330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್

ನವದೆಹಲಿ: 20,000 ಅಂತಾರಾಷ್ಟ್ರೀಯ ರನ್‌ಗಳು, ಅತ್ಯಧಿಕ ಶತಕ, ಅದ್ಭುತ ಪ್ರದರ್ಶನ ಹೀಗೆ ಎಲ್ಲದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ವಿಶ್ವದಲ್ಲಿನ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಮುಂಚೂಣಿಯಲ್ಲಿ ಬರುತ್ತಾರೆ. ಸುಮಾರು 12 ವರ್ಷಗಳ ವೃತ್ತಿ ಜೀವನದಲ್ಲಿ ರನ್ ಮೆಷೀನ್ ಕೊಹ್ಲಿ ಅನೇಕ ದಾಖಲೆಗಳನ್ನು ಮುರಿದ್ದಾರೆ, ಮುರಿಯುತ್ತಾ ಬರುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಬಿಟ್ಟರೆ, ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿರುವ ಆಲ್ ಟೈಮ್ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!

'ಕ್ರಿಕೆಟ್ ದೇವರು', ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಹಲವಾರು ದಾಖಲೆಗಳನ್ನು ಕೊಹ್ಲಿ ಮುರಿದಿದ್ದಾಗಿದೆ. ಇನ್ನಷ್ಟು ದಾಖಲೆಗಳು ಮುರಿವುದರಲ್ಲಿದ್ದಾರೆ. ಇಂಥ ಅಪಾಯಕಾರಿ ಬ್ಯಾಟ್ಸ್‌ಮನ್ ಕೊಹ್ಲಿ ಹಲವಾರು ಅದ್ಭುತ ಇನ್ನಿಂಗ್ಸ್‌ಗಳನ್ನು ಕೊಟ್ಟಿದ್ದಾರೆ.

ಅದೇ ಕಣ್ಣು!: ