ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ರಾವಿಡ್‌ರಿಂದ ಅಂತಾದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ: ರವಿ ಶಾಸ್ತ್ರಿ ಕೋಚ್ ಅವಧಿಯ ಬಗ್ಗೆ ಗಂಭೀರ್ ಮಾತು

Gautam Gambhir criticize Former coach Ravi Shastri said Dravid wont do that

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಸ್ಥಾನವನ್ನು ರಾಹುಲ್ ದ್ರಾವಿಡ್ ವಹಿಸಿಕೊಂಡಿದ್ದಾರೆ. ಈ ಹಿಂದಿನ ಕೋಚ್ ಆಗಿದ್ದ ರವಿ ಶಾಸ್ತ್ರಿ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಅಭಿಯಾನ ಮುಕ್ತಾಯವಾಗುತ್ತಿದ್ದಂತೆಯೇ ಕೋಚ್ ಅವಧಿಯೂ ಪೂರ್ಣಗೊಂಡಿತ್ತು. ಹೀಗಾಗಿ ಮಾಜಿ ಕ್ರಿಕೆಟ್ಇಗ ರಾಹುಲ್ ದ್ರಾವಿಡ್ ಅವರನ್ನು ಈ ಹುದ್ದೆಗೆ ಬಿಸಿಸಿಐ ನಿಯೋಜನೆ ಮಾಡಿದೆ.

ರವಿ ಶಾಸ್ತ್ರಿ ಮುಖ್ಯ ಕೋಚ್ ಅವಧಿಯಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಬೇಗನೆ ನಿರ್ಗಮಿಸಿದರೂ, ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದ್ದರೂ ಯಶಸ್ವಿ ಕೋಚ್ ಎಂದು ಕರೆಸಿಕೊಳ್ಳಯತ್ತಾರೆ. ಅದಕ್ಕೆ ಕಾರಣ ರವಿ ಶಾಸ್ತ್ರಿ ಅವರ ಕೋಚಿಂಗ್ ಅವಧಿಯಲ್ಲಿ ಟೀಮ್ ಇಂಡಿಯಾ ಮೂರು ಮಾದರಿಯಲ್ಲಿಯೂ ಅದ್ಭುತ ಯಶಸ್ಸು ಸಾಧಿಸಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಾ ದೇಶಗಳಲ್ಲಿಯೂ ಭಾರತ ಅಮೋಘ ಗೆಲುವು ಸಾಧಿಸಿದೆ. ಇದು ರವಿ ಶಾಸ್ತ್ರಿ ಯಶಸ್ಸನ್ನು ಸಾರಿ ಹೇಳುತ್ತಿದೆ. ಹಾಗಿದ್ದರೂ ರವಿ ಶಾಸ್ತ್ರಿ ಕೋಚ್ ಹುದ್ದೆಯ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿಕೆ ಕುತೂಹಲ ಮೂಡಿಸುತ್ತಿದೆ.

ನಾನು ಯಾವಾಗಲೂ ನಿಮ್ಮ ನಂ.1 ಫ್ಯಾನ್: ABD ನಿವೃತ್ತಿ ಸುದ್ದಿ ಕೇಳಿ ತೀವ್ರ ನೊಂದುಕೊಂಡ ವಿರಾಟ್ ಕೊಹ್ಲಿನಾನು ಯಾವಾಗಲೂ ನಿಮ್ಮ ನಂ.1 ಫ್ಯಾನ್: ABD ನಿವೃತ್ತಿ ಸುದ್ದಿ ಕೇಳಿ ತೀವ್ರ ನೊಂದುಕೊಂಡ ವಿರಾಟ್ ಕೊಹ್ಲಿ

ರವಿ ಶಾಸ್ತ್ರಿ ನಡೆಯನ್ನು ಟೀಕಿಸಿದ ಗೌತಮ್ ಗಂಭೀರ್

ರವಿ ಶಾಸ್ತ್ರಿ ನಡೆಯನ್ನು ಟೀಕಿಸಿದ ಗೌತಮ್ ಗಂಭೀರ್

ವಿದೇಶಿ ನೆಲದಲ್ಲಿ ಅದ್ಭುತವಾದ ಯಶಸ್ಸು ಸಾಧಿಸಿದ ಹೊರತಾಗಿಯತೂ ಗೌತಮ್ ಗಂಭೀರ್ ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಅವರ ಒಂದು ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದ್ಭುತ ಯಶಸ್ಸಿನ ನಂತರ ರವಿ ಶಾಸ್ತ್ರಿ ನೀಡುತ್ತಿದ್ದ ಹೇಳಿಕೆಗಳು ತನಗೆ ಅಚ್ಚರಿಯುಂಟು ಮಾಡುತ್ತಿತ್ತು. ಯಶಸ್ಸು ದೊರೆತಾಗ ತಮ್ಮ ಸಾಧನೆಯನ್ನು ನಾವು ಹೊಗಳಿಕೊಳ್ಳುವುದು ಸರಿಯಲ್ಲ. ಆಗ ಇತರರರು ನಮ್ಮ ಬಗ್ಗೆ ಮಾತನಾಡಬೇಕು. ಆದರೆ ಇಂತಾ ವಿಚಾರದಲ್ಲಿ ರವಿ ಶಾಸ್ತ್ರಿ ವರ್ತನೆ ನನಗೆ ಅಚ್ಚರಿಯುಂಟು ಮಾಡಿತ್ತು ಎಂದಿದ್ದಾರೆ ಗೌತಮ್ ಗಂಭೀರ್.

