ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಆತಂಕ ಮೂಡಿಸಿದ ನಾಲ್ಕು ಸಂಗತಿಗಳು

Four importent issues for team india ahead of 2nd test against england

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಮಸ್ಯೆಗಳ ಸುಳಿಯ ಮಧ್ಯೆಯೂ ಶ್ರೇಷ್ಠ ಪ್ರದರ್ಶನವನ್ನು ನೀಡಿದ ಟೀಮ್ ಇಂಡಿಯಾ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿತ್ತು. ಈ ಹುಮ್ಮಸ್ಸಿನಲ್ಲೇ ತವರಿನಲ್ಲಿ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ ಎದುರಿಸಿತು. ಆದರೆ ಆಘಾತಕಾರಿ ರೀತಿಯಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದೆ.

ಈ ಸೋಲು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಸಾಕಷ್ಟು ತಲೆನೋವು ತಂದಿಟ್ಟಿದೆ. ಕೆಲ ಇಂಗ್ಲೆಂಡ್ ವಿರುದ್ಧ ತವರು ನೆಲದಲ್ಲಿ ಸುಲಭವಾಗಿ ಗೆದ್ದು ಬೀಗಬಹುದು ಎಂದುಕೊಂಡಿದ್ದ ಅಭಿಮಾನಿಗಳು ತಂಡದ ಪ್ರದರ್ಶನದಿಂದ ಬೇಸರಗೊಂಡಿದ್ದಾರೆ. ಎರಡನೇ ಟೆಸ್ಟ್ ಪಂದ್ಯವೂ ಕೂಡ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿಯೇ ನಡೆಯಲಿದ್ದು ಭಾರತ ಯಾವ ರೀತಿ ತಿರುಗೇಟು ನೀಡಲಿದೆ ಎಂಬುದು ಪ್ರಶ್ನೆಯಾಗಿದೆ.

ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಸೋತರೆ ಕೊಹ್ಲಿ ಕ್ಯಾಪ್ಟನ್ ಆಗಿ ಉಳಿಯಲ್ಲ!ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಸೋತರೆ ಕೊಹ್ಲಿ ಕ್ಯಾಪ್ಟನ್ ಆಗಿ ಉಳಿಯಲ್ಲ!

ಈ ಮಧ್ಯೆ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾಗೆ ಕೆಲ ಪ್ರಮುಖ ಸಂಗತಿಗಳು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಎರಡನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಈ ನಾಲ್ಕು ಸಂಗತಿಗಳು ಕೊಹ್ಲಿ ಪಡೆಗೆ ಆತಂಕವನ್ನು ಮೂಡಿಸಿದೆ. ಹಾಗಾದರೆ ಆ ನಾಲ್ಕು ಸಂಗತಿಗಳು ಯಾವುದು? ಮುಂದೆ ಓದಿ..

ರೋಹಿತ್ ಬ್ಯಾಟ್‌ನಿಂದ ರನ್ ಹರಿದು ಬರುತ್ತಿಲ್ಲ

ರೋಹಿತ್ ಬ್ಯಾಟ್‌ನಿಂದ ರನ್ ಹರಿದು ಬರುತ್ತಿಲ್ಲ

ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ಕ್ರಿಕೆಟ್ ಪುನಾರಂಭದ ಬಳಿಕ ಕೇವಲ ಒಂದು ಅರ್ಧಶತಕವನ್ನು ಮಾತ್ರವೇ ಸಿಡಿಸಿದ್ದಾರೆ. 2019ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಮೊದಲ ಬಾರಿಗೆ ಕಣಕ್ಕಿಳಿದ ರೋಹಿತ್ ಶರ್ಮಾ ಆರಂಭದಲ್ಲಿ ದೊಡ್ಡ ಭರವಸೆಯನ್ನು ಮೂಡಿಸಿದ್ದರು. ಆದರೆ ಇತ್ತೀಚೆಗೆ ಅವರ ಕಳಪೆ ಫಾರ್ಮ್ ತಂಡಕ್ಕೆ ಹೊರೆಯಾಗುತ್ತಿದೆ. ಅನುಭವದ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಕಳಪೆ ಪ್ರದರ್ಶನ ಮುಂದುವರಿದರೆ ಮುಂದಿನ ದಿನಗಳಲ್ಲಿ ಮ್ಯಾನೇಜ್‌ಮೆಂಟ್ ಮಯಾಂಕ್ ಅಗರ್ವಾಲ್ ಅಥವಾ ಕೆಎಲ್ ರಾಹುಲ್ ಅವರಂತಾ ಆಟಗಾರರತ್ತ ಚಿತ್ತಹರಿಸುವ ಸಾಧ್ಯತೆ ಹೆಚ್ಚಿದೆ.

