ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ರಾವಿಡ್ ನೀಡಿದ ಸಲಹೆಯನ್ನು ಸ್ಮರಿಸಿಕೊಂಡ ವೆಸ್ಟ್ ಇಂಡೀಸ್ ಮಾಜಿ ವೇಗಿ

Former West Indies Pacer Tino Best Lauds India Great Rahul Dravid

ಟೀಮ್ ಇಂಡಿಯಾದ ಆಟಗಾರ ರಾಹುಲ್ ದ್ರಾವಿಡ್ ಅವರ ಶ್ರೇಷ್ಠತೆಯ ಬಗ್ಗೆ ವೆಸ್ಟ್ ಇಂಡೀಸ್ ತಂಡದ ಮಾಜಿ ವೇಗದ ಬೌಲರ್ ಟಿನೋ ಬೆಸ್ಟ್ ಅತ್ಯುತ್ತಮ ಉದಾಹರಣೆಯೊಂದನ್ನು ನೀಡಿದ್ದಾರೆ. ಸ್ಪೋರ್ಟ್ಸ್ ಕೀಡಾ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಟಿನೋ ಬೆಸ್ಟ್ ಮಾತನ್ನಾಡಿದ್ದಾರೆ.

ಟಿನೋ ಬೆಸ್ಟ್ ಭಾರತದ ಜೊತೆಗಿನ ತಮ್ಮ ಪ್ರವಾಸದ ಸಂದರ್ಭದಲ್ಲಿ ನಡೆದ ಘಟನೆಯ ಬಗ್ಗೆ ಸ್ಮರಿಸಿಕೊಂಡರು. ಭಾರತದ ಫ್ಯಾಬ್ ಫೈವ್ ಬ್ಯಾಟಿಂಗ್ ಲೈನ್‌ಅಪ್‌ಅನ್ನು ಮೊದಲ ಬಾರಿಗೆ ಟಿನೋ ಬೆಸ್ಟ್ ಎದುರಿಸಿದ್ದರು. ಶ್ರೀಲಂಕಾದಲ್ಲಿ ನಡೆದ ಭಾರತ ಶ್ರೀಲಂಕಾವನ್ನು ಒಳಗೊಂಡ ತ್ರಿಕೋನ ಸರಣಿಯ ಘಟನೆಯನ್ನು ಬೆಸ್ಟ್ ಹೇಳಿದ್ದಾರೆ.

ನಾನು ಖೇಲ್‌ರತ್ನ ಪ್ರಶಸ್ತಿಗೆ ಅರ್ಹನಲ್ಲ ಎಂದ ಹರ್ಭಜನ್ ಸಿಂಗ್ನಾನು ಖೇಲ್‌ರತ್ನ ಪ್ರಶಸ್ತಿಗೆ ಅರ್ಹನಲ್ಲ ಎಂದ ಹರ್ಭಜನ್ ಸಿಂಗ್

ಭಾರತದ ವಿರುದ್ಧ ನಾನು ನಾಡಿದ ಮೊದಲ ಪಂದ್ಯವದು. 2005ರ ಇಂಡಿಯನ್ ಆಯಿಲ್ ಕಪ್. ನಾನುಬ ರಾಹುಲ್ ದ್ರಾವಿಡ್ ಅವರಿಗೆ ಬೌಲಿಂಗ್ ಮಾಡಿದ್ದೆ. ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ನನ್ನ ಸತತ ಮೂರು ಎಸೆತಗಳಿಗೆ ಬೌಂಡರಿಯನ್ನು ಬಾರಿಸಿದ್ದರು. ಆದರೆ ಈ ಪಂದ್ಯದ ಬಳಿಕ ನನ್ನ ಜೊತೆಗೆ ರಾಹುಲ್ ದ್ರಾವಿಡ್ ಪುಟ್ಟ ಮಾತುಕತೆಯನ್ನು ನಡೆಸಿದ್ದರು ಎಂದು ಟಿನೋ ಬೆಸ್ಟ್ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ನನ್ನ ಬಳಿ ಬಂದು "ಯಂಗ್ ಮ್ಯಾನ್, ನಿನ್ನ ಶಕ್ತಿ ನನಗೆ ಇಷ್ಟವಾಯಿತು. ಅದನ್ನು ಯಾವಾಗಲೂ ತುಂಬುತ್ತಿರು. ಕೇವಲ ಬೌಂಡರಿಗಳನ್ನು ಬಾರಿಸಲ್ಪಟ್ಟೆ ಎಂಬ ಕಾರಣಕ್ಕೆ ನಿಲ್ಲಿಸಬೇಡ ಎಂದರು. ಆಗ ಅವರೋರ್ವ ತುಂಬಾ ವಿನಮ್ರ ಮತ್ತು ಸಿಹಿಯಾದ ವ್ಯಕ್ತಿತ್ವವನ್ನು ಹೊಂದಿರುವವರು ಎಂದು ತಿಳಿಸಯಿತು ಎಂದು ಹೇಳಿಕೊಂಡಿದ್ದಾರೆ.

ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನ ಬಗ್ಗೆ ಹರ್ಭಜನ್ ಸಿಂಗ್ ವಿಶೇಷ ಟ್ವೀಟ್ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನ ಬಗ್ಗೆ ಹರ್ಭಜನ್ ಸಿಂಗ್ ವಿಶೇಷ ಟ್ವೀಟ್

ನಾನು ಭಾರತೀಯ ಕ್ರಿಕೆಟಿಗರಿಂದ ಯಾವಾಗಲೂ ಸಾಕಷ್ಟು ಪ್ರೀತಿಯನ್ನು ಗಳಿಸಿಕೊಂಡಿದ್ದೇನೆ. ಯುವರಾಜ್ ಸಿಂಗ್ ಒಂದು ಬಾರಿ ನನಗೆ ಬ್ಯಾಟನ್ನು ನೀಡಿದ್ದರು ಎಂದು ಹೇಳಿದ್ದಾರೆ. ನನ್ನ ಅನುಭವದ ಪ್ರಕಾರ ಭಾರತೀಯ ಕ್ರಿಕೆಟರ್‌ಗಳು ಯಾವಾಗಲೂ ತುಂಬಾ ಒಳ್ಳೆಯವರಾಗಿದ್ದರು. ರಾಹುಲ್ ದ್ರಾವಿಡ್ ಹಾಗೂ ಇನ್ನೂ ಕೆಲ ಆಟಗಾರರು ಸಾಕಷ್ಟು ವಿನಮ್ರರಾಗಿದ್ದರು. ಅವರು ಯಾವತ್ತೂ ತಮಗೆ 150 ಕೋಟಿ ಜನರ ಬೆಂಬಲವಿದೆ ಎನ್ನುವುದನ್ನು ವ್ಯಕ್ತಪಡಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

Story first published: Sunday, July 19, 2020, 13:26 [IST]
Other articles published on Jul 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X