ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಂ.7 ಕ್ರಮಾಂಕದಲ್ಲಿ ಬಂದು ಧೋನಿ ಕಿಸಿದಿದ್ದೇನು?: ಗಂಭೀರ್ ಕಿಡಿ

ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಗೆಲ್ಲಲು ಚೆನ್ನೈ ತಂಡಕ್ಕೆ 38 ಎಸೆತಗಳಲ್ಲಿ 103 ರನ್ ಬೇಕಿತ್ತು. ಬೇರೆ ತಂಡವಾಗಿದ್ದರೆ ಇದು ತುಂಬಾನೇ ಕಷ್ಟದ ಗುರಿ ಎನ್ನಬಹುದಾಗಿತ್ತು. ಆದರೆ, ಚೆನ್ನೈ ತಂಡಕ್ಕೆ ಅದರಲ್ಲೂ ನಾಯಕ ಧೋನಿ ಇದ್ದಾಗ ಇದು ಸುಲಭ ಸಾಧ್ಯ ಎಂಬುದು ಎದುರಾಳಿ ನಾಯಕ ಸ್ಮಿತ್ ಅವರಿಗೂ ಗೊತ್ತಿತ್ತು.

ಡುಪ್ಲೆಸಿಸಿ ಜೊತೆಗೆ ಇನ್ನೊಬ್ಬ ಆಟಗಾರ ಸಾಥ್ ನೀಡಿದ್ದರೆ ಚೆನ್ನೈ ಕೊನೆಗೆ ವಿಷಲ್ ಪೋಡು ಎನ್ನಬಹುದಾಗಿತ್ತು. ಆದರೆ, ಆಗಿದ್ದೆ ಬೇರೆ. ಚೆನ್ನೈ ಸೋಲು ಕಾಣಬೇಕಾಯಿತು. ಗೆಲ್ಲಬಹುದಾಗಿದ್ದ ಪಂದ್ಯ ಕೈಚೆಲ್ಲಲು ಧೋನಿಯೇ ಕಾರಣ ಎಂದು ಮಾಜಿ ನಾಯಕ, ಹಾಲಿ ಸಂಸದ ಗೌತಮ್ ಗಂಭೀರ್ ಗುಡುಗಿದ್ದಾರೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಪಂದ್ಯ ಗೆಲ್ಲುವ ಇರಾದೆ ಇರುವವರು ಯಾರಾದರೂ 7ನೇ ಕ್ರಮಾಂಕದಲ್ಲಿ ಆಡಲು ಬರುತ್ತಾರಾ? ಕೊನೆಯಲ್ಲಿ 3 ಸಿಕ್ಸರ್ ಸಿಡಿಸಿದ್ದು ವೈಯಕ್ತಿಕ ತೃಪ್ತಿ, ದಾಖಲೆಗಾಗಿ ಮಾತ್ರ. ಪಂದ್ಯ ಗೆಲ್ಲುವ ಉದ್ದೇಶ ಇದ್ದಿದ್ದರೆ ಒಂದೆರಡು ಓವರ್ ಮೊದಲೇ ಬ್ಯಾಟ್ ಬೀಸಬಹುದಾಗಿತ್ತು ಎಂದು ನೇರವಾಗಿ ಧೋನಿಗೆ ತಾಗುವಂತೆ ಕುಟುಕಿದ್ದಾರೆ.