ಬ್ಯಾಟಿಂಗ್‌ನಲ್ಲಿ ರಹಾನೆ ವೈಫಲ್ಯ

ಬ್ಯಾಟಿಂಗ್‌ನಲ್ಲಿ ರಹಾನೆ ವೈಫಲ್ಯ

ಆಸ್ಟ್ರೇಲಿಯಾ ನೆಲದಲ್ಲಿ ರಹಾನೆ ಅದ್ಭುತವಾದ ನಾಯಕತ್ವ ಪ್ರದರ್ಶಿಸಿ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆಲ್ಲಲು ಕಾರಣರಾದರು. ಆ ಸರಣಿಯ ಮೆಲ್ಬರ್ನ್‌ನಲ್ಲಿ ಎರಡನೇ ಪಂದ್ಯದಲ್ಲಿ ರಹಾನೆ ಭರ್ಜರಿ ಶತಕ ಸಿಡಿಸಿ ಮಿಂಚಿ ಗೆಲುವಿಗೆ ಕಾರಣರಾದರು. ಆದರೆ ಕಳೆದ ವರ್ಷ ಅಂದರೆ 2020ರ ಜನವರಿಯಿಂದ ಈಚೆಗಿನ ರಹಾನೆ ಫಾರ್ಮ್ ಗಮನಿಸಿದರೆ ನಿಜಕ್ಕೂ ಆತಂಕ ಮೂಡಿಸುವಂತಿದೆ. ರಹಾನೆ ನ್ಯೂಜಿಎಲಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯ, ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯ ಹಾಗೂ ಒಂದು ಇಂಗ್ಲೆಂಡ್ ವಿರುದ್ಧ ಪಂದ್ಯವನ್ನಾಡುವ ಮೂಲಕ ಏಳು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಇದರಲ್ಲಿ ರಹಾನೆ 27.69ರ ಸರಾಸರಿಯಲ್ಲಿ 360 ರನ್‌ ಅಷ್ಟೇ ಗಳಿಸಿದ್ದಾರೆ. ಒಂದು ಶತಕವನ್ನು ಗಳಿಸಿರುವುದು ಬಿಟ್ಟರೇ ಉಳಿದಂತೆ ಅರ್ಧಶತಕವೂ ರಹಾನೆ ಬ್ಯಾಟ್‌ನಿಂದ ಸಿಡಿದಿಲ್ಲ. ಮೆಲ್ಬರ್ನ್‌ನಲ್ಲಿ ಶತಕವನ್ನು ಆಚೆಗಿಟ್ಟರೆ 20.67ರ ಸರಾಸರಿಯಲ್ಲಿ 248 ರನ್‌ಗಳನ್ನಷ್ಟೇ ಗಳಸಿದ್ದಾರೆ. ಇದು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಆಟಗಾರನಿಂದ ನಿರೀಕ್ಷಿಸುವ ಬ್ಯಾಟಿಂಗ್ ಖಂಡಿತಾ ಅಲ್ಲ.

ಬೌಲಿಂಗ್ ಕಾಂಬಿನೇಶನ್ ಸಮಸ್ಯೆ

ಬೌಲಿಂಗ್ ಕಾಂಬಿನೇಶನ್ ಸಮಸ್ಯೆ

ಟೀಮ್ ಇಂಡಿಯಾದ ಬೌಲಿಂಗ್ ಕಾಂಬಿನೇಶನ್ ಸಮಸ್ಯೆ ನಾಯಕನ ಆತಂಕಕ್ಕೆ ಕಾರಣವಾಗಿದೆ. ವಾಶಿಂಗ್ಟನ್ ಸುಂದರ್ ಆಸ್ಟ್ರೇಲಿಯಾದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದರು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್‌ನಲ್ಲಿ ಸಿಡಿಸಿದ ಎರಡು ಅರ್ಧ ಶತಕಗಳು ಅಭಿಮಾನಿಗಳ ಮನದಲ್ಲಿ ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತಾದ್ದು. ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಬೌಲಿಂಗ್ ತೀರಾ ನೀರಸವಾಗಿತ್ತು. 26 ಓವರ್ ಬೌಲಿಂಗ್ ನಡೆಸಿದ ವಾಶಿಂಗ್ಟನ್ ಸುಂದರ್ 98 ರನ್ ನೀಡಿದರು. ಆದರೆ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಅವರು ವಿಫಲರಾದರು. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ಕೊಹ್ಲಿ ಸುಂದರ್ ಮೇಲೆ ಭರವಸೆಯನ್ನು ಹೊಂದಿರಲಿಲ್ಲ. ಕೇವಲ 2 ಓವರ್‌ ಮಾತ್ರವೇ ವಾಶಿಂಗ್ಟನ್ ಸುಂದರ್‌ಗೆ ಎಸೆಯಲು ಅವಕಾಶ ನೀಡಿದ್ದರು.

ತಂಡದ ಕಾಂಬಿನೇಶನ್ ಚಿಂತೆ

ತಂಡದ ಕಾಂಬಿನೇಶನ್ ಚಿಂತೆ

ಎರಡನೇ ಟೆಸ್ಟ್‌ನಲ್ಲಿ ನದೀಮ್ ಸ್ಥಾನಕ್ಕೆ ಕುಲ್‌ದೀಪ್ ಯಾದವ್‌ಗೆ ಅವಕಾಶ ನೀಡಬಹುದು. ಇದರ ಜೊತೆಗೆ ಅದ್ಭುತವಾದ ಅರ್ಧ ಶತಕದ ಹೊರತಾಗಿಯೂ ಹಾರ್ದಿಕ್ ಪಾಂಡ್ಯ ಅಥವಾ ಅಕ್ಷರ್ ಪಟೇಲ್‌ಗೆ ಸ್ಥಾನವನ್ನು ನಿಡುವ ಪ್ರಯತ್ನ ನಡೆಸಬಹುದು. ಆದರೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಸಂಪೂರ್ಣ ಫೀಟ್ ಆಗಿದ್ದಾರೆಯೇ ಎಂಬುದು ಖಚಿತವಿಲ್ಲ. ಜೊತೆಗೆ ಆಸ್ಟ್ರೇಲಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ವೇಗಿ ಮೊಹಮ್ಮದ್ ಸಿರಾಜ್‌ಗೆ ನದೀಮ್‌ ಸ್ಥಾನದಲ್ಲಿ ಕಣಕ್ಕಿಳಿಸುವ ಬಗ್ಗೆಯೂ ಚಿಂತನೆಗಳು ನಡೆಯಲಿದೆ. ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯುವುದು ಕೂಡ ಉತ್ತಮ ನಿರ್ಧಾರವಾಗಬಹುದು.

Story first published: Thursday, February 11, 2021, 15:12 [IST]
Other articles published on Feb 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X