ಬೆಂಬಲಿಗನಾಗಿದ್ದರೆ ಹಣ ರಿಫಂಡ್ ಮಾಡಿ ಎನ್ನುತ್ತಿದ್ದೆ: ಫೈನಲ್ ಪಂದ್ಯದಲ್ಲಿ ಕಿವೀಸ್ ಪ್ರದರ್ಶನಕ್ಕೆ ಬೇಸತ್ತ ಗಂಭೀರ್

ಟಿ20 ವಿಶ್ವಕಪ್ ಮುಕ್ತಾಯವಾಗಿದ್ದು ಆಸ್ಟ್ರೇಲಿಯಾ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ರನ್ನರ್‌ಅಪ್ ನ್ಯೂಜಿಲೆಂಡ್ ತಂಡ ಈಗಾಗಲೇ ಭಾರತಕ್ಕೆ ತಲುಪಿದ್ದು ಭಾರತದ ವಿರುದ್ಧ ಸರಣಿಗೆ ಸಜ್ಜಾಗುತ್ತಿದೆ. ಆದರೆ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ಇನ್ನೂ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದ ಗೌತಮ್ ಗಂಭೀರ್ ನ್ಯೂಜಿಲೆಂಡ್ ತಂಡದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗೌತಮ್ ಗಂಭೀರ್ ನ್ಯೂಜಿಲೆಂಡ್ ತಂಡ ಫೈನಲ್‌ನಲ್ಲಿ ಆಡಿದ ರೀತಿಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ತಂಡ ಪವರ್‌ಪ್ಲೇ ಓವರ್‌ನಲ್ಲಿ ತಿಣುಕಾಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ನಿಗದಿತ 20 ಓವರ್‌ಗಳಲ್ಲಿ ನ್ಯೂಜಿಲೆಂಡ್ ತಮಡ 172 ರನ್‌ಗಳ ಸವಾಲಿನ ಮೊತ್ತವನ್ನು ಗಳಿಸಿತ್ತು. ಈ ಗುರಿಯನ್ನು ನೀಡಿದ ಬಳಿಕ ಕೆಲ ಕ್ರಿಕೆಟ್ ಪಂಡಿತರು ನ್ಯೂಜಿಲೆಂಡ್ ತಂಡ ಈ ಸ್ಕೋರ್‌ಅನ್ನು ರಕ್ಷಣೆ ಮಾಡಿಕೊಳ್ಳುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಆಸ್ಟ್ರೇಲಿಯಾ ತಂಡ ಈ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿತು. ಕೇವಲ 2 ವಿಕೆಟ್ ಕಳೆದುಕೊಂಡು 8 ವಿಕೆಟ್‌ಗಳ ಅಂತರದ ಬೃಹತ್ ಗೆಲುವು ದಾಖಲಿಸಿದೆ ಆಸ್ಟ್ರೇಲಿಯಾ.

ಡ್ರೆಸ್ಸಿಂಗ್ ರೂಂನಲ್ಲಿ ಆಸ್ಟ್ರೇಲಿಯಾದ ಸಂಭ್ರಮಾಚರಣೆ ಅಸಹ್ಯ ಹುಟ್ಟಿಸುವಂತಿತ್ತು: ಶೋಯೆಬ್ ಅಕ್ತರ್ಡ್ರೆಸ್ಸಿಂಗ್ ರೂಂನಲ್ಲಿ ಆಸ್ಟ್ರೇಲಿಯಾದ ಸಂಭ್ರಮಾಚರಣೆ ಅಸಹ್ಯ ಹುಟ್ಟಿಸುವಂತಿತ್ತು: ಶೋಯೆಬ್ ಅಕ್ತರ್

ಫೈನಲ್‌ ಪಂದ್ಯಕ್ಕೆ ಈ ಪ್ರದರ್ಶನ ಸಾಕಾಗಲಿಲ್ಲ: ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲು ಅನುಭವಿಸಿದ್ದಕ್ಕೆ ಗೌತಮ್ ಗಂಭೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮುನ್ನವೇ ಗೌತಮ್ ಗಂಭೀರ್ ಭಾರತ ಹೊರತುಪಡಿಸಿದರೆ ಟೂರ್ನಿಯಲ್ಲಿ ತನ್ನ ಮತ್ತೊಂದು ಫೇವರೀಟ್ ತಂಡ ನ್ಯೂಜಿಲೆಂಡ್ ಎಂದಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದುರ್ಬಲರಂತೆ ಸೋಲುವುದು ನೋಡುವುದು ಉತ್ತಮ ಅನುಭವವಾಗಿರಲಿಲ್ಲ ಎಂದಿದ್ದಾರೆ ಗೌತಮ್ ಗಂಭೀರ್.