ರನ್ ಹೊಳೆ ಹರಿಸಲು ಕಳಪೆ ಬೌಲಿಂಗ್ ಕೂಡಾ ಕಾರಣ

ರನ್ ಹೊಳೆ ಹರಿಸಲು ಕಳಪೆ ಬೌಲಿಂಗ್ ಕೂಡಾ ಕಾರಣ

ರಾಜಸ್ಥಾನ್ ರಾಯಲ್ಸ್ ತಂಡ 217 ರನ್ ಗುರಿ ನೀಡಲು ಕೂಡಾ ಧೋನಿ ನಾಯಕತ್ವದ ವೈಫಲ್ಯವೂ ಕಾರಣ ಎನ್ನಬಹುದು. ರಾಜಸ್ಥಾನದ ಪರ ಸಂಜು, ಸ್ಮಿತ್, ಆರ್ಚರ್ ಉತ್ತಮವಾಗಿ ಆಡಿದರು. ಆದರೆ, ಬೌಲಿಂಗ್ ಬದಲಾವಣೆ ಮಾಡುವುದು ಧೋನಿ ಕೈಲಿತ್ತು. ಅದರಲ್ಲೂ ಧೋನಿ ವಿಫಲರಾದರು. ಪಂದ್ಯದ ನಂತರ ಯುವಕರಿಗೆ ಮೇಲ್ಪಂಕ್ತಿಯಲ್ಲಿ ಆಡಲು ಅವಕಾಶ ನೀಡಿದೆ. ಕ್ವಾರಂಟೈನ್ ಅವಧಿ ಸರಿ ಹೋಗಲಿಲ್ಲ ಎಂದೆಲ್ಲ ಕತೆ ಹೊಡೆದಿದ್ದಾರೆ ಎಂದು ಅನೇಕರು ಟೀಕಿಸಿದ್ದಾರೆ.

ತಂಡವನ್ನು ಮುನ್ನಡೆಸುವ ರೀತಿ ಇದೇನಾ?

ತಂಡವನ್ನು ಮುನ್ನಡೆಸುವ ರೀತಿ ಇದೇನಾ?

ಯುವಕರಿಗೆ ಅವಕಾಶ ನೀಡಬೇಕು ನಿಜ. ಸಾಲು ಸಾಲು ಇಬ್ಬರನ್ನು ತಮಗಿಂತ ಮುಂಚಿತವಾಗಿ ಕಳಿಸಿದ್ದಲ್ಲದೆ, 7ನೇ ಕ್ರಮಾಂಕದಲ್ಲಿ ಆಡಿ, ಪಂದ್ಯವನ್ನು ಕೈಚೆಲ್ಲಿದ್ದು ತಂಡವನ್ನು ಮುನ್ನಡೆಸುವ ರೀತಿಯೇ? ಕೊನೆ ಗಳಿಗೆಯಲ್ಲಿ ಪಂದ್ಯ ಕೈತಪ್ಪುತ್ತಿದೆ ಎನ್ನುವಾಗ ಸತತ ಸಿಕ್ಸರ್ ಬಾರಿಸಿ ಗೆಲ್ಲಿಸಲು ಯತ್ನಿಸುವ ತಂತ್ರಗಾರಿಕೆ ಎಲ್ಲಾ ಸಲವೂ ಕ್ಲಿಕ್ ಆಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಲಿ, ಫಾಫ್ ಡು ಪ್ಲೆಸಿಸ್ ಏಕಾಂಗಿ ಹೋರಾಟಕ್ಕೆ ನಡೆಸಿದ್ದು ಬಿಟ್ಟರೆ, ಚೆನ್ನೈನ ಇತರೆ ಆಟಗಾರರು ಕ್ರೀಸಿಗೆ ಬರುತ್ತಿದ್ದಂತೆ ಪಂದ್ಯ ಕೈಬಿಟ್ಟಂತೆ ವರ್ತಿಸುತ್ತಿದ್ದರು ಎಂದು ಗಂಭೀರ್ ಹೇಳಿದ್ದಾರೆ.

