ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಭಾರತ ವಿಶ್ವ ಚಾಂಪಿಯನ್ ಆಗೋಲ್ಲ': ಗಂಭೀರ ಕಾರಣ ಹೇಳಿದ ಗಂಭೀರ್

Gautam Gambhir explains why Virat Kohli team don’t play well in knockout matches

ನವದೆಹಲಿ: ವಿರಾಟ್ ಕೊಹ್ಲಿ ಪಡೆ ಇತ್ತೀಚೆಗೆ ಟೂರ್ನಿಯ ಪ್ರಮುಖ ಪಂದ್ಯಗಳಲ್ಲೇ ಸೋಲನುಭವಿಸುತ್ತಿದೆ. ಆರಂಭದ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಾ ಸಾಗುವ ಭಾರತ, ಪ್ರಶಸ್ತಿ ಗೆಲ್ಲಲು ಅತೀ ಪ್ರಮುಖವಾಗಿರುವ ಪಂದ್ಯಗಳನ್ನೇ ಸೋತು ಟ್ರೋಫಿ ಕೈ ಚೆಲ್ಲುತ್ತಿದೆ. ಇದಕ್ಕೆ ಕಳೆದ ವರ್ಷದ ವಿಶ್ವಕಪ್ ಟೂರ್ನಿ ಮತ್ತು ಈ ಬಾರಿಯ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿ ಸಾಕ್ಷಿ ಹೇಳುತ್ತವೆ. ಕೊಹ್ಲಿ ಪಡೆಯ ಈ ಸೋಲಿಗೆ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಪ್ರಮುಖ ಕಾರಣ ವಿವರಿಸಿದ್ದಾರೆ.

ಐಪಿಎಲ್ ಅಭಿಮಾನಿಗಳು ತಿಳಿದಿರಬೇಕಾದ 5 ಕುತೂಹಲಕಾರಿ ಸಂಗತಿಗಳುಐಪಿಎಲ್ ಅಭಿಮಾನಿಗಳು ತಿಳಿದಿರಬೇಕಾದ 5 ಕುತೂಹಲಕಾರಿ ಸಂಗತಿಗಳು

ಸ್ಟಾರ್ ಸ್ಪೋರ್ಟ್ಸ್‌ ಶೋನಲ್ಲಿ ಮಾತನಾಡಿದ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್, ಒತ್ತಡ ನಿಭಾಯಿಸುವಲ್ಲಿ ಟೀಮ್ ಇಂಡಿಯಾ ಅಷ್ಟೇನೂ ಚೆನ್ನಾಗಿಲ್ಲ. ತಂಡದ ಸೋಲಿಗೆ ಇದು ಪ್ರಮುಖ ಕಾರಣ ಎಂದಿದ್ದಾರೆ.

'ಕೊಹ್ಲಿಯಲ್ಲಿ ಅಹಂ ಇದೆ': ವಿರಾಟ್ ಔಟ್‌ಗೆ ಐಡಿಯಾಗಳ ಕೊಟ್ಟ ಮುಷ್ತಾಕ್!'ಕೊಹ್ಲಿಯಲ್ಲಿ ಅಹಂ ಇದೆ': ವಿರಾಟ್ ಔಟ್‌ಗೆ ಐಡಿಯಾಗಳ ಕೊಟ್ಟ ಮುಷ್ತಾಕ್!

ನಾಕೌಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸೋಲುತ್ತಿರುವ ಬಗ್ಗೆ ಗಂಭೀರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ, ಕುತೂಹಲಕಾರಿ ಮತ್ತು ಅರ್ಥಪೂರ್ಣ ವಿವರಣೆ ಕೊಟ್ಟಿದ್ದಾರೆ.

ಭಾರತ ವಿಶ್ವ ಚಾಂಪಿಯನ್ಸ್ ಆಗಲಾರದು

ಭಾರತ ವಿಶ್ವ ಚಾಂಪಿಯನ್ಸ್ ಆಗಲಾರದು

2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಸಿಸಿರುವ ಗಂಭೀರ್, ಟೀಮ್ ಇಂಡಿಯಾದ ಹಿನ್ನಡೆಗೆ ಕಾರಣ ವಿವರಿಸುತ್ತ, ಎಷ್ಟರವರೆಗೆ ಭಾರತ ತಂಡ ಮಾನಸಿಕ ಅಂಶಗಳನ್ನು ಉತ್ತಮಗೊಳಿಸಿಕೊಳ್ಳುವುದಿಲ್ಲವೋ ಅಲ್ಲಿವರೆಗೂ ಕೊಹ್ಲಿಪಡೆ ವಿಶ್ವಚಾಂಪಿಯನ್ಸ್ ಅನ್ನಿಸಿಕೊಳ್ಳಲಾರದು ಎಂದಿದ್ದಾರೆ.

