ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಾಟ್ ಫಿಕ್ಸಿಂಗ್‌ಗಾಗಿ ಭಾರತೀಯ ಉದ್ಯಮಿ ಬೆದರಿಕೆಯೊಡ್ಡಿದ್ದ: ಬ್ರೆಂಡನ್ ಟೇಲರ್

Former Zimbabwe skipper Brendan Taylor said Indian Businessman blackmailed him for spot fixing

ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ಆಟಗಾರ ಬ್ರೆಂಡನ್ ಟೇಲರ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ನಿಷೇಧಕ್ಕೆ ಒಳಗಾಗಿದ್ದಾರೆ. ಸ್ಪಾಟ್ ಫಿಕ್ಸಿಂಗ್‌ಗಾಗಿ 15,000 ಡಾಲರ್ ಮುಂಗಡ ಪಡೆದುಕೊಂಡಿರುವುದನ್ನು ಬ್ರೆಂಡನ್ ಟೇಲರ್ ಒಪ್ಪಿಕೊಂಡ ನಂತರ ಐಸಿಸಿ ನಿಷೇಧ ಹೇರಿತ್ತು. ಆದರೆ ಈ ಪ್ರಕರಣದಲ್ಲಿ ತಾನು ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದೆ ಎಂದಿರುವ ಬ್ರೆಂಡನ್ ಟೇಲರ್ ನಾನು ಅಂತಾ ಕೃತ್ಯವನ್ನು ಮಾಡಿಲ್ಲ ಎಂದಿದ್ದಾರೆ.

ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಲು ಭಾರತದ ಬುಕ್ಕಿಯೋರ್ವ ನನ್ನನ್ನು ಸಂಪರ್ಕಿಸಿದ್ದ. ಆತ ನಾನು ಕೊಕೇನ್ ಸ್ವೀಕರಿಸುತ್ತಿದ್ದ ವಿಡಿಯೋವನ್ನು ಮುಂದಿಟ್ಟುಕೊಂಡು ನನಗೆ ಬ್ಯಾಕ್‌ಮೇಲ್ ಮಾಡಿದ್ದಾನೆ. ಹೀಗಾಗಿ ಐಸಿಸಿಗೆ ಸೂಕ್ತ ಸಂದರ್ಭದಲ್ಲಿ ಈ ಕುರಿತಾಗಿ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ. ಆ ಕಾರಣದಿಂದಾಗಿ ನಾನು ನಿಷೇಧ ಶಿಕ್ಷೆಗೆ ಒಳಗಾಗಿದ್ದೇನೆ ಎಂದು ಟೇಲರ್ ಹೇಳಿದ್ದಾರೆ.

4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು

2019ರ ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯ ಉದ್ಯಮಿಯೊರ್ವನಿಂದ ಹಣವನ್ನು ಸ್ವೀಕರಿಸುವಂತೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಸುರಕ್ಷತೆಯ ಕಾರಣಕ್ಕೆ ಹೆದರಿ ಐಸಿಸಿ ಭ್ರಷ್ಟಾಚಾರ ವಿರೋಧಿ ಘಟಕಕ್ಕೆ ಘಟನೆಯ ಬಗ್ಗೆ ವರದಿ ಮಾಡಲು ನಾಲ್ಕು ತಿಂಗಳುಗಳನ್ನು ತೆಗೆದುಕೊಂಡಿದ್ದೆ ಎಂದು ಟೇಲರ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜಿಂಬಾಬ್ವೆಯಲ್ಲಿ ಹೊಸ ಟಿ20 ಟೂರ್ನಿಯನ್ನು ಆಯೋಜಿಸುವ ದೃಷ್ಟಿಯಿಂದ ಮುಂಗಡವಾಗಿ 15,000 ಡಾಲರ್ ಮೊತ್ತವನ್ನು ನೀಡಿದ್ದ.

ನಾವು ಜೊತೆಯಾಗಿ ಡ್ರಿಂಕ್ಸ್ ಸ್ವೀಕರಿಸಿದ್ದೆವು. ಸಂಜೆಯ ವೇಲೆಗೆ ಆತ ನನಗೆ ಕೊಕೇನ್ ನೀಡಿದ್ದ. ಆತ ಕೂಡ ಕೊಕೇನ್ ಸೇವಿಸಿದ್ದ. ನಾನು ಮೂರ್ಖತನದಿಂದ ಆತನ ಆಮಿಷಕ್ಕೆ ಬಿದ್ದೆ. ಮರುದಿನ ನನ್ನ ರೂಮ್‌ಗೆ ಬಂದಿದ್ದ ಆತ ಹಿಂದಿನ ದಿನ ಕೊಕೇನ್ ಸೇವಿಸಿದ್ದ ವಿಡಿಯೋಗಳನ್ನು ನನ್ನ ಮುಂದಿಟ್ಟು ಬೆದರಿಕೆಯನ್ನು ಹಾಕಿದ್ದ. ಆತನ ಪರವಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡದಿದ್ದರೆ ಈ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ" ಎಂದು ಟೇಲರ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು

ಭಾರತದ ಆ ಉದ್ಯಮಿ ತನಗೆ ಮುಂಗಡವಾಗಿ 15,000 ಡಾಲರ್ ನೀಡಿದ್ದ. ಅಲ್ಲದೆ ಕೆಲಸ ಪೂರ್ಣಗೊಂಡ ಬಳಿಕ ತಾನ್ನೂ ಇನ್ನೂ 20,000 ಡಾಲರ್ ನೀಡುವುದಾಗಿ ಭರವಸೆ ನೀಡಿದ್ದ. ಆದರೆ ನಾನು ಯಾವುದೇ ಮ್ಯಾಚ್ ಫಿಕ್ಸ್‌ನಲ್ಲಿ ಭಾಗಿಯಾಗಿಲ್ಲ. ನಾನು ಮೋಸಗಾರನಲ್ಲ" ಎಂದು ಟೇಲರ್ ತಮ್ಮ ಹೇಳಿಕೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಟೇಲರ್ "ತನ್ನ ಅಂತಾರಾಷ್ಟ್ರೀಯ ವೃತ್ತಿ ಬದುಕಿನ ಮೇಲೆ ಬಹುವರ್ಷಗಳ ನಿಷೇಧ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎನ್ನಲಾಗುತ್ತಿದೆ. ಈ ನಿರ್ಧಾರಗಳನ್ನು ನಾನು ವಿನಮ್ರವಾಗಿ ಸ್ವೀಕರಿಸುತ್ತೇನೆ" ಎಂದಿದ್ದಾರೆ.

Team India ಕಳೆದ ಸರಣಿಯ ಬೆಸ್ಟ್ ಕ್ಷಣಗಳು | Oneindia Kannada

35ರ ಹರೆಯದ ಬ್ರೆಂಡನ್ ಟೇಲರ್ ಜಿಂಬಾಬ್ವೆ ತಂಡದ ಪರವಾಗಿ 34 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 205 ಏಕದಿನ ಹಾಗೂ 45 ಟಿ20 ಪಂದ್ಯಗಳಲ್ಲಿಯೂ ಜಿಂಬಾಬ್ವೆ ತಂಡದ ಪರವಾಗಿ ಆಡಿದ್ದಾರೆ.

Story first published: Tuesday, January 25, 2022, 9:44 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X