ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಎಂಎಸ್ ಧೋನಿಯ ಒಂದು ದಾಖಲೆ ಯಾವತ್ತಿಗೂ ಮುರಿಯಲಾಗಲ್ಲ': ಗಂಭೀರ್

Gautam Gambhir names one MS Dhoni record that is going to stay forever

ಬೆಂಗಳೂರು: ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಅಂತಾರಾಷ್ಟ್ರೀಯ ಆಟ ನಿಲ್ಲಿಸಿದ್ದಾಗಿದೆ. ಆಗಸ್ಟ್ 15ರ ಶನಿವಾರ ಮಾಜಿ ನಾಯಕ ಧೋನಿ ಅಂತಾರಾಷ್ಟ್ರೀಯ ನಿವೃತ್ತಿಯ ನಿರ್ಧಾರ ಪ್ರಕಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಧೋನಿಯ ಬೆನ್ನಲ್ಲೇ ಭಾರತದ ಆಲ್ ರೌಂಡರ್ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಆಟ ನಿಲ್ಲಿಸುವ ನಿರ್ಧಾರ ತಿಳಿಸಿದ್ದರು. ಭಾರತದ ಅತೀ ಯಶಸ್ವಿ ನಾಯಕ ಅನ್ನಿಸಿರುವ ಮಾಹಿಯ ನಿವೃತ್ತಿ ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ನೀಡಿದ್ದು ನಿಜ.

ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಕನಸಿನ್ನೂ ಜೀವಂತ: ರಾಬಿನ್ ಉತ್ತಪ್ಪಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಕನಸಿನ್ನೂ ಜೀವಂತ: ರಾಬಿನ್ ಉತ್ತಪ್ಪ

ಹಾಗಂತ ಧೋನಿ ಮೈದಾನಕ್ಕಿಳಿಯುವುದೇ ಇಲ್ಲವೆಂದಲ್ಲ. ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಲೈವಾ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಇದು ಧೋನಿ ಅಭಿಮಾನಿಗಳಿಗೆ ನಿಟ್ಟುಸಿರಿನ ಸಂಗತಿ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನಡೆಯುವ ಐಪಿಎಲ್ ಹಬ್ಬದಲ್ಲಿ ಧೋನಿಯ ಬ್ಯಾಟಿಂಗ್ ನೋಡುವ ಅವಕಾಶ ಸಿಗಲಿದೆ.

ಮಂಕಡಿಂಗ್ ವಿವಾದಕ್ಕೆ ಆರ್ ಅಶ್ವಿನ್ ಸೂಪರ್ ಸಲಹೆ: ಫ್ರೀಹಿಟ್‌ ರೀತಿಯಲ್ಲೇ ಫ್ರೀ ಬಾಲ್!ಮಂಕಡಿಂಗ್ ವಿವಾದಕ್ಕೆ ಆರ್ ಅಶ್ವಿನ್ ಸೂಪರ್ ಸಲಹೆ: ಫ್ರೀಹಿಟ್‌ ರೀತಿಯಲ್ಲೇ ಫ್ರೀ ಬಾಲ್!

ಐಪಿಎಲ್‌ಗೂ ಆರಂಭಕ್ಕೆ ಮೊದಲೇ ಧೋನಿ ಬಗ್ಗೆ ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಧೋನಿಯ ಒಂದು ದಾಖಲೆ ಮಾತ್ರ ಯಾವತ್ತಿಗೂ ಮುರಿಯಲಾಗದು ಎಂದು ಗಂಭೀರ್ ಹೇಳಿದ್ದಾರೆ.

ಒಂದು ದಾಖಲೆ ಮುರಿಯಲು ಸಾಧ್ಯವಿಲ್ಲ

ಒಂದು ದಾಖಲೆ ಮುರಿಯಲು ಸಾಧ್ಯವಿಲ್ಲ

ಧೋನಿಯ ನಿವೃತ್ತಿಯ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, ಧೋನಿ ವೃತ್ತಿ ಜೀವನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಎಂಎಸ್‌ಡಿ ಮಾಡಿರುವ ಯಾವುದೇ ದಾಖಲೆಗಳನ್ನು ಮುರಿಯಹುದೇನೋ. ಆದರೆ ಆತ ಮಾಡಿದ ಒಂದು ದಾಖಲೆ ಮಾತ್ರ ಯಾವತ್ತಿಗೂ ಮುರಿಲಾಗದು. ಆ ದಾಖಲೆ ದಾಖಲೆಯಾಗೇ ಕೊನೆವರೆಗೂ ಉಳಿಯುತ್ತದೆ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.

