ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಂಗೂಲಿಗೂ ಮುನ್ನ ಬಿಸಿಸಿಐ ಅಧ್ಯಕ್ಷರಾಗಿದ್ದವರು ಯಾರು ಯಾರು?

From RE Grant Govan to Sourav Ganguly: List of all 39 BCCI Presidents till date

ಮುಂಬೈ, ಅಕ್ಟೋಬರ್ 23: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬುಧವಾರದಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುವ ಭರವಸೆ ನೀಡಿದ್ದಾರೆ.

ಬಿಸಿಸಿಐ ಅಧ್ಯಕ್ಷರಾದ ಬಳಿಕ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿಬಿಸಿಸಿಐ ಅಧ್ಯಕ್ಷರಾದ ಬಳಿಕ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ

ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಬಳಿಕ 47 ವರ್ಷ ವಯಸ್ಸಿನ ಗಂಗೂಲಿ ಅವರು ಈ ಮುಂಚೆ ಪಶ್ಚಿಮ ಬಂಗಾಲದ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಬಳಿಕ ಬಿಸಿಸಿಐಗೆ ಬಾಸ್ ಆಗಿದ್ದಾರೆ.

2017ರಿಂದ ಬಿಸಿಸಿಐನ ಮಧ್ಯಂತರ ಮುಖ್ಯಸ್ಥರಾಗಿದ್ದ ಸಿಕೆ ಖನ್ನಾ ಅವರು ಸೌರವ್ ಗಂಗೂಲಿಗೆ ಅಧಿಕಾರ ಹಸ್ತಾಂತರಿಸಿದರು. ಬಿಸಿಸಿಐನ 39ನೇ ಅಧ್ಯಕ್ಷರಾಗಿ ಗಂಗೂಲಿ ಅಧಿಕಾರ ಸ್ವೀಕರಿಸುವ ಮೂಲಕ ಸುಮಾರು 33 ತಿಂಗಳ ಆಡಳಿತ ಸಮಿತಿ(ಸಿಒಐ) ಅಧಿಕಾರಕ್ಕೆ ಅಂತ್ಯ ಹಾಡಲಾಗಿದೆ.

ಬಿಸಿಸಿಐ ಅಧ್ಯಕ್ಷ ಪಟ್ಟ ಅಲಂಕರಿಸಿದ ಸೌರವ್ ಗಂಗೂಲಿಬಿಸಿಸಿಐ ಅಧ್ಯಕ್ಷ ಪಟ್ಟ ಅಲಂಕರಿಸಿದ ಸೌರವ್ ಗಂಗೂಲಿ

1928ರಿಂದ ಇಲ್ಲಿ ತನಕ ಗ್ರಾಂಟ್ ಗೋವನ್ ರಿಂದ ಸೌರವ್ ಗಂಗೂಲಿ ತನಕ ಬಿಸಿಸಿಐ 39 ಅಧ್ಯಕ್ಷರನ್ನು ಕಂಡಿದೆ. ಈ ಪೈಕಿ ಟೀಂ ಇಂಡಿಯಾ ನಾಯಕರಾಗಿ ಬಿಸಿಸಿಐ ಬಾಸ್ ಆದವರ ಪೈಕಿ ಗಂಗೂಲಿ ಎರಡನೇಯವರು. ಪ್ರಥಮ ದರ್ಜೆ ಕ್ರಿಕೆಟ್ ಆಡಿ, ಮಾಜಿ ಕ್ರಿಕೆಟರ್ ಗಳಾಗಿ ನಂತರ ಬಿಸಿಸಿಐ ಅಧ್ಯಕ್ಷರಾದವರ ಪಟ್ಟಿಯೂ ಕಿರಿದಾಗಿದೆ.

