ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರನಿಗೆ ಕೊರೊನಾ ಪಾಸಿಟಿವ್

Former Pakistan Opener Taufeeq Umar Tests Positive For Coronavirus

ಕೊರೊನಾ ಪಾಕಿಸ್ತಾನದಲ್ಲೂ ಅಟ್ಟಹಾಸಗೈಯ್ಯುತ್ತಿದೆ. ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರಿಗೆ ಕೊರೊನಾ ವೈರಸ್ ತಗುಲಿರುವುದು ಧೃಡಪಟ್ಟಿದೆ. ಟೆಸ್ಟ್ ಮತ್ತು ಏಕದಿನ ತಂಡದ ಸದಸ್ಯನಾಗಿದ್ದ ಪಾಕಿಸ್ತಾನ ತೌಫಿಕ್ ಉಮರ್ ಕೊರೊನಾ ವೈರಸ್‌ಗೆ ತುತ್ತಾಗಿರುವ ಪಾಕಿಸ್ತಾನದ ಕ್ರಿಕೆಟಿಗನಾಗಿದ್ದಾರೆ.

ಇಲ್ಲಿಯ ವರೆಗೂ ಫುಟ್ಬಾಲ್‌ನಲ್ಲಿ ಸಾಕಷ್ಟು ಆಟಗಾರರಿಗೆ ವೈರಸ್ ಧೃಡಪಟ್ಟಿದ್ದರೂ ಕ್ರಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ಆಟಗಾರರನ್ನು ಈ ವೈರಸ್ ಕಾಡಿರಲಿಲ್ಲ. ಆದರೆ ತೌಫಿಕ್ ಉಮರ್ ಕೊರೊನಾ ವೈರಸ್‌ಗೆ ತುತ್ತಾಗುವ ಮೂಲಕ ಕ್ರಿಕೆಟ್‌ನಲ್ಲಿ ಕೊರೊನಾ ವೈರಸ್‌ಗೆ ತುತ್ತಾದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿದ್ದಾರೆ.

ಎಂಜಲಿನ ಬಳಕೆ ನಿಷೇಧ ಸಾಧ್ಯತೆ: ಪಾಲನೆ ಕಷ್ಟ ಸಾಧ್ಯ ಎಂದ ಆಸಿಸ್ ಮಾಜಿ ವೇಗಿಎಂಜಲಿನ ಬಳಕೆ ನಿಷೇಧ ಸಾಧ್ಯತೆ: ಪಾಲನೆ ಕಷ್ಟ ಸಾಧ್ಯ ಎಂದ ಆಸಿಸ್ ಮಾಜಿ ವೇಗಿ

ತೌಫಿಕ್ ಉಮರ್ ಪಾಕಿಸ್ತಾನದ ಪರವಾಗಿ ಏಕದಿನ ಪಂದ್ಯಕ್ಕಿಂತಲೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2001ರಿಂದ 2004ರ ಬರೆಗಿನ ಟೆಸ್ಟ್ ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರವೇ ತೌಫಿಕ್ ಆಡಿರಲಿಲ್ಲ. 44 ಟೆಸ್ಟ್ ಪಂದ್ಯಗಳಲ್ಲಿ ತೌಫಿಕ್ ಉಮರ್ 2963 ರನ್ ಗಳಿಸಿದ್ದರೆ, 22 ಏಕದಿನ ಪಂದ್ಯಗಳಲ್ಲಿ 504 ರನ್ ಗಳಿಸಿದ್ದಾರೆ.

2010ರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತೌಫಿಕ್ ಉಮರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನವ್ನು ಮಾಡಿದ್ದರು. ಬಳಿಕ ಉತ್ತಮ ಪ್ರದರ್ಶನವನ್ನು ನೀಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಒಂದು ಅದ್ಭುತ ಶತಕವನ್ನು ಬಾರಿಸಿದ್ದರೆ ಶ್ರೀಲಂಕಾ ವಿರುದ್ಧ ಯುಎಇನಲ್ಲಿ ನಡೆದ ಪಂದ್ಯದಲ್ಲಿ ದ್ವಿಶತಕವನ್ನೂ ಬಾರಿಸಿದ್ದರು.

ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಾ ಸೌರವ್ ಗಂಗೂಲಿ ?ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಾ ಸೌರವ್ ಗಂಗೂಲಿ ?

ಈ ಪ್ರದರ್ಶನದ ಬಳಿಕ ಮತ್ತೆ ಪಾಕಿಸ್ತಾನ ಟೆಸ್ಟ್ ತಂಡದ ಖಾಯಂ ಸದಸ್ಯರಾದರು ತೌಫಿಕ್ ಉಮರ್. 2012ರ ಶ್ರೀಲಂಕಾ ವಿರುದ್ಧದ ಸರಣಿಯವರೆಗೂ ಪಾಕಿಸ್ತಾನದ ತಂಡದಲ್ಲಿದ್ದ ಅವರು ಬಳಿಕ ತಂಡದಿಂದ ಹೊರಬಿದ್ದರು. ಬಳಿಕ 2014ರಲ್ಲಿ ಒಂದು ಟೆಸ್ಟ್ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದ ಉಮರ್ ಇದರಲ್ಲಿ 16 ಮತ್ತು 4 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅಲ್ಲಿಗೆ ತೌಫಿಕ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಅಂತ್ಯವಾಗಿತ್ತು.

Story first published: Sunday, May 24, 2020, 15:29 [IST]
Other articles published on May 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X