ಐಪಿಎಲ್ 2020: ಚೆನ್ನೈ ನಾಯಕ ಧೋನಿ ಬೆನ್ನಿಗೆ ನಿಂತ ಕೋಚ್ ಸ್ಟೀಫನ್ ಫ್ಲೆಮಿಂಗ್

ಮೂವರು ಸಿಕ್ಸರ್ ಯಾವ ಲೆಕ್ಕಕ್ಕೆ

ಮೂವರು ಸಿಕ್ಸರ್ ಯಾವ ಲೆಕ್ಕಕ್ಕೆ

ಮೂವರು ಸಿಕ್ಸರ್ ಯಾವ ಲೆಕ್ಕಕ್ಕೆ? ಯಾರ ಲೆಕ್ಕಕ್ಕೆ? ಪಂದ್ಯ ಗೆಲ್ಲಿಸಲಿಲ್ಲ, ವೈಯಕ್ತಿಕ ಖಾತೆಗೆ ದಾಖಲಾಯಿತು ಅಷ್ಟೇ. ಇದೇ ಕೆಲಸ ಬೇರೆ ಕ್ಯಾಪ್ಟನ್ ಮಾಡಿದ್ದರೆ ತಂಡದಲ್ಲಿ ಉಳಿಗಾಲವಿರುತ್ತಿರಲಿಲ್ಲ. ಧೋನಿ ಹಿಂದಿನ ಇತಿಹಾಸ, ದಾಖಲೆ, ಗಳಿಸಿಕೊಟ್ಟ ಕಪ್ ಎಲ್ಲವನ್ನು ಗಪ್ ಚುಪ್ ಆಗಿಸಿಬಿಡುತ್ತದೆ. ಆದರೆ, ನಾಯಕನಾದ ಮೇಲೆ ಪ್ರತಿ ಪಂದ್ಯವನ್ನು ಹೊಸದಾಗಿ ನೋಡಬೇಕು, ಪ್ರತಿ ಪಂದ್ಯವೂ ಮಹತ್ವವಾದದ್ದು ಎಂಬುದು ಗೊತ್ತಿದ್ದು ಧೋನಿ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ರೈನಾ ಇಲ್ಲದ ಬ್ಯಾಟಿಂಗ್ ಕ್ರಮಾಂಕ

ರೈನಾ ಇಲ್ಲದ ಬ್ಯಾಟಿಂಗ್ ಕ್ರಮಾಂಕ

ಧೋನಿ ಬಿಟ್ಟರೆ ಚೆನ್ನೈ ತಂಡದ ಅನುಭವಿ ಆಟಗಾರ ರೈನಾ, ಸದ್ಯ ರೈನಾ ಅನುಪಸ್ಥಿತಯಲ್ಲಿ ಬ್ಯಾಟಿಂಗ್ ಕ್ರಮಾಂಕವನ್ನು ಸಂಭಾಳಿಸುವುದು ನಾಯಕನಾಗಿ ಧೋನಿ ಕರ್ತವ್ಯ. ಆದರೆ ಧೋನಿ ಪ್ರಯೋಗ ಮಾಡಲು ತಂಡವನ್ನು ಬಳಸಿಕೊಳ್ಳುವಂತಿದೆ. ನನಗಿಂತ ಸ್ಯಾಮ್ ಕರನ್ ಉತ್ತಮವಾಗಿ ಆಡಬಲ್ಲ ಎಂದು ಜಗತ್ತಿಗೆ ಸಾರಲು ಹೊರಟ್ಟಿದ್ರಾ ಏನೋ?ಎಂಬ ಅನುಮಾನ ಕಾಡುತ್ತಿದೆ. ಋತುರಾಜ್ ಗಾಯಕ್ವಾಡ್ , ಕರನ್, ಜಾಧವ್, ಡುಪ್ಲೆಸಿಸ್, ಮುರಳಿ ವಿಜಯ್ ಇವರೆಲ್ಲರೂ ನಿಜಕ್ಕೂ ನಿಮಗಿಂತಲೂ ಉತ್ತಮ ಆಟಗಾರರೇ? ಎಂದು ಧೋನಿಗೆ ಪ್ರಶ್ನೆ ಎಸೆದಿದ್ದಾರೆ ಗಂಭೀರ್

Story first published: Thursday, September 24, 2020, 10:26 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X