ಸಂಜು ಸ್ಯಾಮ್ಸನ್ ಓರ್ವ ಸೋಮಾರಿ ಆಟಗಾರ ಎಂದು ಕಾಲೆಳೆದ ಪಾಕ್ ಮಾಜಿ ಕ್ರಿಕೆಟಿಗ!

ಟೀಮ್ ಇಂಡಿಯಾ ಇತ್ತೀಚಿಗಷ್ಟೆ ಶ್ರೀಲಂಕಾ ಪ್ರವಾಸವನ್ನು ಕೈಗೊಂಡು 3 ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟ್ವೆಂಟಿ ಸರಣಿಯನ್ನು ಆಡಿ ಮುಗಿಸಿದೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ 2-1 ಅಂತರದಲ್ಲಿ ಗೆದ್ದು ಸರಣಿಯನ್ನು ಕೈವಶ ಪಡಿಸಿಕೊಂಡರೆ, 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾರತದ ವಿರುದ್ಧ ಶ್ರೀಲಂಕಾ ತಂಡ 2-1 ಅಂತರದಿಂದ ಜಯವನ್ನು ಸಾಧಿಸಿ ಟಿ ಟ್ವೆಂಟಿ ಸರಣಿಯನ್ನು ತನ್ನದಾಗಿಸಿಕೊಂಡಿತು.

ಶ್ರೀಲಂಕಾ ವಿರುದ್ಧ ಸೋಲು: ಈ ಆಟಗಾರರ ಕುರಿತು ಅಸಮಾಧಾನ ವ್ಯಕ್ತಪಡಿಸಿದ ವಿರೇಂದ್ರ ಸೆಹ್ವಾಗ್ಶ್ರೀಲಂಕಾ ವಿರುದ್ಧ ಸೋಲು: ಈ ಆಟಗಾರರ ಕುರಿತು ಅಸಮಾಧಾನ ವ್ಯಕ್ತಪಡಿಸಿದ ವಿರೇಂದ್ರ ಸೆಹ್ವಾಗ್

ಇನ್ನು ಭಾರತ ಮತ್ತು ಶ್ರೀಲಂಕಾ ನಡುವಿನ ನಿಯಮಿತ ಓವರ್‌ಗಳ ಸರಣಿಗಳು ಮುಗಿದ ಬೆನ್ನಲ್ಲೇ ಇದೀಗ ಆ ಸರಣಿಗಳಲ್ಲಿ ವಿವಿಧ ಆಟಗಾರರ ಪ್ರದರ್ಶನದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲಿಯೂ ಭಾರತದ ಸಂಜು ಸ್ಯಾಮ್ಸನ್ ಕುರಿತಾಗಿ ತುಸು ಹೆಚ್ಚೇ ಚರ್ಚೆಗಳು ನಡೆಯುತ್ತಿದ್ದು ಶ್ರೀಲಂಕಾ ಪ್ರವಾಸದಲ್ಲಿನ ಸಂಜು ಸ್ಯಾಮ್ಸನ್ ಪ್ರದರ್ಶನದ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯ ಮತ್ತು 3 ಟಿ ಟ್ವೆಂಟಿ ಪಂದ್ಯಗಳಲ್ಲಿಯೂ ಆಡುವ ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್ ತೀರಾ ಕಳಪೆ ಪ್ರದರ್ಶನವನ್ನು ನೀಡಿ ಟೀಕೆಗಳಿಗೆ ಗುರಿಯಾಗಿದ್ದಾರೆ.

ಶ್ರೀಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಈ ಮೂವರಿಗೆ ಪುನಃ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅನುಮಾನ!ಶ್ರೀಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಈ ಮೂವರಿಗೆ ಪುನಃ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅನುಮಾನ!

ಮೂರನೇ ಏಕದಿನ ಪಂದ್ಯದಲ್ಲಿ 46 ಎಸೆತಗಳಿಗೆ 46 ರನ್ ಕಲೆಹಾಕಿ ಜವಾಬ್ದಾರಿಯುತ ಆಟವನ್ನಾಡಿದ್ದ ಸಂಜು ಸ್ಯಾಮ್ಸನ್ ಮೇಲೆ ಟಿ ಟ್ವೆಂಟಿ ಸರಣಿಯಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಆದರೆ ಸಂಜು ಸ್ಯಾಮ್ಸನ್ ಈ ನಿರೀಕ್ಷೆಯನ್ನು ತಲುಪುವಲ್ಲಿ ಅಕ್ಷರಶಃ ವಿಫಲರಾಗಿದ್ದಾರೆ. ಟಿ ಟ್ವೆಂಟಿ ಪಂದ್ಯಗಳನ್ನು ಚೆನ್ನಾಗಿ ಆಡಬಲ್ಲ ಸಾಮರ್ಥ್ಯವಿರುವ ಸಂಜು ಸ್ಯಾಮ್ಸನ್ 3 ಟಿ ಟ್ವೆಂಟಿ ಪಂದ್ಯಗಳಿಂದ ಕಲೆಹಾಕಿದ ಒಟ್ಟು ರನ್ ಕೇವಲ 34. ಹೀಗಾಗಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು ಇದೀಗ ಪಾಕಿಸ್ತಾನದ ಮಾಜಿ ಆಟಗಾರ ಸಲ್ಮಾನ್ ಬಟ್ ಕೂಡ ಸಂಜು ಸ್ಯಾಮ್ಸನ್ ಕುರಿತು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಸಂಜು ಸ್ಯಾಮ್ಸನ್ ಸೋಮಾರಿ ಆಟಗಾರನಂತೆ ಕಾಣುತ್ತಿದ್ದಾರೆ