ರವಿ ಶಾಸ್ತ್ರಿ ಹೇಳಿಕೆಗಳ ಬಗ್ಗೆ ಗಂಭೀರ್ ಅಸಮಾಧಾನ

ರವಿ ಶಾಸ್ತ್ರಿ ಹೇಳಿಕೆಗಳ ಬಗ್ಗೆ ಗಂಭೀರ್ ಅಸಮಾಧಾನ

ವಿದೇಶದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ನಂತರ ರವಿ ಶಾಸ್ತ್ರಿ ತಂಡದ ಗೆಲುವಿನ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ ಕೆಲ ಹೇಳಿಕೆಗಳನ್ನು ನೀಡಿದ್ದರು. ವಿಶ್ವದ ಶ್ರೇಷ್ಠ ತಂಡ ತಮ್ಮದು, 1983ರಲ್ಲಿ ಗೆದ್ದ ವಿಶ್ವಕಪ್‌ಗಿಂತಲೂ ಈ ಗೆಲುವು ಶ್ರೇಷ್ಠವಾದದ್ದು ಎಂಬಂತಾ ಹೇಳಿಕೆಗಳನ್ನು ಶಾಸ್ತ್ರಿ ಹೇಳಿದ್ದರು. ಇಂತಾ ಮಾತು ರವಿ ಶಾಸ್ತ್ರಿಯವರಿಂದ ಬಂದಿದ್ದು ನನಗೆ ಅಚ್ಚರಿಯುಂಟು ಮಾಡಿತ್ತು. ಅದ್ಭುತವಾಗಿ ಆಡಿ ಗೆದ್ದಂತಾ ಸಂದರ್ಭದಲ್ಲಿ ನೀವು ಅದನ್ನು ಮಾತನಾಡಬಾರದು. ಇತರರು ಮಾತನಾಡುವಂತಾಗಬೇಕು. 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಯಾರೂ ಕೂಡ ಈ ತಂಡ ವಿಶ್ವದ ಅತ್ಯಂತ ಬಲಿಷ್ಠ ತಂಡ ಎಂದು ಯಾರೂ ಹೇಳಿರಲಿಲ್ಲ" ಎಂದಿದ್ದಾರೆ ಗೌತಮ್ ಗಂಭೀರ್ ಹೇಳಿದ್ದಾರೆ.

ದ್ರಾವಿಡ್ ಅವರಿಂದ ಇಂತಾ ಹೇಳಿಕೆ ಅಸಾಧ್ಯ

ದ್ರಾವಿಡ್ ಅವರಿಂದ ಇಂತಾ ಹೇಳಿಕೆ ಅಸಾಧ್ಯ

ನೀವು ಗೆದ್ದಾಗ ಇತರರು ಆ ಬಗ್ಗೆ ಮಾತನಾಡಬೇಕು. ನೀವು ಆಸ್ಟ್ರೇಲಿಉಯಾದಲ್ಲಿ ಗೆದ್ದಿದ್ದೀರಿ. ಅದು ಅತ್ಯಂತ ಶ್ರೇಷ್ಠವಾದ ಸಾಧನೆ. ಅದರಲ್ಲಿ ಅನುಮಾನವೇ ಇಲ್ಲ. ನೀವು ಇಂಗ್ಲೆಂಡ್‌ನಲ್ಲಿ ಅದ್ಭುತವಾಗಿ ಆಡಿ ಗೆದ್ದಿದ್ದೀರಿ. ಆದರೆ ಆ ಗೆಲುವಿನ ಬಗ್ಗೆ ಇತರರು ಪ್ರಶಂಸಿಸಬೇಕು. ಇಂತಾ ಹೇಳಿಕೆಗಳನ್ನು ನೀವು ದ್ರಾವಿಡ್ ಅವರಿಂದ ನಿರೀಕ್ಷಿಸಲು ಸಾಧ್ಯವೇ ಇಲ್ಲ. ತಂಡ ಗೆಲ್ಲಿ ಅಥವಾ ಸೋಲಲು ಅವರ ಹೇಳಿಕೆಗಳು ಯಾವಾಗಲೂ ಸಮತೋಲಿತವಾಗಿರುತ್ತದೆ. ಇದು ಇತರ ಆಟಗಾರರ ಮೇಲೆಯೂ ಪರಿಣಾಮವನ್ನು ಬೀರುತ್ತದೆ" ಎಂದಿದ್ದಾರೆ ಗೌತಮ್ ಗಂಭೀರ್.

ದ್ರಾವಿಡ್ ಮೇಲೆ ಗೌತಿಗೆ ಭರವಸೆ

ದ್ರಾವಿಡ್ ಮೇಲೆ ಗೌತಿಗೆ ಭರವಸೆ

ಇನ್ನು ಮುಂದುವರಿದು ಮಾತನಾಡಿದ ಗೌತಮ್ ಗಂಭೀರ್ ರಾಹುಲ್ ದ್ರಾವಿಡ್ ಆಟಗಾರರು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚಿನ ಗಮನಹರಿಸಲಿದ್ದಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. "ನೀವು ಉತ್ತಮವಾಗಿ ಆಡಿ ಅಥವಾ ಕೆಟ್ಟದಾಗಿ ಆಡಿ ಆದರೆ ವಿನಮ್ರತೆ ಬಹಳ ಮುಖ್ಯ. ನನ್ನ ಪ್ರಕಾರ ದ್ರಾವಿಡ್ ಅವರ ಮುಖ್ಯ ಗಮನ ಆಟಗಾರರನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸುವುದಾಗಿರುತ್ತದೆ" ಎಂದಿದ್ದಾರೆ ಗೌತಮ್ ಗಂಭೀರ್.

Story first published: Sunday, November 21, 2021, 22:02 [IST]
Other articles published on Nov 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X