ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ತಂಡ ಜಾತಿ, ಮತ ಮೀರಿ ನಡೆದುಕೊಳ್ಳುತ್ತಿದೆ: ಶೋಯೆಬ್ ಅಖ್ತರ್

Former Pakistan seamer Shoaib Akhtar opinioned on team Indias dressing room

ಇಸ್ಲಮಾಬಾದ್: ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾದ ಗೆಲುವು ಕ್ರಿಕೆಟ್ ಸಮೂಹದ ಮೆಚ್ಚುಗೆ ಪಾತ್ರವಾಗಿದೆ. ಅಡಿಲೇಡ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್‌ನಲ್ಲಿ ಭಾರತ ಹೀನಾಯವಾಗಿ ಸೋತಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಇನ್ನಿಂಗ್ಸ್‌ ಮುಗಿಸಿ ಮುಖಭಂಗ ಅನುಭವಿಸಿತ್ತು. ಆದರೆ ದ್ವಿತೀಯ ಟೆಸ್ಟ್‌ನಲ್ಲಿ ಭಾರತ ಆಡಿದ ಪರಿ, ಕಮ್‌ಬ್ಯಾಕ್‌ ಮಾಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು.

ಆಸೀಸ್ ವಿರುದ್ಧದ 3ನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು ಪ್ರಕಟ!ಆಸೀಸ್ ವಿರುದ್ಧದ 3ನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು ಪ್ರಕಟ!

ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಕೆಎಲ್ ರಾಹುಲ್, ಭುವನೇಶ್ವರ್ ಕುಮಾರ್ ಇಂಥ ಪ್ರಮುಖ ಆಟಗಾರರಿರಲಿಲ್ಲ. ಆದರೂ ಭಾರತ ಗೆದ್ದಿದ್ದು ಅನೇಕ ಕ್ರಿಕೆಟ್ ದಿಗ್ಗಜರಿಗೆ ಖುಷಿ ನೀಡಿತ್ತು. ಮುಖ್ಯವಾಗಿ ಅಜಿಂಕ್ಯ ರಹಾನೆಯ ನಾಯಕತ್ವದ ಬಗ್ಗೆ ಹೆಚ್ಚಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಐತಿಹಾಸಿಕ ದಾಖಲೆ ನಿರ್ಮಿಸಿದ ಪಾಕಿಸ್ತಾನ ಕ್ರಿಕೆಟರ್ ಫವಾದ್ ಆಲಂ!ಐತಿಹಾಸಿಕ ದಾಖಲೆ ನಿರ್ಮಿಸಿದ ಪಾಕಿಸ್ತಾನ ಕ್ರಿಕೆಟರ್ ಫವಾದ್ ಆಲಂ!

ಪಾಕಿಸ್ತಾನದ ಮಾಜಿ ಮಾರಕ ವೇಗಿ ಶೋಯೆಬ್ ಅಖ್ತರ್ ಕೂಡ ಅಜಿಂಕ್ಯ ರಹಾನೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಟೀಮ್ ಇಂಡಿಯಾದ ಬಗ್ಗೆ ಅನಿಸಿಕೊಗಳನ್ನು ಹಂಚಿಕೊಂಡಿದ್ದಾರೆ.

