ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ : ಭಾರತದಿಂದ ಶ್ರೀಲಂಕಾ ಪ್ರವಾಸ, ವೇಳಾಪಟ್ಟಿ

By Mahesh

ನವದೆಹಲಿ, ಜೂನ್ 19: ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್ ಆಗಿರುವ ಟೀಂ ಇಂಡಿಯಾ ಮುಂದೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ವಿಂಡೀಸ್ ಪ್ರವಾಸದ ಬಳಿಕ, ವಿರಾಟ್ ಕೊಹ್ಲಿ ನೇತೃತ್ವದ ತಂಡವು ಶ್ರೀಲಂಕಾಕ್ಕೆ ತೆರಳಲಿದೆ.

ಶ್ರೀಲಂಕಾದಲ್ಲಿ ಮೂರು ಟೆಸ್ಟ್, ಐದು ಏಕದಿನ ಪಂದ್ಯ ಹಾಗೂ ಒಂದು ಟಿ20 ಪಂದ್ಯಗಳನ್ನಾಡಲಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ ಐದು ಏಕದಿನ ಪಂದ್ಯ ಹಾಗೂ ಒಂದು ಟಿ20 ಪಂದ್ಯವನ್ನಾಡಲಿದೆ. ಜೂನ್ 23ಕ್ಕೆ ಕೆರಿಬಿಯನ್ ದ್ವೀಪಕ್ಕೆ ತೆರಳಿ ಜುಲೈ 9ರೊಳಗೆ ಭಾರತಕ್ಕೆ ಕೊಹ್ಲಿ ಪಡೆ ಮರಳಲಿದೆ.

Full schedule of India's tour of Sri Lanka 2017


ಇದಾದ ಹತ್ತು ದಿನಗಳ ಬಳಿಕ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ತೆರಳಲಿದ್ದು, ಜುಲೈ 21ಹಾಗೂ 22ರಂದು ಅಭ್ಯಾಸ ಪಂದ್ಯವಾಡಿ, ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಲಿದೆ. ಜುಲೈ26ಕ್ಕೆ ಆರಂಭವಾಗಲಿರುವ ಟೆಸ್ಟ್ ಸರಣಿ ಆಗಸ್ಟ್ 16ಕ್ಕೆ ಮುಗಿಯಲಿದೆ.

ಅಗಸ್ಟ್ 20 ರಿಂದ ಸೆಪ್ಟೆಂಬರ್ 03ರ ತನಕ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿ ನಡೆಯಲಿದ್ದು, ಸೆಪ್ಟೆಂಬರ್ 06 ರಂದು ಏಕೈಕ ಟಿ20ಐ ಪಂದ್ಯ ನಡೆಯಲಿದೆ.

ಪೂರ್ಣ ವೇಳಾಪಟ್ಟಿ ಹೀಗಿದೆ:
* ಮೊದಲ ಟೆಸ್ಟ್ ಪಂದ್ಯ : ಜುಲೈ 26 ರಿಂದ 30, ಕ್ಯಾಂಡಿ, 10 AM (IST)
* ಎರಡನೇ ಟೆಸ್ಟ್ ಪಂದ್ಯ : ಆಗಸ್ಟ್ 04 ರಿಂದ 08, ಗಾಲೆ, 10 AM (IST)
* ಮೂರನೇ ಟೆಸ್ಟ್ ಪಂದ್ಯ : ಆಗಸ್ಟ್ 12 ರಿಂದ 16, ಕೊಲಂಬೋ, 10 AM (IST)


ಏಕದಿನ ಪಂದ್ಯಗಳು
* ಮೊದಲ ಏಕದಿನ ಪಂದ್ಯ : ಆಗಸ್ಟ್ 20, ಕೊಲಂಬೋ (ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ), 2:30 PM (IST)
* ಎರಡನೇ ಏಕದಿನ ಪಂದ್ಯ : ಆಗಸ್ಟ್ 24, ದಂಬುಲ್ಲಾ (ರಂಗಿರಿ ಅಂತಾರಾಷ್ಟ್ರ್ರೀಯ ಕ್ರಿಕೆಟ್ ಮೈದಾನ), 2:30 PM (IST)

* ಮೂರನೇ ಏಕದಿನ ಪಂದ್ಯ : ಆಗಸ್ಟ್ 27, ಪಲ್ಲೆಕೆಲೆ ಅಂತಾರಾಷ್ಟ್ರ್ರೀಯ ಕ್ರಿಕೆಟ್ ಮೈದಾನ), 2:30 PM (IST)

* ನಾಲ್ಕನೇ ಏಕದಿನ ಪಂದ್ಯ : ಆಗಸ್ಟ್ 30, ಪಲ್ಲೆಕೆಲೆ ಅಂತಾರಾಷ್ಟ್ರ್ರೀಯ ಕ್ರಿಕೆಟ್ ಮೈದಾನ), 2:30 PM (IST)

* ಐದನೇ ಏಕದಿನ ಪಂದ್ಯ : ಸೆಪ್ಟೆಂಬರ್ 03, ಕೊಲಂಬೊ (ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ), 2:30 PM (IST)


ಏಕೈಕ ಟಿ20ಐ : ಸೆಪ್ಟೆಂಬರ್ 06, ಕೊಲಂಬೋ (ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ), 7:00 PM (IST)
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X