ಯಾವುದು ಆ ಮುರಿಯದ ದಾಖಲೆ?

ಯಾವುದು ಆ ಮುರಿಯದ ದಾಖಲೆ?

ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟ್ ಜೊತೆ ಮಾತನಾಡಿದ ಗಂಭೀರ್, 'ಧೋನಿಯ ಮುರಿಯದ ದಾಖಲೆ ಬಗ್ಗೆ ಮಾತನಾಡುವುದಾದರೆ, ಧೋನಿಯ ಮೂರು ಐಸಿಸಿ ಟ್ರೋಫಿಗಳ ದಾಖಲೆ ಯಾವತ್ತಿಗೂ ಉಳಿಯಲಿದೆ. ಯಾವುದೇ ನಾಯಕ ಈ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ,' ಎಂದಿದ್ದಾರೆ.

ರೋಹಿತ್ ದಾಖಲೆ ಸರಿಗಟ್ಟಬಹುದು

ರೋಹಿತ್ ದಾಖಲೆ ಸರಿಗಟ್ಟಬಹುದು

ಮಾತು ಮುಂದುವರೆಸಿದ ಗಂಭೀರ್, 'ಅದು ಟಿ20 ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಥವಾ ಐಸಿಸಿ ವಿಶ್ವಕಪ್ ಏನೆ ಇರಲಿ. ಈ ದಾಖಲೆ ಮುರಿಯಲಂತೂ ಆಗಲ್ಲ ಅಂತ ನಾನು ಬೇಕಾದ್ರೆ ಬೆಟ್ ಕಟ್ತೀನಿ. ಶತಕಗಳ ದಾಖಲೆ ಮುರಿಯಬಹುದು. ನಾಳೆ ಯಾರೋಬ್ಬರೋ ಬಂದು ರೋಹಿತ್ ಶರ್ಮಾರ ದ್ವಿಶತಕಗಳ ದಾಖಲೆ ಮುರಿಯಬಹುದು. ಆದರೆ ಯಾವುದೇ ನಾಯಕನಿಂದಲೂ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ದಾಖಲೆ ಮುರಿಯಲು ಸಾಧ್ಯವೇ ಇಲ್ಲ,' ಎಂದರು.

ಧೋನಿ ಹೆಸರಲ್ಲಿ ವಿಶ್ವ ದಾಖಲೆ

ಧೋನಿ ಹೆಸರಲ್ಲಿ ವಿಶ್ವ ದಾಖಲೆ

ಗಂಭೀರ್ ಹೇಳಿಕೆಗೆ ಕಾರಣವಿದೆ. ಧೋನಿ ಹೆಸರಲ್ಲಿ ಇಂಥದ್ದೊಂದು ಅಪರೂಪದ ವಿಶ್ವದಾಖಲೆಯಿದೆ. ಕ್ರಿಕೆಟ್ ಇತಿಹಾಸದಲ್ಲೇ ಐಸಿಸಿ ಮೂರು ಪ್ರಮುಖ ಟ್ರೋಫಿಗಳನ್ನು, ಐಸಿಸಿ ಎಲ್ಲಾ ಪ್ರೋಫಿಗಳನ್ನು ಗೆದ್ದ ಮೊದಲ ಮತ್ತು ಏಕಮಾತ್ರ ನಾಯಕ ಧೋನಿ. ಧೋನಿ ನಾಯಕತ್ವದಲ್ಲಿ ಭಾರತ 2007ರ ಐಸಿಸಿ ವರ್ಲ್ಡ್ ಟಿ20, 2010 ಮತ್ತು 2016ರಲ್ಲಿ ಏಷ್ಯಾಕಪ್‌, 2011ರಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು.

Story first published: Monday, August 24, 2020, 21:55 [IST]
Other articles published on Aug 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X