ಸಂಜು ಸ್ಯಾಮ್ಸನ್ ಸೋಮಾರಿ ಆಟಗಾರನಂತೆ ಕಾಣುತ್ತಿದ್ದಾರೆ

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶ್ರೀಲಂಕಾ ಬೌಲರ್ ವನಿಂದು ಹಸರಂಗ ಓವರ್‌ನಲ್ಲಿ ಎಲ್‌ಬಿಡಬ್ಲ್ಯುಗೆ ಬಲಿಯಾದರು. 3 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ ಯಾವುದೇ ರನ್ ಕಲೆ ಹಾಕದೆ ಡಕ್ ಔಟ್ ಆಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಈ ಕುರಿತು ಮಾತನಾಡಿರುವ ಸಲ್ಮಾನ್ ಬಟ್ ವನಿಂದು ಹಸರಂಗ ಎಸೆದ ಕಷ್ಟದ ಎಸೆತಗಳನ್ನು ಎದುರಿಸಲು ಆಗುವುದಿಲ್ಲ ಎಂದರೂ ಸಹ ಆ ಎಸೆತವನ್ನು ಹೊಡೆಯಲು ಹೋಗಿ ವಿಕೆಟ್ ಒಪ್ಪಿಸಿದ್ದು ನೋಡಿದರೆ ಸಂಜು ಸ್ಯಾಮ್ಸನ್ ಓರ್ವ ಸೋಮಾರಿ ಆಟಗಾರನಂತೆ ನನಗೆ ಕಾಣುತ್ತಾರೆ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

ಕಮ್ರಾನ್ ಅಕ್ಮಲ್ ಕೂಡ ಸಂಜು ಸ್ಯಾಮ್ಸನ್ ಆಟಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ

ಕಮ್ರಾನ್ ಅಕ್ಮಲ್ ಕೂಡ ಸಂಜು ಸ್ಯಾಮ್ಸನ್ ಆಟಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ

ಸಲ್ಮಾನ್ ಬಟ್ ಮಾತ್ರವಲ್ಲದೆ ಪಾಕಿಸ್ತಾನದ ಮತ್ತೋರ್ವ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಕೂಡ ಸಂಜು ಸ್ಯಾಮ್ಸನ್ ಆಟದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ 3 ಶತಕಗಳನ್ನು ಬಾರಿಸಿದ ಅನುಭವವಿರುವ ಸಂಜು ಸ್ಯಾಮ್ಸನ್ ಈ ರೀತಿಯ ಕಳಪೆ ಇನ್ನಿಂಗ್ಸ್ ಆಡುತ್ತಾರೆ ಎಂದು ಊಹಿಸಿಯೂ ಇರಲಿಲ್ಲ ಎಂಬ ಹೇಳಿಕೆ ನೀಡುವುದರ ಮೂಲಕ ಕಮ್ರಾನ್ ಅಕ್ಮಲ್ ಬೇಸರಗೊಂಡಿದ್ದಾರೆ.

ಸಂಜು ಸ್ಯಾಮ್ಸನ್ ಆಡಿದ್ದು ಸರಿ ಇಲ್ಲಾ ಅಕ್ಮಲ್ | Oneindia Kannada
ಶ್ರೀಲಂಕಾ ಸರಣಿ ಸಂಜು ಸ್ಯಾಮ್ಸನ್ ಪಾಲಿಗೆ ಬೇಸರದ ಸಂಗತಿ ಎಂದ ರಾಹುಲ್ ದ್ರಾವಿಡ್

ಶ್ರೀಲಂಕಾ ಸರಣಿ ಸಂಜು ಸ್ಯಾಮ್ಸನ್ ಪಾಲಿಗೆ ಬೇಸರದ ಸಂಗತಿ ಎಂದ ರಾಹುಲ್ ದ್ರಾವಿಡ್

ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡಕ್ಕೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಕೂಡ ಸಂಜು ಸ್ಯಾಮ್ಸನ್ ಕುರಿತು ಪ್ರತಿಕ್ರಿಯಿಸಿದ್ದು, ಶ್ರೀಲಂಕಾ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್ ತೋರಿದ ಆಟವನ್ನು ಸ್ವತಃ ಆತನೇ ನೋಡಿಕೊಂಡರೆ ಖಂಡಿತವಾಗಿಯೂ ಆತನಿಗೆ ಶ್ರೀಲಂಕಾ ಪ್ರವಾಸ ಬೇಸರವನ್ನುಂಟುಮಾಡಲಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, July 31, 2021, 23:32 [IST]
Other articles published on Jul 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X