ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಫೋಟಕ ಶತಕ ಚಚ್ಚಿದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ: ವೈರಲ್ ವೀಡಿಯೋ

‘From 68 kgs to now 75,’ Hardik Pandya shares fitness progress ahead of IPL 2020

ಮುಂಬೈ, ಮಾರ್ಚ್ 3: ಗಾಯದ ಕಾರಣದಿಂದಾಗಿ ದೀರ್ಘಕಾಲ ಕ್ರಿಕಟ್ ಮೈದಾನದಿಂದ ಹೊರಗುಳಿಸಿದ್ದ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯಿಂದಲೂ ಹಾರ್ದಿಕ್, ಗಾಯದಿಂದ ಬಳಲುತ್ತಿದ್ದರು.

ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲಿಗೆ ರಿಷಭ್ ಪಂತ್ ಕಾರಣವೆ?!ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲಿಗೆ ರಿಷಭ್ ಪಂತ್ ಕಾರಣವೆ?!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭದ ದಿನ ಹತ್ತಿರವಾಗುತ್ತಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡುವ ಹಾರ್ದಿಕ್ ಸದ್ಯ ಗಾಯದಿಂದ ಚೇತರಿಸಿಕೊಂಡಿದ್ದಾರೆ, ತರಬೇತಿಯಲ್ಲಿ ಪಾಲ್ಗೊಳ್ಳುವುದರಲ್ಲಿದ್ದಾರೆ.

70 ಶತಕ ಸಿಡಿಸಿದ ಆಟಗಾರನ ಕೌಶಲ್ಯ ಪ್ರಶ್ನಿಸ್ತೀರಾ?: ಕೊಹ್ಲಿ ಬೆನ್ನಿಗೆ ನಿಂತ ಹಕ್70 ಶತಕ ಸಿಡಿಸಿದ ಆಟಗಾರನ ಕೌಶಲ್ಯ ಪ್ರಶ್ನಿಸ್ತೀರಾ?: ಕೊಹ್ಲಿ ಬೆನ್ನಿಗೆ ನಿಂತ ಹಕ್

ನವಿ ಮುಂಬೈಯಲ್ಲಿ ಇತ್ತೀಚೆಗೆ ನಡೆದ 16ನೇ ಡಿವೈ ಪಾಟಿಲ್ ಟಿ20 ಕಪ್‌ ಟೂರ್ನಿಯಲ್ಲಿ ಆಡಿದ್ದ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಗಾಯದಿಂದ ಸಂಪೂರ್ಣ ಚೇತರಿಕೆ

ಗಾಯದಿಂದ ಸಂಪೂರ್ಣ ಚೇತರಿಕೆ

ಗಾಯದಿಂದ ಚೇತರಿಸಿಕೊಂಡು, ಮತ್ತೆ ಆಟ ಪುನರಾರಂಭಿಸಲು ತಯಾರಾಗಿರುವ ಹಾರ್ದಿಕ್, ತಮ್ಮ ಇತ್ತೀಚಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 'ಮೂರು ತಿಂಗಳಲ್ಲಿ 68 kgಯಿಂದ 75 kgಗೆ ತೂಕ ಹೆಚ್ಚಿಸಿಕೊಂಡಿದ್ದೇನೆ. ಇದು ಅವಿರತ ಪ್ರಯತ್ನದಿಂದ ಆಗಿದ್ದೇ ಹೊರತು ಅಡ್ಡದಾರಿಯಿಂದಲ್ಲ,' ಎಂದು ಜೊತೆಗೊಂದು ಸಾಲನ್ನೂ ಬರೆದುಕೊಂಡಿದ್ದಾರೆ.

5 ತಿಂಗಳು ಕ್ರಿಕೆಟ್‌ನಿಂದ ದೂರ

5 ತಿಂಗಳು ಕ್ರಿಕೆಟ್‌ನಿಂದ ದೂರ

ಬೆನ್ನು ನೋವಿನಿಂದಾಗಿ ಸುಮಾರು 5 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಸಿದ್ದ 26ರ ಹರೆಯದ ಹಾರ್ದಿಕ್ ಪಾಂಡ್ಯ ದೇಹದ ತೂಕದಲ್ಲಿ ಇಳಿಕೆಯಾಗಿತ್ತು. ಈಗ ತೂಕವನ್ನು ಹೆಚ್ಚಿಸಿರುವುದಾಗಿ ತಿಳಿಸಲು ಪಾಂಡ್ಯ ತನ್ನ ಫೋಟೋ ಶೇರ್ ಮಾಡಿಕೊಂಡಿದ್ದಾರೆ(ಇನ್‌ಸ್ಟಾದಲ್ಲಿ ಹಾರ್ದಿಕ್ ಹಂಚಿಕೊಂಡಿರು ಫೋಟೋ).

ರಿಲಯನ್ಸ್ 1 ಪರ ಸ್ಫೋಟಕ ಬ್ಯಾಟಿಂಗ್

ದೀರ್ಘ ಸಮಯದ ಬಳಿಕ ಡಿವೈ ಪಾಟಿಲ್ ಟಿ20 ಕಪ್ ಟೂರ್ನಿಯಲ್ಲಿ ರಿಲಯನ್ಸ್ 1 ಪರ ಮೈದಾನಕ್ಕಿಳಿದಿದ್ದ ಹಾರ್ದಿಕ್, 39 ಎಸೆತಗಳಿಗೆ 105 ರನ್ ಸಿಡಿಸಿ ಗಮನ ಸೆಳೆದಿದ್ದರು. ಪಂದ್ಯದಲ್ಲಿ ಬ್ಯಾಂಕ್ ಆಫ್ ಬರೋಡಾ ವಿರುದ್ಧ ರಿಲಯನ್ಸ್ 1 ತಂಡ, 25 ರನ್ ಜಯ ಗಳಿಸಿತ್ತು.

ಎಂಐ-ಸಿಎಸ್‌ಕೆ ಮುಖಾಮುಖಿ

ಎಂಐ-ಸಿಎಸ್‌ಕೆ ಮುಖಾಮುಖಿ

ಮಾರ್ಚ್‌ 29ರಿಂದ ಆರಂಭವಾಗುವ ಐಪಿಎಲ್ ನಲ್ಲಿ ಹಾರ್ದಿಕ್ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ.

Story first published: Tuesday, March 3, 2020, 21:26 [IST]
Other articles published on Mar 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X