ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಿಟ್-ವಿಕೆಟ್ ಆದ ಎಲ್ಲಾ ಭಾರತೀಯರ ಸಂಪೂರ್ಣ ಪಟ್ಟಿ

Full list of Indian Test batsmen getting hit-wicket

ಬೆಂಗಳೂರು: ಕ್ರಿಕೆಟ್‌ನಲ್ಲಿ ಹಿಟ್ ವಿಕೆಟ್ ಮೂಲಕ ವಿಕೆಟ್‌ ಒಪ್ಪಿಸೋದು ಒಂದು ರೀತಿಯಲ್ಲಿ ವಿಲಕ್ಷಣ ರೀತಿಯ ಔಟ್. ಸುಮಾರು 100ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ ಒಟ್ಟಾರೆ 160ಕ್ಕೂ ಹೆಚ್ಚು ಸಂದರ್ಭಗಳಲ್ಲಿ ಬ್ಯಾಟ್ಸ್‌ಮನ್‌ಗಳು ಹಿಟ್ ವಿಕೆಟ್‌ಗೆ ಬಲಿಯಾಗಿದ್ದಾರೆ. ಹಿಟ್ ವಿಕೆಟ್ ಅಂದರೆ ಬ್ಯಾಟಿಂಗ್ ಮಾಡುವ ಭರದಲ್ಲಿ ದೇಹವನ್ನು ಸ್ಟಂಪ್ಸ್‌ಗೆ ತಾಗಿಸೋದು, ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಬಡಿಯೋದು, ಹೆಲ್ಮೆಟನ್ನು ಸ್ಟಂಪ್ಸ್ ಮೇಲೆ ಬೀಳಿಸೋದು ಹೀಗೆ ಔಟ್ ಆಗೋದು. ಒಟ್ಟಿನಲ್ಲಿ ಬ್ಯಾಟ್ಸ್‌ಮನ್ ಒಬ್ಬ ತನ್ನ ಔಟನ್ನು ತಾನೇ ಬರೆದುಕೊಳ್ಳುವ ಅಪರೂಪದ ಕ್ಷಣವನ್ನು ಹಿಟ್ ವಿಕೆಟ್ ಅನ್ನಬಹುದು.

ಇಂಗ್ಲೆಂಡ್ vs ವಿಂಡೀಸ್: 1ನೇ ಟೆಸ್ಟ್‌ ವೇಳೆ ಗಮ್ಮತ್ತು ನಡೆದಿತ್ತು ಗಮನಿಸಿದ್ದೀರಾ?!ಇಂಗ್ಲೆಂಡ್ vs ವಿಂಡೀಸ್: 1ನೇ ಟೆಸ್ಟ್‌ ವೇಳೆ ಗಮ್ಮತ್ತು ನಡೆದಿತ್ತು ಗಮನಿಸಿದ್ದೀರಾ?!

ಟೆಸ್ಟ್‌ನಲ್ಲಿ ಹಿಟ್ ವಿಕೆಟ್‌ ಮಾಡಿಕೊಂಡ ಭಾರತೀಯರು ಎಷ್ಟು ಎಂದು ಪ್ರಶ್ನಿಸಿದರೆ ಒಟ್ಟಿಗೆ 22 ಸಂದರ್ಭಗಳು ಸಿಗುತ್ತವೆ. ಇದರಲ್ಲಿ ಲಾಲ ಅಮರನಾಥ್ ಅವರು ಒಟ್ಟಿಗೆ 3 ಬಾರಿ ಹಿಟ್‌ವಿಕೆಟ್ ಮೂಲಕ ಔಟ್ ಆಗಿದ್ದಾರೆ. 1949ರಲ್ಲಿ ಚೆನ್ನೈನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಲಾಲ ಅಮರನಾಥ್ ಔಟ್ ಆದ ಬಳಿಕ ಹೀಗೆ ಔಟ್ ಆದ ಮೊದಲ ಭಾರತೀಯನಾಗಿ ನಾಯಕನಾಗಿ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ.

ಹೆಚ್ಚು ರನ್ ಗಳಿಸಿದ್ದರೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು: ಗಂಗೂಲಿಹೆಚ್ಚು ರನ್ ಗಳಿಸಿದ್ದರೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು: ಗಂಗೂಲಿ

ಭಾರತೀಯರಲ್ಲಿ ಕಡೇಯ ಸಾರಿ ಹಿಟ್‌ ವಿಕೆಟ್ ಆಗಿದ್ದೆಂದರೆ ವಿರಾಟ್ ಕೊಹ್ಲಿ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಕೊಹ್ಲಿ ಹೀಗೆ ಔಟ್ ಆಗಿದ್ದರು. ಅಂದಹಾಗೆ, ಇಲ್ಲೀವರೆಗೆ ಟೆಸ್ಟ್‌ನಲ್ಲಿ ಹಿಟ್‌ವಿಕೆಟ್‌ಗೆ ಬಲಿಯಾದ ಎಲ್ಲಾ ಭಾರತೀಯರ ಮಾಹಿತಿ ಇಲ್ಲಿದೆ.