ಬೇರೆ ತಂಡಗಳ ಗೆಲುವಿನ ಗುಟ್ಟಿದು

ಬೇರೆ ತಂಡಗಳ ಗೆಲುವಿನ ಗುಟ್ಟಿದು

'ತಂಡದಲ್ಲಿ ಉತ್ತಮ, ಅತ್ಯುತ್ತಮ ಆಟಗಾರನಾಗಿರುವುದನ್ನು ನೀವು ಪ್ರತ್ಯೇಕವಾಗಿರಿಸುವುದು ನಿರ್ಣಾಯಕ ಆಟಗಳಲ್ಲಿ ನೀವು ಏನು ಮಾಡುತ್ತೀರಿ ಎಂಬುದನ್ನವಲಂಭಿಸಿ. ನಾವು ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಬಹುಶಃ ಇತರ ತಂಡಗಳು ಒತ್ತಡವನ್ನು ನಿಭಾಯಿಸುವಲ್ಲಿ ಸಮರ್ಥವಾಗಿವೆ,' ಎಂದು ಗಂಭೀರ್ ಹೇಳಿದ್ದಾರೆ.

ವಿಶ್ವ ಚಾಂಪಿಯನ್ ಆಗುವ ಸಾಮರ್ಥ್ಯವಿದೆ

ವಿಶ್ವ ಚಾಂಪಿಯನ್ ಆಗುವ ಸಾಮರ್ಥ್ಯವಿದೆ

ಮಾತು ಮುಂದುವರೆಸಿದ ಗಂಭೀರ್, 'ನೀವು ಎಲ್ಲಾ ಸೆಮಿಫೈನಲ್, ಫೈನಲ್ ಪಂದ್ಯಗಳನ್ನು ಗಮನಿಸಿ; ನಾವು ಲೀಗ್ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ಸೆಮಿಫೈನಲ್ ಅಥವಾ ನಾಕೌಟ್ ಹಂತಗಳಲ್ಲಿ ಚೆನ್ನಾಗಿ ಆಡುತ್ತಿಲ್ಲ. ಇದು ಬಹುಶಃ ನಮ್ಮ ಮಾನಸಿಕ ಕಠಿಣತೆಯ ಕಾರಣದಿಂದಿರಬಹುದು. ನಾವಿದರ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತೇವೆ. ನಮಗೆ ವಿಶ್ವ ಚಾಂಪಿಯನ್ ಆಗುವ ಸಾಮರ್ಥ್ಯವಿದೆ. ಆದರೆ ಕ್ರಿಕೆಟ್ ಮೈದಾನಕ್ಕೆ ಹೋಗಿ ನಾವಿದನ್ನು ಸಾಭೀತುಪಡಿಸದಿದ್ದರೆ ನಾವು ವಿಶ್ವಚಾಂಪಿಯನ್ ಆಗಲಾರೆವು,' ಎಂದರು.

ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತಿದೆ

ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತಿದೆ

ಗಂಭೀರ್ ಹೇಳಿರುವ ಮಾತುಗಳು ನಿಜ ಅನ್ನಿಸುತ್ತದೆ. ಭಾರತ ನಿರ್ಣಾಯಕ ಎನಿಸಿದ ನಾಕೌಟ್ ಪಂದ್ಯಗಳನ್ನೇ ಸೋತ ಅನೇಕ ಉದಾಹರಣೆಗಳಿವೆ. 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿನ ಫೈನಲ್ ಸೋಲು, 2019ರಲ್ಲಿ ವಿಶ್ವಕಪ್ ಸೆಮಿಫೈನಲ್ ಸೋಲು ಸಾಕ್ಷಿ ಹೇಳುತ್ತವೆ. 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೇ ಕೊನೆ, ಆ ಬಳಿಕ ಭಾರತ ಯಾವ ಐಸಿಸಿ ಟೂರ್ನಿಗಳನ್ನೂ ಗೆದ್ದಿಲ್ಲ. ಎಂಎಸ್ ಧೋನಿ ನಾಯಕತ್ವದಲ್ಲೂ ಭಾರತ 2014ರ ಟಿ20 ವಿಶ್ವಕಪ್ ಫೈನಲ್, 2015ರ ವಿಶ್ವಕಪ್ ಸೆಮಿಫೈನಲ್ ಮತ್ತು 2016ರ ವಿಶ್ವ ಟಿ20ಯ ಸೆಮಿಫೈನಲ್‌ನಲ್ಲಿ ಸೋತಿತ್ತು.

Story first published: Saturday, June 13, 2020, 22:13 [IST]
Other articles published on Jun 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X