ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗಿಂತ ತಾನು ನಂ.1 ಎಂದಿದ್ದ ಖುರ್ರಂ ಮಂಝೂರ್ ಹೇಳಿಕೆಗೆ ಪಾಕ್‌ನ ಮಾಜಿ ಕ್ರಿಕೆಟಿಗನಿಂದಲೇ ಟೀಕೆ

Former Pakistan Cricketer Salman Butt Criticizes Khurram Manzoors statement Over Captain Virat Kohli

ಲಿಸ್ಟ್ ಎ ಕ್ರಿಕೆಟ್‌ನಲ್ಲಿನ ತಮ್ಮ ದಾಖಲೆಯು ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗಿಂತ ಉತ್ತಮವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟಿಗ ಖುರ್ರಂ ಮಂಝೂರ್ ಹೇಳಿದ್ದರು.

ಇದು ಭಾರತೀಯ ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಖುರ್ರಂ ಮಂಝೂರ್ ಹೇಳಿಕೆ ವಿರುದ್ಧ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಾದಿರ್ ಅಲಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಇತ್ತೀಚೆಗೆ ಖುರ್ರಂ ಮಂಝೂರ್ ಕಾಣಿಸಿಕೊಂಡಿದ್ದರು. 16 ಟೆಸ್ಟ್‌ ಪಂದ್ಯಗಳು, ಏಳು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿರುವ ಖುರ್ರಂ ಮಂಝೂರ್, ತಮ್ಮ ಲಿಸ್ಟ್ ಎ ಅಂಕಿಸಂಖ್ಯೆಗಳು ವಿರಾಟ್ ಕೊಹ್ಲಿಗಿಂತ ಉತ್ತಮವಾಗಿವೆ ಎಂದು ಹೇಳಿದ್ದರು.

ಸೂರ್ಯಕುಮಾರ್ ಯಾದವ್ ಸಾಮರ್ಥ್ಯ, ಭವಿಷ್ಯದ ಬಗ್ಗೆ ಆಶಿಶ್ ನೆಹ್ರಾ ನೀಡಿದ ಸಲಹೆ ಏನು?ಸೂರ್ಯಕುಮಾರ್ ಯಾದವ್ ಸಾಮರ್ಥ್ಯ, ಭವಿಷ್ಯದ ಬಗ್ಗೆ ಆಶಿಶ್ ನೆಹ್ರಾ ನೀಡಿದ ಸಲಹೆ ಏನು?

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವುದು ನನ್ನ ಉದ್ದೇಶವಲ್ಲ. ಆದರೆ ದೇಶೀಯ ಕ್ರಿಕೆಟ್‌ನಲ್ಲಿ ಅವರ ಸಾಧನೆ ಎತ್ತಿ ತೋರಿಸುತ್ತಿದ್ದೇನೆ ಎಂದು ಸಬೂಬು ನೀಡಿದ್ದರು.

ವಿರಾಟ್ ಕೊಹ್ಲಿ ನನ್ನ ಹಿಂದೆ ಇದ್ದಾರೆ ಎಂದಿದ್ದ ಮಂಝೂರ್

ವಿರಾಟ್ ಕೊಹ್ಲಿ ನನ್ನ ಹಿಂದೆ ಇದ್ದಾರೆ ಎಂದಿದ್ದ ಮಂಝೂರ್

"ನಾನು ನನ್ನನ್ನು ವಿರಾಟ್ ಕೊಹ್ಲಿಯೊಂದಿಗೆ ಹೋಲಿಸಿಕೊಳ್ಳುತ್ತಿಲ್ಲ. ಆದರೆ, ವಾಸ್ತವವಾಗಿ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಟಾಪ್-10ರಲ್ಲಿ ಯಾರೇ ಇದ್ದರೂ, ನಾನು ವಿಶ್ವದ ನಂ.1. ಪ್ರತಿ ಆರು ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸುವ ಮೂಲಕ ವಿರಾಟ್ ಕೊಹ್ಲಿ ನನ್ನ ಹಿಂದೆ ಇದ್ದಾರೆ. ನಾನು ಪ್ರತಿ 5.68 ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸುವುದು ವಿಶ್ವದಾಖಲೆಯಾಗಿದೆ. ಕಳೆದ 10 ವರ್ಷಗಳಲ್ಲಿ ನನ್ನ ಸರಾಸರಿ 53 ಆಗಿದೆ. ಲಿಸ್ಟ್ ಎ ಕ್ರಿಕೆಟ್‌ಗೆ ಸಂಬಂಧಿಸಿದಂತೆ ನಾನು ವಿಶ್ವದಲ್ಲಿ ಐದನೇ ಶ್ರೇಯಾಂಕದಲ್ಲಿದ್ದೇನೆ," ಎಂದು ಖುರ್ರಂ ಮಂಝೂರ್ ಹೇಳಿದ್ದರು.