ಲಾಲ ಅಮರನಾಥ್

ಲಾಲ ಅಮರನಾಥ್

1. ಲಾಲ ಅಮರನಾಥ್ - 13 ರನ್ (1949, ಚೆನ್ನೈನಲ್ಲಿ vs ವೆಸ್ಟ್ ಇಂಡೀಸ್)
2. ಮಾಧವ್ ಆಪ್ಟೆ - 30 (1953, ಜಾರ್ಜ್‌ಟೌನ್‌ನಲ್ಲಿ Vs ವೆಸ್ಟ್ ಇಂಡೀಸ್)
3. ನರೇನ್ ತಮ್ಹಾನೆ - 5 (1959, Vs ವೆಸ್ಟ್ ಇಂಡೀಸ್, ದೆಹಲಿಯಲ್ಲಿ)
4. ಚಂದು ಬೋರ್ಡೆ - 96 (1959, Vs ವೆಸ್ಟ್ ಇಂಡೀಸ್ ದೆಹಲಿಯಲ್ಲಿ)
5. ಬುಧಿ ಕುಂದರನ್ - 2 (1960, ಮುಂಬೈನಲ್ಲಿ Vs ಆಸ್ಟ್ರೇಲಿಯಾ, ಬ್ರಬೋರ್ನ್ ಕ್ರೀಡಾಂಗಣ)

ದಿಲೀಪ್ ಸರ್ದೇಸಾಯಿ

ದಿಲೀಪ್ ಸರ್ದೇಸಾಯಿ

6. ದಿಲೀಪ್ ಸರ್ದೇಸಾಯಿ - 28 (1961, ಕಾನ್ಪುರದಲ್ಲಿ Vs ಇಂಗ್ಲೆಂಡ್)
7. ವಿಜಯ್ ಮಂಜ್ರೇಕರ್ - 0 (1962, ಪೋರ್ಟ್ ಆಫ್ ಸ್ಪೇನ್‌ನಲ್ಲಿ Vs ವೆಸ್ಟ್ ಇಂಡೀಸ್)
8. ಹನುಮಂತ್ ಸಿಂಗ್ - 0 (1965, ಮುಂಬೈಯಲ್ಲಿ ನ್ಯೂಜಿಲೆಂಡ್, ಬ್ರಬೋರ್ನ್ ಕ್ರೀಡಾಂಗಣ)
9. ಎಂ.ಎಲ್. ಜಯಸಿಂಹಾ - 1 (1965, ನವದೆಹಲಿಯಲ್ಲಿ Vs ನ್ಯೂಜಿಲೆಂಡ್)
10. ಸೈಯದ್ ಅಬಿದ್ ಅಲಿ - 78 (1968, ಸಿಡ್ನಿಯಲ್ಲಿ Vs ಆಸ್ಟ್ರೇಲಿಯಾ)
11. ಮದನ್ ಲಾಲ್ - 7 (1974, ಮ್ಯಾಂಚೆಸ್ಟರ್‌ನಲ್ಲಿ Vs ಇಂಗ್ಲೆಂಡ್)

ಅಶೋಕ್ ಮಂಕದ್

ಅಶೋಕ್ ಮಂಕದ್

12. ಅಶೋಕ್ ಮಂಕದ್ - 43 (1974, ಬರ್ಮಿಂಗ್‌ಹ್ಯಾಮ್‌ನಲ್ಲಿ Vs ಇಂಗ್ಲೆಂಡ್)
13. ಬ್ರಿಜೇಶ್ ಪಟೇಲ್ - 21 (1977, ಕೋಲ್ಕತ್ತಾದಲ್ಲಿ Vs ಇಂಗ್ಲೆಂಡ್)
14. ದಿಲೀಪ್ ವೆಂಗ್‌ಸರ್ಕಾರ್ - 48 (1977, ಬ್ರಿಸ್ಬೇನ್‌ನಲ್ಲಿ Vs ಆಸ್ಟ್ರೇಲಿಯಾ)
15. ಮೊಹೀಂದರ್ ಅಮರನಾಥ್ - 20 (1978, ಲಾಹೋರ್ನಲ್ಲಿ Vs ಪಾಕಿಸ್ತಾನ)
16. ಎಂ ಅಮರನಾಥ್ - 2 (1979, ಮುಂಬೈನಲ್ಲಿ Vs ಆಸ್ಟ್ರೇಲಿಯಾ)
17. ಎಂ ಅಮರನಾಥ್ - 37 (1984, ಫೈಸಲಾಬಾದ್‌ನಲ್ಲಿ Vs ಪಾಕಿಸ್ತಾನ)

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

18. ಕಿರಣ್ ಮೋರೆ - 6 (1989, ಕಿಂಗ್ಸ್‌ಸ್ಟನ್‌ನಲ್ಲಿ Vs ವೆಸ್ಟ್ ಇಂಡೀಸ್)
19. ನಯನ್ ಮೋಂಗಿಯಾ - 34 (1994, ಮೊಹಾಲಿಯಲ್ಲಿ Vs ವೆಸ್ಟ್ ಇಂಡೀಸ್)
20. ಶಿವ ಸುಂದರ್ ದಾಸ್ - 39 (2001, ಕೋಲ್ಕತ್ತಾದ Vs ಆಸ್ಟ್ರೇಲಿಯಾ)
21. ವಿ.ವಿ.ಎಸ್. ಲಕ್ಷ್ಮಣ್ - 130 (2002, ಸೇಂಟ್ ಜಾನ್ಸ್‌ನಲ್ಲಿ Vs ವೆಸ್ಟ್ ಇಂಡೀಸ್)
22. ವಿರಾಟ್ ಕೊಹ್ಲಿ - 40 (2016, ರಾಜ್‌ಕೋಟ್‌ನಲ್ಲಿ Vs ಇಂಗ್ಲೆಂಡ್)

Story first published: Monday, July 20, 2020, 22:08 [IST]
Other articles published on Jul 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X