ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಓವಲ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಲ್ಲ'

Former Pakistan captain Salman Butt suggests no major change for India for The Oval Test

ಕರಾಚಿ: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳನ್ನು ಮುಗಿಸಿದೆ. ಸರಣಿಯೀಗ 1-1ರಿಂದ ಸಮಬಲಗೊಂಡಿದೆ. ಸೆಪ್ಟೆಂಬರ್ 2ರಂದು ಲಂಡನ್‌ನ ದ ಕೆನ್ನಿಂಗ್ಟನ್ ಓವಲ್‌ನಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಭಾರತದ ಆಡುವ ಬಳಗದಲ್ಲಿ ಬದಲಾವಣೆ ಆಗು ನಿರೀಕ್ಷೆಯಿದೆ. ಆದರೆ ಪಾಕ್ ಮಾಜಿ ಆಟಗಾರ ಸಲ್ಮನ್ ಬಟ್ ಅಂಥ ಬದಲಾವಣೆಯಾಗುವ ನಿರೀಕ್ಷೆಯಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.

ಪಿಕೆಎಲ್ ಹರಾಜು: ದಾಖಲೆ ಬೆಲೆಗೆ ಯುಪಿ ಯೋಧ ಸೇರಿದ ಪರ್ದೀಪ್ ನರ್ವಾಲ್ಪಿಕೆಎಲ್ ಹರಾಜು: ದಾಖಲೆ ಬೆಲೆಗೆ ಯುಪಿ ಯೋಧ ಸೇರಿದ ಪರ್ದೀಪ್ ನರ್ವಾಲ್

ಆರಂಭಿಕ ಮೂರೂ ಟೆಸ್ಟ್‌ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬಳಗದಲ್ಲಿ ಬಹುತೇಕ ಒಂದೇ ರೀತಿಯ ತಂಡ ಆಡಿತ್ತು. ನಾಲ್ಕನೇ ಪಂದ್ಯದಲ್ಲಾದರೂ ತಂಡದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸರಣಿ ಇಂಗ್ಲೆಂಡ್ ಗೆಲ್ಲುತ್ತದೆ ಎಂಬ ಮಾತುಗಳು ಕ್ರಿಕೆಟ್ ವಲಯದಿಂದ ಕೇಳಿ ಬರುತ್ತಿವೆ. ಆದರೆ ಪಾಕಿಸ್ತಾನದ ಮಾಜಿ ನಾಯಕ ಸಲ್ಮನ್ ಬಟ್ ತಂಡದಲ್ಲಿ ಹೆಚ್ಚಿನ ಬದಲಾವಣೆಯಾಗಲ್ಲ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ತಂಡದ ಪ್ಲೇಯಿಂಗ್ XIನಲ್ಲಿ ಬದಲಾವಣೆ ಬಗ್ಗೆ ಸುಳಿವು ನೀಡಿದ್ದ ಕೊಹ್ಲಿ

ಸುದ್ದಿಗೋಷ್ಠಿಯಲ್ಲಿ ತಂಡದ ಪ್ಲೇಯಿಂಗ್ XIನಲ್ಲಿ ಬದಲಾವಣೆ ಬಗ್ಗೆ ಸುಳಿವು ನೀಡಿದ್ದ ಕೊಹ್ಲಿ

ಹೆಡ್ಡಿಂಗ್ಲಿಯಲ್ಲಿ ನಡೆದ ತೃತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಸಹಿತ 76 ರನ್ ಸೋಲನುಭವಿಸಿತ್ತು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್‌ XIನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸತತವಾಗಿ ಆಡಲು ಒಬ್ಬರಿಗೆ ಸಾಧ್ಯವಿಲ್ಲ. ಹೀಗಾಗಿ ಕೆಲವರಿಗೆ ವಿಶ್ರಾಂತಿ ನೀಡಿ ರೊಟೇಶನ್ ರೀತಿಯಲ್ಲಿ ಆಡಿಸಬೇಕಾಗುತ್ತದೆ ಎಂದು ಹೇಳಿದ್ದರು.

ಟೀಮ್ ಇಂಡಿಯಾ ನೆಕ್ಸ್ಟ್ ಮ್ಯಾಚ್ ಗೆಲ್ಲಬೇಕಂದ್ರೆ KL ರಾಹುಲ್ ಬದ್ಲಿಗೆ ಈತ ಇರ್ಬೇಕು | Oneindia Kannada
ಪ್ಲೇಯಿಂಗ್ XIನಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆಂದು ನನಗೆ ಅನ್ನಿಸುತ್ತಿಲ್ಲ

ಪ್ಲೇಯಿಂಗ್ XIನಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆಂದು ನನಗೆ ಅನ್ನಿಸುತ್ತಿಲ್ಲ