ಇದೀಗ ಖುರ್ರಂ ಮಂಝೂರ್ ನೀಡಿದ ಹೇಲಿಕೆಗಳನ್ನು "ಅಪ್ರಸ್ತುತ' ಎಂದು ಪಾಕಿಸ್ತಾನದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಹೇಳಿದ್ದಾರೆ. ಮಂಝೂರ್ ಹೇಳಿಕೆಯನ್ನು ತಿರಸ್ಕರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಅತ್ಯುತ್ತಮ ದಾಖಲೆಯನ್ನು ಎತ್ತಿ ತೋರಿಸಿದರು.

ವಿರಾಟ್ ಕೊಹ್ಲಿ 250ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ್ದಾರೆ

ವಿರಾಟ್ ಕೊಹ್ಲಿ 250ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ್ದಾರೆ

"ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗಿಂತ ಮಂಝೂರ್ ಅವರ ಅಂಕಿಸಂಖ್ಯೆಗಳ ದರವು ಉತ್ತಮವಾಗಿದೆ ಎಂದ ಸಲ್ಮಾನ್ ಬಟ್, ಇದು ಸಾಕಷ್ಟು ನ್ಯಾಯೋಚಿತವಾಗಿದೆ. ಆದರೆ, ಇಲ್ಲಿ ಒಂದು ವಿಷಯ ಕಾಣೆಯಾಗಿದೆ. ವಿರಾಟ್ ಕೊಹ್ಲಿ 250ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯ ದರವನ್ನು ಹೊಂದಿದ್ದಾರೆ," ಎಂದು ಸಲ್ಮಾನ್ ಬಟ್ ಪ್ರತಿಕ್ರಿಯಿಸಿದ್ದಾರೆ.

"ನೀವು ಇಲ್ಲಿ ಖುರ್ರಂ ಮಂಝೂರ್ ಮತ್ತು ವಿರಾಟ್ ಕೊಹ್ಲಿ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ದೇಶೀಯ ಕ್ರಿಕೆಟ್‌ಗಿಂತ ಅಂತಾರಾಷ್ಟ್ರೀಯ ಕ್ರಿಕೆಟ್ ದಾಖಲೆಗಳು ಮೈಲುಗಳಷ್ಟು ಮುಂದಿದೆ. ಹಾಗಗಿ ಇದು ಅಪ್ರಸ್ತುತವಾಗಿದೆ," ಎಂದು ಸಲ್ಮಾನ್ ಬಟ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಮೂರು ವರ್ಷ ಅಂತಾರಾಷ್ಟ್ರೀಯ ಶತಕ ಗಳಿಸದ ವಿರಾಟ್ ಕೊಹ್ಲಿ

ಮೂರು ವರ್ಷ ಅಂತಾರಾಷ್ಟ್ರೀಯ ಶತಕ ಗಳಿಸದ ವಿರಾಟ್ ಕೊಹ್ಲಿ

ಗಮನಾರ್ಹ ಅಂಶವೆಂದರೆ, ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಅಂತಾರಾಷ್ಟ್ರೀಯ ಶತಕ ಗಳಿಸದ ವಿರಾಟ್ ಕೊಹ್ಲಿ, ಕಳೆದ ವರ್ಷ ಅಫ್ಘಾನಿಸ್ತಾನ ವಿರುದ್ಧದ ಏಷ್ಯಾ ಕಪ್‌ನಲ್ಲಿ ತಮ್ಮ ಶತಕದ ಬರವನ್ನು ಕೊನೆಗೊಳಿಸಿದರು. ಅದು ಟಿ20 ಕ್ರಿಕೆಟ್‌ನಲ್ಲಿ ಅವರ ಮೊದಲ ಶತಕವಾಗಿತ್ತು.

ಅಂದಿನಿಂದ 34 ವರ್ಷದ ವಿರಾಟ್ ಕೊಹ್ಲಿ ಹಿಂತಿರುಗಿ ನೋಡಲಿಲ್ಲ. ಕಳೆದ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಸದ್ಯ ಕೊನೆಯ ಏಳು ಏಕದಿನ ಪಂದ್ಯಗಳಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ.

Story first published: Thursday, January 26, 2023, 19:11 [IST]
Other articles published on Jan 26, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X