ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹುಟ್ಟುಹಬ್ಬದಂದೇ ಯೋ ಮಹೇಶ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ

Former Tamil Nadu seamer Yo Mahesh retires from all forms of cricket

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ನ ವೇಗಿ, ತಮಿಳು ನಾಡು ತಂಡದ ವಿಜಯಕುಮಾರ್ ಯೋ ಮಹೇಶ್ ಸೋಮವಾರ (ಡಿಸೆಂಬರ್ 21) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಡಿಸೆಂಬರ್ 21ರಂದು ಯೋ ಮಹೇಶ್ 33ನೇ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ. ಹುಟ್ಟು ಹಬ್ಬದಂದೇ ಮಹೇಶ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

28ರ ಹರೆಯದಲ್ಲಿ ನಿವೃತ್ತಿ ಹೇಳಲು ಅವರಿಬ್ಬರು ಕಾರಣ: ಪಾಕ್ ದಿಗ್ಗಜರ ಬಗ್ಗೆ ಆಮಿರ್ ಕೆಂಡ28ರ ಹರೆಯದಲ್ಲಿ ನಿವೃತ್ತಿ ಹೇಳಲು ಅವರಿಬ್ಬರು ಕಾರಣ: ಪಾಕ್ ದಿಗ್ಗಜರ ಬಗ್ಗೆ ಆಮಿರ್ ಕೆಂಡ

50 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿರುವ ಯೋ ಮಹೇಶ್, 1119 ರನ್, 108 ವಿಕೆಟ್ ಪಡೆದಿದ್ದಾರೆ. ಇನ್ನು 61 ಲಿಸ್ಟ್ ಎ ಪಂದ್ಯಗಳಲ್ಲಿ 326 ರನ್, 93 ವಿಕೆಟ್‌ಗಳು, 18 ಐಪಿಎಲ್ ಪಂದ್ಯಗಳಲ್ಲಿ 21 ವಿಕೆಟ್‌ ದಾಖಲೆ ಹೊಂದಿದ್ದಾರೆ. ಬೌಲಿಂಗ್ ಆಲ್ ರೌಂಡರ್ ಆಗಿರುವ ಮಹೇಶ್ ಡೆಲ್ಲಿ ಕ್ಯಾಪಿಟಲ್ಸ್ ಪರವೂ ಆಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಯಶಸ್ವಿ ಕಂಡು ಸಂಭ್ರಮಿಸುತ್ತಿರುವ ಆಟಗಾರರಲ್ಲಿ ಯೋ ಮಹೇಶ್ ಕೂಡ ಒಬ್ಬರು. ಐಪಿಎಲ್ ಉದ್ಘಾಟನಾ ಸೀಸನ್‌ನಲ್ಲಿ ಮಹೇಶ್ ಡೆಲ್ಲಿ ಕ್ಯಾಪಿಟಲ್ಸ್ ಪರ ಅತೀ ಹೆಚ್ಚು ವಿಕೆಟ್ ಪಡೆದವರಲ್ಲಿ ಗುರುತಿಸಿಕೊಂಡಿದ್ದರು. ಆ ಸೀಸನ್‌ನಲ್ಲಿ ಮಹೇಶ್ 8.77ರ ಎಕಾನಮಿಯಂತೆ 16 ವಿಕೆಟ್ ಪಡೆದಿದ್ದರು.

ಬಾಕ್ಸಿಂಗ್ ರಿಂಗ್‌ನಲ್ಲೊಂದು ರೋಚಕ ಕದನ: ಕಾಲಮ್ ಸ್ಮಿತ್ ವಿರುದ್ಧ ಗೆದ್ದು ಬೀಗಿದ ಅಲ್ವರೇಜ್ಬಾಕ್ಸಿಂಗ್ ರಿಂಗ್‌ನಲ್ಲೊಂದು ರೋಚಕ ಕದನ: ಕಾಲಮ್ ಸ್ಮಿತ್ ವಿರುದ್ಧ ಗೆದ್ದು ಬೀಗಿದ ಅಲ್ವರೇಜ್

ಚೆನ್ನೈ ಸೂಪರ್ ಕಿಂಗ್ಸ್‌ ಸೇರಿಕೊಂಡಿದ್ದ ಯೋ ಮಹೇಶ್, ಅಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಬಳಿಕ ಹಲವಾರು ಗಾಯದ ಸಮಸ್ಯೆಗಳಿಗೆ ಈಡಾದ ಮಹೇಶ್, ಲಂಡನ್‌ಗೆ ಹೋಗಿ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದರು. 2017ರಲ್ಲಿ ಪ್ರಥಮದರ್ಜೆ ಕ್ರಿಕೆಟ್‌ಗೆ ವಾಪಸ್ಸಾಗಿದ್ದ ಮಹೇಶ್, ಮುಂಬೈ ವಿರುದ್ಧ ಪಂದ್ಯವೊಂದರಲ್ಲಿ 2 ವಿಕೆಟ್ ಪಡೆದಿದ್ದರಲ್ಲದೆ ಅಜೇಯ 103 ರನ್ ಕೂಡ ಬಾರಿಸಿದ್ದರು.

Story first published: Monday, December 21, 2020, 12:41 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X