"ವಿರಾಟ್ ಕೊಹ್ಲಿಯ ಸುದ್ದಿಗೋಷ್ಠಿ ಕೇಳಿದ ಮೇಲೂ ದ ಓವಲ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆತ ಪ್ಲೇಯಿಂಗ್ XIನಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆಂದು ನನಗೆ ಅನ್ನಿಸುತ್ತಿಲ್ಲ. ಆತ ಅಲ್ಲಿ ವೈಯಕ್ತಿಕ ಪ್ರದರ್ಶನದ ಬಗ್ಗೆ ಮಾತನಾಡಿಲ್ಲ. ಬದಲಿಗೆ ಒಂದು ತಂಡವಾಗಿ ಹೇಗೆ ಪ್ರದರ್ಶನ ನೀಡಬೇಕು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಗೆಲ್ಲೋದು ಅಥವಾ ಸೋಲೋದು ಎರಡೂ ತಂಡದ ಪ್ರದರ್ಶನವನ್ನು ಅವಲಂಬಿಸಿದೆ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಒಬ್ಬನ ಪ್ರದರ್ಶನವನ್ನೇ ಬೊಟ್ಟು ಮಾಡಿ ಹೇಳಿಕೆ ನೀಡಿಲ್ಲ. ಇದು ಒಳ್ಳೆಯ ಸಂಗತಿ," ಎಂದು ಸಲ್ಮನ್ ಬಟ್ ಹೇಳಿದ್ದಾರೆ.

ಭಾರತೀಯ ಪ್ಲೇಯಿಂಗ್ XIನಲ್ಲಿ ಏನು ಬದಲಾವಣೆ ಎಂದು ಊಹಿಸಿದ ಬಟ್

ಭಾರತೀಯ ಪ್ಲೇಯಿಂಗ್ XIನಲ್ಲಿ ಏನು ಬದಲಾವಣೆ ಎಂದು ಊಹಿಸಿದ ಬಟ್

ನಾಲ್ಕನೇ ಟೆಸ್ಟ್‌ ಪಂದ್ಯದ ವೇಳೆ ಭಾರತೀಯ ಪ್ಲೇಯಿಂಗ್ XIನಲ್ಲಿ ಏನು ಬದಲಾವಣೆ ಆಗಬಹುದು ಅನ್ನೋದನ್ನೂ ಬಟ್ ಊಹಿಸಿದ್ದಾರೆ. ಓವಲ್ ಟೆಸ್ಟ್‌ನಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಡಬಹುದು. ನಾಲ್ಕನೇ ಟೆಸ್ಟ್ ಪಂದ್ಯದ ಮೂಲಕ ಅಶ್ವಿನ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಡುತ್ತಾರೆ. ಉಳಿದಂತೆ ಭಾರತೀಯ ತಂಡ ನಿರ್ವಹಣಾ ಸಮಿತಿ ಕೂಡ ಹೆಚ್ಚಿನ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಮುಖ್ಯವಾಗಿ ಟಾಪ್ ಬ್ಯಾಟಿಂಗ್ ಆರ್ಡರ್‌ನಲ್ಲಿ ಅಂಥ ಬದಲಾವಣೆಗಳಾಗಲ್ಲ ಎಂದು ಬಟ್ ಅಭಿಪ್ರಾಯಿಸಿದ್ದಾರೆ.

ತೃತೀಯ ಟೆಸ್ಟ್‌ನಲ್ಲಿ ಇತ್ತಂಡಗಳ ಸ್ಕೋರ್‌

ತೃತೀಯ ಟೆಸ್ಟ್‌ನಲ್ಲಿ ಇತ್ತಂಡಗಳ ಸ್ಕೋರ್‌

ತೃತೀಯ ಟೆಸ್ಟ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 19, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ಅಜಿಂಕ್ಯ ರಹಾನೆ 18, ರಿಷಭ್ ಪಂತ್ 2, ರವೀಂದ್ರ ಜಡೇಜಾ 4, ಇಶಾಂತ್ ಶರ್ಮಾ 8, ಮೊಹಮ್ಮದ್ ಸಿರಾಜ್ 3 ರನ್‌ನೊಂದಿಗೆ ಭಾರತ 40.4 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 78 ರನ್ ಗಳಿಸಿತ್ತು. ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 61, ಹಸೀಬ್ ಹಮೀದ್ 68, ಡೇವಿಡ್ ಮಲನ್ 70, ಜೋ ರೂಟ್ 121, ಜಾನಿ ಬೈರ್‌ಸ್ಟೊ 29, ಜೋಸ್ ಬಟ್ಲರ್ 7, ಮೊಯೀನ್ ಅಲಿ 8, ಸ್ಯಾಮ್ ಕರನ್ 15, ಕ್ರೇಗ್ ಓವರ್‌ಟನ್ 32 ರನ್‌ ನೊಂದಿಗೆ 132.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 432 ರನ್ ಬಾರಿಸಿತ್ತು. ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 59, ಕೆಎಲ್ ರಾಹುಲ್ 8, ಚೇತೇಶ್ವರ ಪೂಜಾರ 91, ವಿರಾಟ್ ಕೊಹ್ಲಿ 55, ಅಜಿಂಕ್ಯ ರಹಾನೆ 10, ರಿಷಭ್ ಪಂತ್ 1, ರವೀಂದ್ರ ಜಡೇಜಾ 30, ಮೊಹಮ್ಮದ್ ಶಮಿ 6, ಇಶಾಂತ್ ಶರ್ಮಾ 2, ಜಸ್ಪ್ರೀತ್ ಬೂಮ್ರಾ 1 ರನ್‌ನೊಂದಿಗೆ ಭಾರತ 99.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 278 ರನ್ ಗಳಿಸಿ ಸೋಲೊಪ್ಪಿಕೊಂಡಿತು.

Story first published: Tuesday, August 31, 2021, 0:41 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X