ್ಯವಾಗಿರುತ್ತದೆ ಎಂದು ಡೌಲ್ ಹೇಳಿದ್ದಾರೆ.

ಎಲ್ಲಾ ಬಾಲ್‌ಗಳನ್ನು ನಾವು ಆಡಲಾಗದು, ಅದರಿಂದ ಹೆಚ್ಚಿನ ಬಾರಿ ಔಟ್ ಆಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಕೆಟ್ಟ ಬಾಲ್‌ಗಳಿಗೆ ಬೌಂಡರಿ ಹೊಡೆಯಬೇಕು, ಹಾಗೆಯೇ ಉತ್ತಮವಾಗಿ ಬೌಲಿಂಗ್ ಮಾಡಿದಾಗ ಗೌರವಿಸಬೇಕು ಎಂದು ಡೌಲ್ ಹೇಳಿದ್ದಾರೆ. ಅಗ್ರ ಕ್ರಮಾಂಕದ ಆಟಗಾರರು ಸುಲಭವಾಗಿ ಔಟಾಗಿದ್ದಾಗ, ವಾಷಿಂಗ್ಟನ್ ಸುಂದರ್ ಅತ್ಯುತ್ತಮವಾಗಿ ಆಡಿದರು ಎಂದು ಹೇಳಿದ್ದಾರೆ.

ಏಕದಿನ ಸರಣಿಯ ಕೊನೆಯ ಪಂದ್ಯ ಮಳೆಯಿಂದ ಅರ್ಧಕ್ಕೆ ನಿಂತ ಕಾರಣ ಫಲಿತಾಂಶವಿಲ್ಲದೆ ಕೊನೆಯಾಯಿತು. 1-0 ಮುನ್ನಡೆ ಸಾಧಿಸಿದ್ದ ನ್ಯೂಜಿಲೆಂಡ್ ಸರಣಿಯನ್ನು ಗೆದ್ದುಕೊಂಡಿತು. ವಾಷಿಂಗ್ಟನ್ ಸುಂದರ್ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಕೂಡ ಆಯ್ಕೆಯಾಗಿದ್ದಾರೆ.

Story first published: Thursday, December 1, 2022, 16:42 [IST]
Other articles published on Dec 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X