ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಕಾರಣ ಹೇಳಿದ ಗೌತಮ್ ಗಂಭೀರ್

Gautam Gambhir Explains the Reason Behind Mumbai Indians’ Ipl Success

ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಅಂದರೆ ಅದು ಮುಂಬೈ ಇಂಡಿಯನ್ಸ್. ನಾಲ್ಕು ಬಾರಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಎನಿಸಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿಗೆ ಕಾರಣ ಏನು ಎಂಬುದು ಸಾಕಷ್ಟು ಬಾರಿ ಚರ್ಚೆಯಾಗಿದೆ. ಈಗ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

ಗೌತಮ್ ಗಂಭೀರ್ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿಗೆ ಕಾರಣ ಏನು ಎಂಬುದನ್ನು ಗೌತಮ್ ಗಂಭೀರ್ ಹೇಳಿದ್ದಾರೆ.

ಐಪಿಎಲ್‌ ಇತಿಹಾಸದ "ಚೂಸಿ" ಭಾರತೀಯ ಬೌಲರ್‌ಗಳು ಇವರು!
ಗಂಭೀರ್ ಪ್ರಕಾರ ಮುಂಬೈ ಇಂಡಿಯನ್ಸ್ ಯಶಸ್ಸಿನಲ್ಲಿ ತಂಡದ ಮ್ಯಾನೇಜ್‌ಮೆಂಟ್‌ನ ನಿರ್ಧಾರಗಳು ಪ್ರಮುಖ ಪಾತ್ರವಹಿಸಿದೆ ಎಂದು ಅವರು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಭಾವನಾತ್ಮಕ ವಿಚಾರಗಳನ್ನು ಮತ್ತು ಪ್ರಾಯೋಗಿಕ ಸಂಗತಿಗಳನ್ನು ವಿಭಿನ್ನ ಎಂದು ಗುರುತಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ ಗೌತಮ್ ಗಂಭೀರ್. ಆಟದ ಪ್ರಯೋಗದಲ್ಲಿ ಭಾವನಾತ್ಮಕ ನಿರ್ಧಾರಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಯಾವಾತ್ತಿಗೂ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಅವರು ಪ್ರ್ಯಾಕ್ಟಿಕಲ್ ಆಗಿರುವಂತಾ ನಿರ್ಧಾರಗಳ್ನು ತೆಗೆದುಕೊಳ್ಳುತ್ತಾರೆ. ಕ್ರೀಡೆಯಲ್ಲಿ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಭಾವುಕತೆಗೆ ಅವಕಾಶವೇ ನೀಡಬಾರದು ಎಂದು ಗಂಭೀರ್ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕಾಶ್ಮೀರ ಬಿಟ್ಟುಬಿಡಿ, ಸೋತ ಪಾಕ್‌ ಕಡೆ ನೋಡಿ: ಅಫ್ರಿದಿಗೆ ರೈನಾ ಟಾಂಗ್ಕಾಶ್ಮೀರ ಬಿಟ್ಟುಬಿಡಿ, ಸೋತ ಪಾಕ್‌ ಕಡೆ ನೋಡಿ: ಅಫ್ರಿದಿಗೆ ರೈನಾ ಟಾಂಗ್

ಮುಂಬೈ ಇಂಡಿಯನ್ಸ್ ತೆಗೆದುಕೊಳ್ಳುವ ಕಠಿಣ ನಿರ್ಧಾರಕ್ಕೆ ಗಂಭೀರ್ ನಾಯಕತ್ವ ಬದಲಾವಣೆಯ ಉದಾಹರಣೆಯನ್ನು ನೀಡಿದರು. ರಿಕಿ ಪಾಂಟಿಂಗ್ ಅವರ ಬದಲಾಗಿ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾಗೆ ನಾಯಕತ್ವವನ್ನು ನೀಡಿತ್ತು. ಇಂತಾ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

Story first published: Monday, May 18, 2020, 18:12 [IST]
Other articles published on May 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X