ಅವರು ಬ್ಯಾಟಿಂಗ್ ಉತ್ತಮವಾಗಿತ್ತು: "ಮುಂದುವರಿದು ಮಾತನಾಡಿದ ಗಂಭೀರ್ "ಅವರ ಬ್ಯಾಟಿಂಗ್ ಉತ್ತಮವಾಗಿತ್ತು. 172/4 ರನ್‌ಗಳಿಸಿದ್ದರು. ಇಷ್ಟು ಉತ್ತಮವಾದ ಸ್ಕೋರ್‌ಅನ್ನು ರಕ್ಷಣೆ ಮಾಡಿಕೊಳ್ಳುವುದು ಕಷ್ಟಕರವಲ್ಲ. ಅದರಲ್ಲೂ ನ್ಯೂಜಿಲೆಂಡ್ ತಂಡದ ಬೌಲಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿದೆ. ಆದರೆ ನ್ಯೂಜಿಲೆಂಡ್ ತಂಡ ಭಾರತ ಅಥವಾ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ತಂಡದಂತೆ ಕಂಡುಬರಲಿಲ್ಲ" ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೈಮ್ಸ್ ಆಪ್ ಇಂಡಿಯಾಗೆ ಬರೆದ ಅಂಕಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫೈನಲ್‌ಗೆ ಸೂಕ್ತವಾದ ಪ್ರದರ್ಶನವಲ್ಲ ಇನ್ನು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಫೈನಲ್ ಪಂದ್ಯಕ್ಕೆ ಸೂಕ್ತವಾದ ಆಟವನ್ನು ನ್ಯೂಜಿಲೆಂಡ್ ಪ್ರದರ್ಶಿಸಲಿಲ್ಲ ಎಂದಿದ್ದಾರೆ. "ಸಾಕಷ್ಟು ಪೂರ್ವಯೋಜನೆಯೊಂದಿಗೆ ಆಡುವ ನ್ಯೂಜಿಲೆಂಡ್ ತಂಡ ಉತ್ತಮವಾದ ರಣತಂತ್ರದೊಂದಿಗೆ ಆಡುತ್ತದೆ. ಆದರೆ ಈ ಬಾರಿ ಅಣೀಮಾಣಿಗಳಿಗೆ ನಿರಾಸೆ ಮೂಡಿಸಿದೆ. ನಾನೇನಾದರೂ ನ್ಯೂಜಿಲೆಂಡ್ ತಂಡದ ಬೆಂಬಲಿಗನಾಗಿದ್ದರೆ ನನ್ನ ಟಿಕೆಟ್ ಹಣವನ್ನು ವಾಪಾಸ್ ಕೇಳುತ್ತಿದ್ದೆ. ಯಾಕೆಂದರೆ ಇದು ಫೈನಲ್‌ಗೆ ಅರ್ಹವಾದ ಪ್ರದರ್ಶನವಾಗಿರಲಿಲ್ಲ" ಎಂದಿದ್ದಾರೆ ಗೌತಮ್ ಗಂಭೀರ್.

ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರನ್ನು ಹೆಸರಿಸಿದ ಹರ್ಷ ಭೋಗ್ಲೆಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರನ್ನು ಹೆಸರಿಸಿದ ಹರ್ಷ ಭೋಗ್ಲೆ

ಗೇಮ್ ಪ್ಲಾನ್ ಬಗ್ಗೆ ಗಂಭೀರ್ ಟೀಕೆ: ಇನ್ನು ಅಂತಿಮವಾಗಿ ಬೌಲಿಂಗ್ ವೇಳೆ ನ್ಯೂಜಿಲೆಂಡ್ ತಂಡ ಮಿಶೆಲ್ ಮಾರ್ಶ್ ವಿಕೆಟ್ ಪಡೆಯಲು ಮಾಡಿದ ಗೇಮ್‌ಪ್ಲಾನ್ ಬಗ್ಗೆಯೂ ಟೀಕಿಸಿದ್ದಾರೆ. "ಮಿಶೆಲ್ ಮಾರ್ಶ್ ಕ್ರೀಸ್‌ನಲ್ಲಿದ್ದಾಗ ನ್ಯೂಜಿಲೆಂಡ್ ಆಟಗಾರರು ಯಾವ ಕಾರಣಕ್ಕಾಗಿ ಶಾರ್ಟ್ ಹಾಗೂ ತಪಗಪಾದ ಲೈನ್‌ನಲ್ಲಿ ಎಸೆತಗಳನ್ನು ಹಾಕುತ್ತಿದ್ದರು ಎಂಬುದು ಅರ್ಥವಾಗುತ್ತಿಲ್ಲ. ಆತ ದಕ್ಷಿಣ ಆಸ್ಟ್ರೇಲಿಯಾದ ಆಟಗಾರ. ತನ್ನ ಹೆಚ್ಚಿನ ಪಂದ್ಯಗಳನ್ನು ವಾಕಾ ಅಥವಾ ಪರ್ಥ್‌ನಲ್ಲಿ ಆಡಿರುತ್ತಾರೆ. ಅದರರ್ಥ ಆತ ಪುಲ್‌ಶಾಟ್‌ಗಳನ್ನು ತನ್ನ ಆರಂಭದಲ್ಲಿಯೇ ಕಲಿತುಕೊಂಡಿರುತ್ತಾನೆ" ಎಂದು ಮಿಶಲೆ ಮಾರ್ಶ್‌ಗೆ ಕಿವೀಸ್ ಪಡೆಯ ರಣತಂತ್ರದ ಬಗ್ಗೆ ಟೀಕಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, November 16, 2021, 16:06 [IST]
Other articles published on Nov 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X