ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ಹಿಂದಿನ ಸತ್ಯ ಬಾಯ್ಬಿಟ್ಟ ಪಾಕ್ ಕ್ರಿಕೆಟರ್ ಮೊಹಮ್ಮದ್ ಅಮೀರ್

Former Pakistan Player Mohammad Amir reveals why he decided to retire from international cricket

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿಯ ನಿರ್ಧಾರ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೀಡುಮಾಡಿತ್ತು. ಆಗಿನ್ನೂ 28ರ ಹರೆಯದವರಾಗಿದ್ದ ಅಮೀರ್ 2020ರ ಡಿಸೆಂಬರ್ ವೇಳೆ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು.

WTC ಫೈನಲ್‌ ಆಡಲಿರುವ ಭಾರತ ತಂಡದಲ್ಲಿ ಕೊರತೆಯಿದೆ: ಪಾಕ್ ಮಾಜಿ ಕ್ರಿಕೆಟರ್WTC ಫೈನಲ್‌ ಆಡಲಿರುವ ಭಾರತ ತಂಡದಲ್ಲಿ ಕೊರತೆಯಿದೆ: ಪಾಕ್ ಮಾಜಿ ಕ್ರಿಕೆಟರ್

ನಿವೃತ್ತಿ ವೇಳೆಗೆ ಇಬ್ಬರು ವ್ಯಕ್ತಿಗಳತ್ತ ಬೊಟ್ಟು ಮಾಡಿ ಸುಳಿವು ನೀಡಿ ಮೊಹಮ್ಮದ್ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕನ್ನು ಕೊನೆಗೊಳಿಸಿದ್ದರು. ಆ ಇಬ್ಬರು ಯಾರೆಂದರೆ ಹೆಡ್ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಬೌಲಿಂಗ್ ಕೋಚ್ ವಾಕರ್ ಯೂನಿಸ್.

ಸಣ್ಣ ವಯಸ್ಸಿನಲ್ಲೇ ತಾನು ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸುವುದಕ್ಕೆ ತಂಡದಲ್ಲಿ ತನಗಾಗುತ್ತಿದ್ದ ಅವಮಾನ, ಅಗೌರವವೇ ಕಾರಣ ಎಂದು ಅಮೀರ್ ಹೇಳಿದ್ದಾರೆ. ತಂಡದಲ್ಲಿ ತನಗೆ ಸರಿಯಾದ ಗೌರವ ಸಿಗುತ್ತಿರಲಿಲ್ಲ. ಹೀಗಾಗಿ ತಾನು ಕ್ರಿಕೆಟ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದೆ ಎಂದು ಅಮೀರ್ ತಿಳಿಸಿದ್ದಾರೆ.

ಶ್ರೀಲಂಕಾ ಪ್ರವಾಸ ಸರಣಿಗೆ ಭಾರತಕ್ಕೆ ಶಿಖರ್ ಧವನ್ ನಾಯಕ?!ಶ್ರೀಲಂಕಾ ಪ್ರವಾಸ ಸರಣಿಗೆ ಭಾರತಕ್ಕೆ ಶಿಖರ್ ಧವನ್ ನಾಯಕ?!

ಪಾಕ್ ಪ್ಯಾಶನ್ ಡಾಟ್ ನೆಟ್‌ ಜೊತೆ ಮಾತನಾಡಿದ ಅಮೀರ್, 'ನೀವು ಪ್ರೀತಿಸುವ ದೇಶದ ಪರ ಆಡುತ್ತಿದ್ದವರು ನಿವೃತ್ತಿ ನಿರ್ಧಾರ ಪ್ರಕಟಿಸುತ್ತೀರೆಂದರೆ ಅದು ಸುಲಭವಿಲ್ಲ. ನಾನೂ ಬಹಳಷ್ಟು ಸಾರಿ ಯೋಚಿ, ನನಗೆ ಹತ್ತಿರದವರೊಂದಿಗೆ ವಿಚಾರ ಹಂಚಿಕೊಂಡು ನಿವೃತ್ತಿ ನಿರ್ಧಾರಕ್ಕೆ ಬಂದೆ,' ಎಂದಿದ್ದಾರೆ.

'ನನ್ನ ನಿವೃತ್ತಿಗೆ ಯಾರು ಕಾರಣ, ಏನು ಕಾರಣ ಎಂದೆಲ್ಲಾ ಸಂಗತಿಗಳನ್ನು ಸಂಪೂರ್ಣವಾಗಿ ನಾನಿಲ್ಲಿ ಹೇಳಿದರೆ ಅದು ತುಂಬಾ ಕೆಟ್ಟದಾಗಿ ಪರಿಣಾಮ ಬೀರಲಿದೆ. ನಮ್ಮ ಆಟಗಾರರಿಗೆ ಮುಖ್ಯವಾಗಿ ಯುವ ಆಟಗಾರರ ಭವಿಷ್ಯ ನಾನು ಎದುರಿಸಿದಂತೆ ಆಗದಿರಲಿ. ನಮ್ಮ ಯುವ ಆಟಗಾರರು ಮನನೊಂದು ನನ್ನಂತೆ ಸಣ್ಣ ವಯಸ್ಸಿನಲ್ಲಿ ನಿವೃತ್ತಿ ಘೋಷಿಸುವಂತೆ ಆಗದಿರಲಿ,' ಎಂದು ಅಮೀರ್ ಹೇಳಿದ್ದಾರೆ.

Story first published: Tuesday, May 11, 2021, 21:05 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X