ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಿಂದ ಹಿಂದೆ ಸರಿದ 7 ಪ್ಲೇಯರ್ಸ್ & ಬದಲಿ ಆಟಗಾರರ ಪೂರ್ಣ ಪಟ್ಟಿ

Full list of cricketers who have pulled out of IPL 2020

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ 2020ಕ್ಕೆ ಸಾಲು ಸಾಲಾಗಿ ಹಿನ್ನಡೆಯ ಸಂಗತಿಗಳು ಕೇಳಿ ಬಂದಿದ್ದವು. ಆರಂಭದಲ್ಲಿ ನಗದು ಶ್ರೀಮಂತ ಟೂರ್ನಿ ಕೊರೊನಾ ವೈರಸ್‌ನಿಂದಾಗಿ ಮುಂದೂಡಲ್ಪಟ್ಟಿತು. ಆ ಬಳಿಕ, ಕೋವಿಡ್‌-19 ಪ್ರಕರಣಗಳು ಏರುತ್ತಲೇ ಸಾಗಿದ್ದರಿಂದ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್‌ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಯಿತು. ಅಷ್ಟಕ್ಕೇ ಸಮಸ್ಯೆ ಮುಗಿಯಲಿಲ್ಲ; ಐಪಿಎಲ್‌ ಫ್ರಾಂಚೈಸಿಗಳಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡವು. ಪ್ರಮುಖ ಆಟಗಾರರೇ ಟೂರ್ನಿಯಿಂದ ಹಿಂದೆ ಸರಿಯಲಾರಂಭಿಸಿದರು.

 'ಈ ಸಲ ಕಪ್ ನಮ್ದೆ': ಆರ್‌ಸಿಬಿ ತಂಡಕ್ಕೆ ಅಭಿಮಾನಿ ದಿವ್ಯಶ್ರೀ ಶುಭ ಹಾರೈಕೆ 'ಈ ಸಲ ಕಪ್ ನಮ್ದೆ': ಆರ್‌ಸಿಬಿ ತಂಡಕ್ಕೆ ಅಭಿಮಾನಿ ದಿವ್ಯಶ್ರೀ ಶುಭ ಹಾರೈಕೆ

ಸೆಪ್ಟೆಂಬರ್ 19ರಿಂದ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ನಿಂದ ಬಹಳಷ್ಟು ಮಂದಿ ಪ್ರಮುಖ ಆಟಗಾರರು ದೂರ ಸರಿದಿದ್ದಾರೆ. ಬೇರೆ ಬೇರೆ ಕಾರಣಗಳಿಂದಾಗಿ ಪ್ರತಿಭಾವಂತ ಆಟಗಾರರಿಗೆ ಈ ಬಾರಿಯ ಐಪಿಎಲ್‌ನಲ್ಲಿ ಮೈದಾನಕ್ಕಿಳಿಯಲಾಗುತ್ತಿಲ್ಲ.

ಟೀಮ್ ಇಂಡಿಯಾವನ್ನು ನೋಡಿ 'ಆ ವಿಚಾರವನ್ನು' ಪಾಕಿಸ್ತಾನ ಕಲಿಯಲಿ: ಪಾಕ್ ಮಾಜಿ ದಿಗ್ಗಜ ಬ್ಯಾಟ್ಸ್‌ಮನ್ಟೀಮ್ ಇಂಡಿಯಾವನ್ನು ನೋಡಿ 'ಆ ವಿಚಾರವನ್ನು' ಪಾಕಿಸ್ತಾನ ಕಲಿಯಲಿ: ಪಾಕ್ ಮಾಜಿ ದಿಗ್ಗಜ ಬ್ಯಾಟ್ಸ್‌ಮನ್

ಈ ಬಾರಿಯ ಐಪಿಎಲ್‌ನಿಂದ ಹಿಂದೆ ಸರಿದಿರುವ ಪ್ರಮುಖ ಆಟಗಾರರು ಮತ್ತು ಅವರಿಗೆ ಬದಲಿಯಾಗಿ ಆಡಲಿರುವ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್

