ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್‌ ಆಗಿ ಗ್ಯಾರಿ ಕರ್ಸ್ಟನ್ ಆಯ್ಕೆ?!

Gary Kirsten favourite to replace Ramesh Powar as Indian womens team coach

ನವದೆಹಲಿ, ಡಿಸೆಂಬರ್ 20: ಮಿಥಾಲಿರಾಜ್‌ ವಿವಾದಕ್ಕೆ ಸಂಬಂಧಿಸಿ ತೆರವಾಗಿರುವ ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್‌ ಸ್ಥಾನಕ್ಕೆ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಗ್ಯಾರಿ ಕಸ್ಟರ್ನ್ ನೆಚ್ಚಿನ ಆಕಾಂಕ್ಷಿಯಾಗಿ ಕಾಣಿಸಿಕೊಂಡಿದ್ದಾರೆ. ಸಂದರ್ಶನದ ಬಳಿಕ ಪ್ರಕಟಿಸಲಾದ ಮೂವರ ಶಾರ್ಟ್ ಲಿಸ್ಟ್‌ನಲ್ಲಿ ಕಸ್ಟರ್ನ್ ಮುಂಚೂಣಿಯಲ್ಲಿದ್ದಾರೆ.

'ಧೋನಿ ರಣಜಿ ಆಡಿದರೆ ಯುವ ಪ್ರತಿಭಾವಂತ ಅವಕಾಶ ವಂಚಿತನಾಗುತ್ತಾನೆ!''ಧೋನಿ ರಣಜಿ ಆಡಿದರೆ ಯುವ ಪ್ರತಿಭಾವಂತ ಅವಕಾಶ ವಂಚಿತನಾಗುತ್ತಾನೆ!'

ಗುರುವಾರ (ಡಿಸೆಂಬರ್ 20) ಭಾರತದ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಕರೆಯಲಾದ ಸಂದರ್ಶನದಲ್ಲಿ ವಿದೇಶಿ ಅಭ್ಯರ್ಥಿಗಳೂ ಸೇರಿ ಒಟ್ಟು 11 ಮಂದಿ ಪಾಲ್ಗೊಂಡಿದ್ದರು. ಮಾಜಿ ಆಟಗಾರ ಕಪಿಲ್‌ದೇವ್, ಆಂಶುಮಾನ್ ಗಾಯಕ್ವಾಡ್ ಮತ್ತು ಶಾಂತ ರಂಗಸ್ವಾಮಿ ಅವರಿದ್ದ ತಂಡ ಸಂದರ್ಶನವನ್ನು ನಡೆಸಿತ್ತು.

ಸಂದರ್ಶನದ ಬಳಿಕ ಪ್ರಕಟಿಸಲಾದ ಅಂತಿಮ ಮೂವರ ಪಟ್ಟಿಯಲ್ಲಿ ಗ್ಯಾರಿ ಕಸ್ಟರ್ನ್, ಡಬ್ಲ್ಯೂವಿ ರಾಮನ್ ಮತ್ತು ವೆಂಕಟೇಶ್ ಪ್ರಸಾದ್ ಇದ್ದಾರೆ. ಈ ಮೂವರಲ್ಲಿ ಗ್ಯಾರಿಯೇ ನೆಚ್ಚಿನ ಆಕಾಂಕ್ಷಿ. ಯಾಕೆಂದರೆ ಅವರಿಗೆ ಈ ಹಿಂದೆ ಭಾರತದ ಪುರುಷರ ತಂಡವನ್ನು ನಿಭಾಯಿಸಿದ ಅನುಭವವಿದೆ. ವಿಶ್ವಕಪ್ ವಿಜೇತ ಭಾರತದ ಪುರುಷರ ಕ್ರಿಕೆಟ್ ತಂಡದ ಕೋಚ್ ಹೆಗ್ಗಳಿಕೆಯೂ ಗ್ಯಾರಿಗಿದೆ.

ಐಸಿಸಿ ಮಹಿಳಾ ವಿಶ್ವ ಟಿ20ಯ ಸೆಮಿಫೈನಲ್‌ನಲ್ಲಿ ಮಿಥಾಲಿಯನ್ನು ಆಡಿಸಿರಲಿಲ್ಲ. ಇಂಗ್ಲೆಂಡ್ ವಿರುದ್ಧ ನಡೆದಿದ್ದ ಈ ಪಂದ್ಯದಲ್ಲಿ ಭಾರತದ ಮಹಿಳೆಯರು ಹೀನಾಯ ಸೋಲು ಕಂಡಿದ್ದರು. ಹೀಗಾಗಿ ವಿವಾದ ಶುರುವಾಗಿ ರಮೇಶ್ ಪೊವಾರ್ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಲಾಗಿತ್ತು.

ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಅನೂಪ್, ಕಬಡ್ಡಿಯಿಂದ ನಿವೃತ್ತಿವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಅನೂಪ್, ಕಬಡ್ಡಿಯಿಂದ ನಿವೃತ್ತಿ

ಈಗ ಕಸ್ಟರ್ನ್ ಕೋಚ್ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರಾದರೂ ಅವರು ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ ಮುಂದೇನಾಗಲಿದೆಯೋ ಕಾದು ನೋಡಬೇಕಿದೆ.

Story first published: Thursday, December 20, 2018, 18:04 [IST]
Other articles published on Dec 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X