ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟದತ್ತ ಕರೆದೊಯ್ದಿದ್ದು 'ಈತ' ಎಂದ ಯೂಸುಫ್ ಪಠಾಣ್

Gautam Gambhir Changed Kkr Into A Champion Side, Feels Yusuf Pathan

ಆರಂಭದಿಂದಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅದ್ಭುತವಾದ ಆಟಗಾರರನ್ನು ಹೊಂದಿತ್ತು. ಆದರೆ ಟೂರ್ನಿಯಲ್ಲಿ ಹೇಳಿಕೊಳ್ಳುವಂತಾ ಯಶಸ್ಸನ್ನು ಅವರು ಸಾಧಿಸಲಿಲ್ಲ. ಆದರೆ ಕೊಲ್ಕತ್ತಾ ಬಳಿಕ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗಿದ್ದು ಓರ್ವ ವ್ಯಕ್ತಿಯಿಂದ ಎಂದು ಯೂಸುಫ್ ಪಠಾಣ್ ಹೇಳಿದ್ದಾರೆ.

'ಖೇಲ್ ರತ್ನ'ಕ್ಕೆ ಬಾಕ್ಸರ್ ಅಮಿತ್ ಪಂಘಲ್, ವಿಕಾಸ್ ಕ್ರಿಶನ್ ನಾಮನಿರ್ದೇಶನ'ಖೇಲ್ ರತ್ನ'ಕ್ಕೆ ಬಾಕ್ಸರ್ ಅಮಿತ್ ಪಂಘಲ್, ವಿಕಾಸ್ ಕ್ರಿಶನ್ ನಾಮನಿರ್ದೇಶನ

ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದು 2012ರಲ್ಲಿ. ಅದಾದ ಎರಡನೇ ವರ್ಷಕ್ಕೆ ಕೆಕೆಆರ್ ತಂಡ ಮತ್ತೆ ಚಾಂಪಿಯನ್ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತು. ಯುವ ಆಟಗಾರರನ್ನು ಹೊಂದಿದ್ದ ತಂಡ ಎರಡನೇ ಬಾರಿಗೆ ಚಾಂಪಿಯನ್ ಆಗಿತ್ತು. ಆದರೆ ಕೆಕೆಆರ್ ತಂಡದ ಈ ಪ್ರದರ್ಶನದ ಹಿಂದೆ ಓರ್ವ ವ್ಯಕ್ತಿಯ ಕೊಡುಗೆ ಅಪಾರವಾಗಿತ್ತು ಎಂದು ಯೂಸುಫ್ ಪಠಾಣ್ ಹೇಳಿಕೊಂಡಿದ್ದಾರೆ.

ನಾಯಕನೇ ತಂಡದ ಶಕ್ತಿ

ನಾಯಕನೇ ತಂಡದ ಶಕ್ತಿ

ಯೂಸುಫ್ ಪಠಾಣ್ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡದ ಯಶಸ್ಸಿಗೆ ಕಾರಣ ಎಂದಿದ್ದು ಬೇರೆ ಯಾರನ್ನೂ ಅಲ್ಲ. ಅದು ಕೆಕೆಆರ್ ತಂಡದ ನಾಯಕನಾಗಿದ್ದ ಗೌತಮ್ ಗಂಭೀರ್. ತಂಡವನ್ನು ಶಾಂತ ರೀತಿಯಿಂದ ಹಾಗೂ ಸಾಕಷ್ಟು ಶಿಸ್ತುಬದ್ಧವಾಗಿ ಗೌತಮ್ ಗಂಭೀರ್ ಮುನ್ನಡೆಸುತ್ತಿದ್ದರು ಎಂದು ಯೂಸುಫ್ ಪಠಾಣ್ ಹೇಳಿದ್ದಾರೆ.

ಆಟಗಾರರಿಗೆ ನಾಯಕನ ಬೆಂಬಲ

ಆಟಗಾರರಿಗೆ ನಾಯಕನ ಬೆಂಬಲ

ಲೈವ್ ಸಂವಾದದಲ್ಲಿ ಮೊಹಮದ್ ಕೈಫ್ ಜೊತೆಗೆ ಪಠಾಣ್ ಭಾಗಿಯಾಗಿದ್ದರು, ಈ ಸಂದರ್ಭದಲ್ಲಿ ಗಂಭೀರ್ ನಾಯಕತ್ವದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಗೌತಮ್ ಗಂಭೀರ್ ಪ್ರತೀ ಆಟಗಾರನಿಗೂ ಬೆಂಬಲವಾಗಿ ನಿಲ್ಲುತ್ತಿದ್ದರು. ಪ್ರತೀ ಸಂದರ್ಭದಲ್ಲೂ ಸರಿಯಾದ ರಣತಂತ್ರವನ್ನು ಸಿದ್ಧಪಡಿಸುತ್ತಿದ್ದರು. ಆತನೋರ್ವ ನಿರ್ಭೀತ ನಾಯಕ ಎಂದು ಗೌತಮ್ ಗಂಭೀರ್ ಬಗ್ಗೆ ಹೇಳಿದ್ದಾರೆ.

2011ರಲ್ಲಿ ನಾಯಕತ್ವ ಕೆಕೆಆರ್ ಸೇರಿಕೊಂಡ ಗಂಭೀರ್

2011ರಲ್ಲಿ ನಾಯಕತ್ವ ಕೆಕೆಆರ್ ಸೇರಿಕೊಂಡ ಗಂಭೀರ್

ಗೌತಮ್ ಗಂಭೀರ್ ಆರಂಭದಲ್ಲಿ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಬಾಗವಾಗಿದ್ದರು. ಆದರೆ 2011ರ ಐಪಿಎಲ್‌ಗೂ ಮುನ್ನ ನಡೆದ ಹರಾಜಿನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್ ಗಂಭೀರ್ ಅವರನ್ನ ಸೇರ್ಪಡೆಗೊಳಿಸಿ ತಂಡದ ನಾಯಕನನ್ನಾಗಿ ಮಾಡಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಈ ನಿರ್ಧಾರವನ್ನು ಗಂಭೀರ್ ಬಲವಾಗಿ ಸಮರ್ಥಿಸಿಕೊಂಡಿದ್ದರು.

ಎರಡು ಬಾರಿ ಚಾಂಪಿಯನ್ ಪಟ್ಟ

ಎರಡು ಬಾರಿ ಚಾಂಪಿಯನ್ ಪಟ್ಟ

ಗಂಭೀರ್ ಕೆಕೆಆರ್ ತಂಡದ ನಾಯಕತ್ವ ವಹಿಸಿಕೊಂಡ ಎರಡನೇ ವರ್ಷಕ್ಕೆ ಕೊಲ್ಕತ್ತಾ ತಂಡ ಐಪಿಎಲ್‌ನಲ್ಲಿ ಮೊಟ್ಟ ಮೊದಲಬಾರಿಗೆ ಚಾಂಪಿಯನ್ ಆಗಿತ್ತು. 2012ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಮತ್ತೆರಡು ವರ್ಷಕ್ಕೆ ಮತ್ತೊಂದು ಐಪಿಎಲ್ ಟ್ರೋಫಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿತ್ತು. ನಾಯಕತ್ವ ಮಾತ್ರವಲ್ಲ ಅದ್ಭುತ ಬ್ಯಾಟಿಂಗ್‌ನಿಂದಲೂ ಗಂಭೀರ್ ದೊಡ್ಡ ಯಶಸ್ಸು ಸಾಧಿಸಿದ್ದರು.

Story first published: Tuesday, June 2, 2020, 16:02 [IST]
Other articles published on Jun 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X