ಅನುಭವಿ ಆಫ್‌ ಸ್ಪಿನ್ನರ್ 2020ರ ಐಪಿಎಲ್‌ನಲ್ಲಿ ಆಡುತ್ತಿಲ್ಲ. ವೈಯಕ್ತಿಕ ಕಾರಣದಿಂದಾಗಿ ತಾನು ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂದು ಭಜ್ಜಿ ಹೇಳಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಹರ್ಬಜನ್ ಬದಲಿಗೆ ಸಿಎಸ್‌ಕೆ ಇನ್ನೂ ಬದಲಿ ಆಟಗಾರರನ್ನು ಹೆಸರಿಸಿಲ್ಲ. ಇನ್ನಷ್ಟೇ ಹೆಸರಿಸಬೇಕಿದೆ.

ಲಸಿತ್ ಮಾಲಿಂಗ

ಲಸಿತ್ ಮಾಲಿಂಗ

ಐಪಿಎಲ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮಾರಕ ವೇಗಿ, ಶ್ರೀಲಂಕಾದ ಲಸಿತ್ ಮಾಲಿಂಗ ಕೂಡ ವೈಯಕ್ತಿಕ ಕಾರಣದಿಂದಾಗಿ ಯುಎಇ ಐಪಿಎಲ್‌ನಲ್ಲಿ ಆಡುತ್ತಿಲ್ಲ. ತಂದೆಗೆ ಹುಷಾರಿಲ್ಲದ ಕಾರಣ ಮಾಲಿಂಗ ಐಪಿಎಲ್‌ ಅನ್ನು ಕೈಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಲಸಿತ್ ಬದಲಿಗೆ ಆಸ್ಟ್ರೇಲಿಯಾ ವೇಗಿ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ಎಂಐ ಹೆಸರಿಸಿದೆ.

ಸುರೇಶ್ ರೈನಾ

ಸುರೇಶ್ ರೈನಾ

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದ ಆಲ್ ರೌಂಡರ್ ಸುರೇಶ್ ರೈನಾ ಕೂಡ, ಈ ಬಾರಿಯ ಐಪಿಎಲ್‌ನಲ್ಲಿ ಮೈದಾನಕ್ಕಿಳಿಯುತ್ತಿಲ್ಲ ಎನ್ನುವ ಮೂಲಕ ಸಿಎಸ್‌ಕೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ರೈನಾ ಅವರ ಅತ್ತೆ-ಮಾವ ಘಟನೆಯೊಂದರಲ್ಲಿ ಸಾವನ್ನಪ್ಪಿರುವ ಕಾರಣ ಸುರೇಶ್ ಯುಎಇಯಿಂದ ಭಾರತಕ್ಕೆ ವಾಪಸ್ಸಾಗಿದ್ದರು. ಮತ್ತೆ ರೈನಾ ಸಿಎಸ್‌ಕೆಗೆ ಕಮ್‌ ಬ್ಯಾಕ್‌ ಮಾಡುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಾತರಿಯಿಲ್ಲ. ಸಿಎಸ್‌ಕೆ ತಂಡ ರೈನಾ ಬದಲಿಗೆ ಬೇರೆ ಆಟಗಾರನ್ನು ಹೆಸರಿಸಲಿಲ್ಲ.

