3 ಮಾದರಿಯ ಭಾರತ ತಂಡ ಜೊತೆಯಾಗಿ ಆಸ್ಟ್ರೇಲಿಯಾಕ್ಕೆ ಹಾರುವ ನಿರೀಕ್ಷೆ

ನವದೆಹಲಿ: ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬಳಿಕ ಏಕದಿನ, ಟಿ20 ಮತ್ತು ಟೆಸ್ಟ್ ಈ ಮೂರೂ ಮಾದರಿಗಳೂ ಸೇರಿ ಸಂಪೂರ್ಣ ತಂಡ ಜೊತೆಯಾಗಿ ಆಸ್ಟ್ರೆಲಿಯಾಕ್ಕೆ ಹಾರುವ ನಿರೀಕ್ಷೆಯಿದೆ. ಅಲ್ಲಿ ಭಾರತ ತಂಡ 3 ಏಕದಿನ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನಾಡಲಿದೆ. ಭಾರತ-ಆಸ್ಟ್ರೇಲಿಯಾ ಸರಣಿಗಳು ಡಿಸೆಂಬರ್ 3ರಿಂದ ಆರಂಭಗೊಳ್ಳಲಿದೆ.

ಮನೀಶ್ ಭರ್ಜರಿ ಬ್ಯಾಟಿಂಗ್: 8 ಸಿಕ್ಸರ್, 28 ಎಸೆತಗಳಲ್ಲಿ ಅರ್ಧ ಶತಕ

ಯಾಕೆ ಎಲ್ಲಾ ಮಾದರಿಗಳ ತಂಡಗಳು ಈ ಬಾರಿ ಜೊತೆಯಾಗಿ ಆಸ್ಟ್ರೆಲಿಯಾಕ್ಕೆ ಹೋಗಬೇಕಾಗಿದೆ ಎಂದರೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಟೀಮ್ ಇಂಡಿಯಾದ ಪ್ರತೀ ಆಟಗಾರರೂ ಇದ್ದಾರೆ ಎನ್ನಲಾಗದು. ಐಪಿಎಲ್‌ನಲ್ಲಿ ಆಡದ ಆಟಗಾರರೂ ಒಂದು ವೇಳೆ ಆಸ್ಟ್ರೇಲಿಯಾ ಸರಣಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ ಒಂದೇ ತಂಡದ ಜೊತೆಗೆ ಆಸ್ಟ್ರೇಲಿಯಾಕ್ಕೆ ಹಾರುವ ಸಾಧ್ಯತೆಯಿದೆ.

ಅಂದರೆ ಆಸ್ಟ್ರೇಲಿಯಾಕ್ಕೆ ಹೊರಡುವ ಮುನ್ನ ಸಂಪೂರ್ಣ ತಂಡ ಯುಎಇಯಲ್ಲಿ ಒಟ್ಟು ಸೇರಬೇಕು. ಅಲ್ಲಿಂದ ಜೊತೆಯಾಗಿ ಬಯೋ ಬಬಲ್ ತೊರೆಯುವ ನಿರೀಕ್ಷೆ ಹೆಚ್ಚಿದೆ. ಇದರರ್ಥ ಆಸ್ಟ್ರೇಲಿಯಾ ಪ್ರವಾಸಕ್ಕೆ ಸುಮಾರು 30 ಆಟಗಾರರಿರುವ ಭಾರತೀಯ ತಂಡ ಆಸ್ಟ್ರೇಲಿಯಾ ತಲುಪಲಿದೆ.

ಹೈದರಾಬಾದ್‌ಗೆ ಪಾದಾರ್ಪಣೆ ಪಂದ್ಯದಲ್ಲೇ ಗಮನ ಸೆಳೆದ ಹೋಲ್ಡರ್

ಮೂರು ಮಾದರಿಗಳ ಭಾರತ ತಂಡ ಜೊತೆಯಾಗಿ ಆಸ್ಟ್ರೇಲಿಯಾ ತಲುಪಿದರೆ ಬಯೋ ಬಬಲ್ ಸಂಬಂಧಿ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ. ಇದೇ ಕಾರಣಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಪ್ರವಾಸಿ ಭಾರತಕ್ಕೆ ಕ್ವಾರಂಟೈನ್ ಅವಧಿಯಲ್ಲಿ ತರಬೇತಿಗೆ ಅವಕಾಶ ನೀಡಬೇಕೆಂದು ನ್ಯೂ ಸೌತ್ ವೇಲ್ಸ್ ಸರ್ಕಾರವನ್ನು ಕೋರಿಕೊಂಡಿತ್ತು. ಇದಕ್ಕೆ ಅಲ್ಲಿನ ಸರ್ಕಾರ ಒಪ್ಪಿಗೆ ಕೂಡ ನೀಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, October 22, 2020, 23:59 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X