ಬಿಸಿಸಿಐ ಅಧ್ಯಕ್ಷ ಪಟ್ಟಿ:
1. ಆರ್ ಇ ಗ್ರಾಂಟ್ ಗೋವನ್ (1928-1933)
2. ಸರ್ ಸಿಕಂದರ್ ಹಯಾತ್ ಖಾನ್ (1933-1935)
3. ನವಾಬ್ ಹಮಿದುಲ್ಲಾ ಖಾನ್ (1935-1937)
4. ಮಹಾರಾಜ ಕೆಎಸ್ ದಿಗ್ವಿಜಯ್ ಸಿನ್ಹಾಜಿ (1937-1938)
5. ಪಿ ಸುಬ್ಬರಾಯನ್ (1938-1946)
6. ಅಂಥೋಣಿ ಎಸ್ ಡಿ ಮೆಲ್ಲೊ (1946-1951)
7. ಜೆಸಿ ಮುಖರ್ಜಿ (1951-1954)
8. ಮಹಾರಾಜ್ ಕುಮಾರ್ ಆಫ್ ವಿಳಿಯನಗರಂ(1954-1956)
9. ಸರ್ದಾರ್ ಎಸ್ಎಸ್ ಮಜಿಥಿಯಾ (1956-1958)
10. ಆರ್ ಕೆ ಪಟೇಲ್ (1958-1960)

11. ಎಂಎ ಚಿದಂಬರಂ (1960-1963)
12. ಮಹಾರಾಜ ಎಫ್ ಗಾಯಕ್ವಾಡ್ (1963-1966)
13. ಜಡ್ ಆರ್ ಇರಾನಿ (1966-1969)
14. ಎಎನ್ ಘೋಸ್ (1969-1972)
15. ಪಿಎಂ ರುಂಗ್ಟಾ (1972-1975)
16. ರಾಮ್ ಪ್ರಕಾಶ್ ಮೆಹ್ತಾ (1975-1977)
17. ಎಂ ಚಿನ್ನಸ್ವಾಮಿ (1977-1980)
18. ಎಸ್ ಕೆ ವಾಂಖೆಡೆ (1980-1982)
19. ಎನ್ ಕೆ ಪಿ ಸಾಳ್ವೆ (1982-1985)
20. ಎಸ್ ಶ್ರೀರಾಮನ್ (1985-1988)
21. ಬಿಎನ್ ದತ್ (1988-1990)
22. ಮಾಧವರಾವ್ ಸಿಂಧಿಯಾ (1990-1993)
23. ಐಎಸ್ ಬಿಂದ್ರಾ (1993-1996)
24. ರಾಜ್ ಸಿಂಗ್ ಡುಂಗರ್ಪುರ್ (1996-1999)
25. ಎಸಿ ಮುತ್ತಯ್ಯ (1999-2001)
26. ಜಗ್ಮೋಹನ್ ದಾಲ್ಮಿಯಾ (2001-2004)
27. ರಣ್ಬೀರ್ ಸಿಂಗ್ ಮಹೇಂದ್ರ (2004-2005)
28. ಶರದ್ ಪವಾರ್ (2005-2008)
29. ಶಶಾಂಕ್ ಮನೋಹರ್ (2008-2011)
30. ಎನ್ ಶ್ರೀನಿವಾಸನ್ (2011-2013)
31. ಜಗ್ಮೋಹನ್ ದಾಲ್ಮಿಯಾ (ಮಧ್ಯಂತರ) (2013)
32. ಎನ್ ಶ್ರೀನಿವಾಸನ್ (2013-2014)
33. ಶಿವಲಾಲ್ ಯಾದವ್ (ಮಧ್ಯಂತರ) (2014)
34. ಸುನಿಲ್ ಗವಾಸ್ಕರ್ (ಐಪಿಎಲ್ ಮಧ್ಯಂತರ) (2014)
35. ಜಗ್ಮೋಹನ್ ದಾಲ್ಮಿಯಾ (ಮೃತಪಟ್ಟರು) (2015)
36. ಶಶಾಂಕ್ ಮನೋಹರ್ (ರಾಜೀನಾಮೆ) (2015-2016)
37. ಅನುರಾಗ್ ಠಾಕೂರ್ (2016-2017)
38. ಸಿಕೆ ಖನ್ನಾ(ಮಧ್ಯಂತರ) (2017-2019)
39. ಸೌರವ್ ಗಂಗೂಲಿ (2019-)

Story first published: Wednesday, October 23, 2019, 21:24 [IST]
Other articles published on Oct 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X