ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಡಿಶಾ ಮಾಜಿ ನಾಯಕ ಪ್ರಶಾಂತ್ ಮೋಹಪಾತ್ರ ಕೋವಿಡ್-19ಗೆ ಬಲಿ

Former Odisha captain Prashant Mohapatra dies of Covid-19

ಭುವನೇಶ್ವರ: ಒಡಿಶಾ ಕ್ರಿಕೆಟ್ ತಂಡದ ಮಾಜಿ ನಾಯಕ ಪ್ರಶಾಂತ್ ಮೋಹಪಾತ್ರ ಕೋವಿಡ್-19ನಿಂದಾಗಿ ಸಾವನ್ನಪ್ಪಿದ್ದಾರೆ. ಭುವನೇಶ್ವರ್‌ನ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಶಾಂತ್, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ (ಮೇ 19) ಕೊನೆಯುಸಿರೆಳೆದಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತದ ಸಂಭಾವ್ಯ ತಂಡ ರಚಿಸಿದ ಮಂಜ್ರೇಕರ್ ; ಸ್ಯಾಮ್ಸನ್‌ಗಿಲ್ಲ ಸ್ಥಾನ!ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತದ ಸಂಭಾವ್ಯ ತಂಡ ರಚಿಸಿದ ಮಂಜ್ರೇಕರ್ ; ಸ್ಯಾಮ್ಸನ್‌ಗಿಲ್ಲ ಸ್ಥಾನ!

47ರ ಹರೆಯದ ಮೋಹಪಾತ್ರ ಅವರು ಬುಧವಾರ 7.51 am ಹೊತ್ತಿಗೆ ಪ್ರಾಣಬಿಟ್ಟಿದ್ದಾರೆ. ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಪ್ರಶಾಂತ್ ಸಾವನ್ನಪ್ಪಿದರು ಎಂದು ಭುವನೇಶ್ವರ್ ಏಮ್ಸ್‌ನ ಅಧೀಕ್ಷಕ ಡಾ.ಎಸ್‌ಎನ್ ಮೊಹಾಂತಿ ಮಾಹಿತಿ ನೀಡಿದ್ದಾರೆ.

ಪ್ರಶಾಂತ್ ಅವರ ತಂದೆ ರಾಜ್ಯಸಭಾ ಎಂಪಿ ಮತ್ತು ಪದ್ಮವಿಭೂಷನ್ ಪ್ರಶಸ್ತಿ ವಿಜೇತ ರಘುನಾಥ್ ಮೋಹಪಾತ್ರ ಕೂಡ ಕೋವಿಡ್ ಕಾರಣದಿಂದಾಗಿ ಮೇ 9ರಂದು ಅಸುನೀಗಿದ್ದರು. ಪ್ರಶಾಂತ್ ಸ್ಥಿತಿ ಗಂಭೀರಗೊಂಡಾಗ ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇಡಲಾಗಿತ್ತು.

ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರ ಹೆಸರಿಸಿದ ಮೈಕಲ್ ವಾನ್ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರ ಹೆಸರಿಸಿದ ಮೈಕಲ್ ವಾನ್

ಪ್ರಶಾಂತ್ ಅವರು 45 ಪ್ರಥಮದರ್ಜೆ ಪಂದ್ಯಗಳಲ್ಲಿ 30.08ರ ಸರಾಸರಿಯಂತೆ 2,196 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ, 11 ಅರ್ಥ ಶತಕಗಳು ಸೇರಿವೆ. ಪ್ರಶಾಂತ್ ಸಾವಿಗೆ ಮಾಜಿ ಆಲ್ ರೌಂಡರ್ ಸುರೇಶ್ ರೈನಾ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Story first published: Wednesday, May 19, 2021, 17:38 [IST]
Other articles published on May 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X