ಜೇಸನ್ ರಾಯ್

ಜೇಸನ್ ರಾಯ್

ಪಾಕಿಸ್ತಾನ ವಿರುದ್ಧದ ಸರಣಿಯ ವೇಳೆ ಗಾಯಕ್ಕೀಡಾಗಿರುವ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಐಪಿಎಲ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಡೆಲ್ಲಿಯಲ್ಲಿ ಈಗಾಗಲೇ ಶಿಖರ್ ಧವನ್, ಅಜಿಂಕ್ಯ ರಹಾನೆ, ಪೃಥ್ವಿ ಶಾ ಇಂಥ ಒಳ್ಳೆಯ ಆಟಗಾರರಿರುವುದರಿಂದ ಡಿಸಿಗೆ ಅಂಥ ಹಿನ್ನಡೆಯಾಗಲಾರದು. ಆದರೂ ಡಿಸಿ ರಾಯ್‌ಗೆ ಬದಲಿ ಆಟಗಾರನಾಗಿ ಆಸ್ಟ್ರೇಲಿಯಾ ವೇಗಿ ಡೇನಿಯಲ್ ಸ್ಯಾಮ್ಸ್ ಹೆಸರಿಸಿದೆ.

ಕ್ರಿಸ್ ವೋಕ್ಸ್

ಕ್ರಿಸ್ ವೋಕ್ಸ್

ಇಂಗ್ಲೆಂಡ್ ಆಲ್ ರೌಂಡರ್ ಕ್ರಿಸ್ ವೋಕ್ಸ್ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ವೋಕ್ಸ್ ಬದಲಿಗೆ ದಕ್ಷಿಣ ಆಫ್ರಿಕಾ ವೇಗಿ ಅನ್ರಿಕ್ ನಾರ್ಟ್ಜೆ ಹೆಸರಿಸಲ್ಪಟ್ಟಿದ್ದಾರೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ನಾರ್ಟ್ಜೆ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿದ್ದರು. ಆದರೆ ಗಾಯದ ಕಾರಣದಿಂದ ಪಂದ್ಯ ಆಡಿರಲಿಲ್ಲ.

ಕೇನ್ ರಿಚರ್ಡ್ಸನ್

ಕೇನ್ ರಿಚರ್ಡ್ಸನ್

ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಕೂಡ ಈ ಐಪಿಎಲ್‌ನಲ್ಲಿ ಆಡೋದು ಅನುಮಾನವಾಗಿದೆ. ಆಸ್ಟ್ರೇಲಿಯಾದ ಪ್ರಮುಖ ಆಟಗಾರನ ಬೆಂಬಲ ಸಿಗದಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನಿರಾಸೆ ಮೂಡಿಸಿದೆ. ರಿಚರ್ಡ್ಸನ್ ಬದಲಿಗೆ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ಅವರು ಆರ್‌ಸಿಬಿ ಪರ ಆಡಲಿದ್ದಾರೆ.

ಹ್ಯಾರಿ ಗರ್ನಿ

ಹ್ಯಾರಿ ಗರ್ನಿ

ಇಂಗ್ಲೆಂಡ್ ಎಡಗೈ ವೇಗಿ ಹ್ಯಾರಿ ಗರ್ನಿ ಕೂಡ ಐಪಿಎಲ್ 2020ಯಿಂದ ಹೊರ ಬಿದ್ದಿದ್ದಾರೆ. ಗಾಯದ ಕಾರಣದಿಂದ ಗರ್ನಿಗೆ ಐಪಿಎಲ್‌ನಲ್ಲಿ ಆಡಲಾಗುತ್ತಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಗರ್ನಿ ಆಡದಿದ್ದರೂ ತಂಡದಲ್ಲಿ ಪ್ಯಾಟ್ ಕಮಿನ್ಸ್, ಲಾಕಿ ಫಾರ್ಗುಸನ್, ಶಿವಂ ದೂಬೆ ಅವರಂತ ಆಟಗಾರರಿದ್ದಾರೆ. ಕೆಕೆಆರ್ ಇನ್ನೂ ಹ್ಯಾರಿಗೆ ಬದಲಿ ಆಟಗಾರನನ್ನು ಹೆಸರಿಸಿಲ್ಲ.

Story first published: Thursday, September 10, 2020, 10:02 [IST]
Other articles published on Sep 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X