ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ವಿರುದ್ಧ ಮುಂಬೈನಲ್ಲಿ ಹರ್ಭಜನ್ ಆಡಿಸುವಂತೆ ಪ್ರಗ್ಯಾನ್ ಓಜಾ ಮನವಿ

Former spinner Pragyan Ojha backs KKR to persist with Harbhajan Singh in Mumbai

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಬುಧವಾರ 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಅನುಭವಿಗಳನ್ನು ಹೆಚ್ಚಾಗಿ ಹೊಂದಿರುವ ಈ ಎರಡು ತಂಡಗಳಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದ್ದು ಈ ಪಂದ್ಯಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಈ ಪಂದ್ಯದಲ್ಲಿ ಅನುಭವಿ ಹರ್ಭಜನ್ ಸಿಂಗ್‌ಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆಡುವ ಬಳಗದಲ್ಲಿ ಅವಕಾಶವನ್ನು ನೀಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಶೇಷ ಮನವಿಗೆ ಓಜಾ ಪ್ರಮುಖ ಕಾರಣವನ್ನು ಕೂಡ ನೀಡಿದ್ದಾರೆ.

ಸಿ ಎಸ್ ಕೆ ಜೀವಮಾನ ಸಾಧನೆಯನ್ನು ಮುರಿದುಹಾಕಿದ ಡೆಲ್ಲಿ ಕ್ಯಾಪಿಟಲ್ಸ್ಸಿ ಎಸ್ ಕೆ ಜೀವಮಾನ ಸಾಧನೆಯನ್ನು ಮುರಿದುಹಾಕಿದ ಡೆಲ್ಲಿ ಕ್ಯಾಪಿಟಲ್ಸ್

ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸುದೀರ್ಘ ಕಾಲ ಆಡಿದ ಅನುಯಭವವವನ್ನು ಹೊಂದಿದ್ದಾರೆ. 2008 ರಿಂದ 2017ರ ವರೆಗೆ ಹರ್ಭಜನ್ ಮುಂಬೈ ತಂಡದ ಭಾಗವಾಗಿದ್ದು ಸಾಕಷ್ಟು ಪಂದ್ಯಗಳನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ್ದಾರೆ. ಈ ಅನುಭವ ಕೊಲ್ಕತ್ತಾ ನೈಟ್ ರೈಡರ್ಸ್‌ಗೆ ನೆರವಾಗಲಿದೆ ಎಂದು ಪ್ರಗ್ಯಾನ್ ಓಜಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಹರ್ಭಜನ್ ಸಿಂಗ್ ಅವರನ್ನು ಕೈ ಬಿಡುವುದು ಕೆಕೆಆರ್‌ಗೆ ದೊಡ್ಡ ಹಿನ್ನೆಡೆಯಾಬಹುದು. ಯಾಕೆಂದರೆ ಹರ್ಭಜನ್ ಸಿಂಗ್‌ಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಾಕಷ್ಟು ಆಡಿದ ಅನುಭವವಿದೆ. ಜೊತೆಗೆ ಒಟ್ಟಾರೆ ಅನುಭವವನ್ನು ಗಮನಿಸಿದಾಗಲೂ ಹರ್ಭಜನ್ ಕೆಕೆಆರ್‌ನ ಎಲ್ಲಾ ಆಟಗಾರರಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ ಎಂದು ಪ್ರಗ್ಯಾನ್ ಓಜಾ ತಿಳಿಸಿದ್ದಾರೆ.

ನಿಮ್ಮಂತೆ ಯಾರೂ ಇಲ್ಲ ; ಧೋನಿ ಕುರಿತು ಚೇತನ್ ಸಕಾರಿಯಾ ಮನದಾಳದ ಮಾತುನಿಮ್ಮಂತೆ ಯಾರೂ ಇಲ್ಲ ; ಧೋನಿ ಕುರಿತು ಚೇತನ್ ಸಕಾರಿಯಾ ಮನದಾಳದ ಮಾತು

ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿರುವ ಪ್ರಗ್ಯಾನ್ ಓಜಾ ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಮೈದಾನದಲ್ಲಿ ಮತ್ತಷ್ಟು ಚುರುಕಿನಿಂದ ಇರಬೇಕೆಂದು ಸಲಹೆ ನೀಡಿದ್ದಾರೆ. ಪೂರ್ವ ನಿರ್ಧರಿತ ಯೋಜನೆಗಳನ್ನು ಪಾಲಿಸುವುದರ ಬಲದಾಗಿ ಸಂದರ್ಭಕ್ಕೆ ತಕ್ಕನಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಓಜಾ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, April 21, 2021, 18:30 [IST]
Other articles published on Apr 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X