ರಹಾನೆ ನಾಯಕತ್ವ ಚುರುಕಾಗಿತ್ತು

ರಹಾನೆ ನಾಯಕತ್ವ ಚುರುಕಾಗಿತ್ತು

ಮೆಲ್ಬರ್ನ್‌ನಲ್ಲಿ ಭಾರತದ ಪ್ರದರ್ಶನದ ಬಗ್ಗೆ 'ಸ್ಪೋರ್ಟ್ಸ್‌ ತಕ್' ಜೊತೆ ಮಾತನಾಡಿದ ಶೋಯೆಬ್ ಅಖ್ತರ್, 'ತನ್ನ ಬ್ಯಾಟಿಂಗ್‌ ಮತ್ತು ಪ್ರದರ್ಶನದ ಮೂಲಕ ಅಜಿಂಕ್ಯ ರಹಾನೆ ತಾನೊಂದು ಭಾರತವೆಂಬ ಬ್ರ್ಯಾಂಡ್‌ನಿಂದ ಬಂದಿರುವುದಾಗಿ ಖಚಿತಪಡಿಸಿದರು. ಅವರ ನಾಯಕತ್ವ ಕೂಡ ಚುರುಕಾಗಿತ್ತು. ಬೌಲಿಂಗ್‌ನಲ್ಲಿ ಅವರು ಮಾಡುತ್ತಿದ್ದ ಬದಲಾವಣೆ, ಜಸ್‌ಪ್ರೀತ್‌ ಬೂಮ್ರಾ ಅವರನ್ನು ಅವರು ಬಳಸಿಕೊಂಡ ಬಗೆ, ಮೊಹಮ್ಮದ್ ಸಿರಾಜ್ ಅವರನ್ನು ಆಡಿಸಿದ ರೀತಿ ಎಲ್ಲಾ ಚೆನ್ನಾಗಿತ್ತು,' ಎಂದಿದ್ದಾರೆ.

ಚೀಲದಲ್ಲಿ ಮುಚ್ಚಿ ಹೊಡೆಯುವಂತೆ ಸೋಲಿಸಿದೆ

ಚೀಲದಲ್ಲಿ ಮುಚ್ಚಿ ಹೊಡೆಯುವಂತೆ ಸೋಲಿಸಿದೆ

ತನ್ನ ಯೂ ಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಖ್ತರ್, 'ಒಬ್ಬ ವ್ಯಕ್ತಿಯನ್ನು ಚೀಲದಲ್ಲಿ ಮುಚ್ಚಿ ಹೊಡೆಯುವಂತೆ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದೆ. ತಮ್ಮ ಪಾತ್ರಗಳನ್ನು ಭಾರತ ಅವಿತಿಟ್ಟಿಲ್ಲ, ಬದಲಿಗೆ ಬೇಕಾದಲ್ಲಿ ಸರಿಯಾಗಿ ಬಳಸಿಕೊಂಡಿದೆ. ಆಳವಾದ ಬಿಕ್ಕಟ್ಟಿನಲ್ಲಿದ್ದಾಗ ಟೀಮ್ ಇಂಡಿಯಾ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದೆ. ಇದು ಟೀಮ್ ಇಂಡಿಯಾದ ನಿಜವಾದ ವರ್ತನೆ,' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಭಾರತ ಜಾತಿ, ಮತ ಮೀರಿ ನಡೆದುಕೊಳ್ಳುತ್ತೆ

ಭಾರತ ಜಾತಿ, ಮತ ಮೀರಿ ನಡೆದುಕೊಳ್ಳುತ್ತೆ

'ಮೊಹಮ್ಮದ್ ಸಿರಾಜ್ ತನ್ನ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದರು. ಆದರೆ ಆತನಿಗೆ ಆತನ ತಂಡದ ಬೆಂಬಲ ದೊರೆಯಿತು. ಭಾರತ ತಂಡದ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಆಟಗಾರರ ಮಧ್ಯೆ ಜಾತಿ, ಮತ, ಜನಾಂಗಕ್ಕೆ ಮೀರಿದ ನಂಬಿಕೆಯಿದೆ ಅನ್ನೋದನ್ನು ಇದು ತೋರಿಸುತ್ತದೆ. ಬಹುಶಃ ಸಿರಾಜ್ ಅಪ್ಪನ ಪಾಲಿಗೆ ಇಂಥದ್ದೊಂದು ಕ್ಷಣ ಅತೀ ವಿಶೇಷ ಅನ್ನಿಸುತ್ತಿತ್ತು. ಆದರೆ ದುರದೃಷ್ಟವಶಾತ್ ಈ ಬಂಗಾರದ ಕ್ಷಣವನ್ನು ಸಿರಾಜ್ ಅಪ್ಪನಿಗೆ ನೋಡಲಾಗಲಿಲ್ಲ,' ಎಂದು ಅಖ್ತರ್ ಭಾರತ ಕ್ರಿಕೆಟ್ ತಂಡವನ್ನು ಶ್ಲಾಘಿಸಿದ್ದಾರೆ.

Story first published: Friday, January 1, 2021, 20:16 [IST]
Other articles published on Jan 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X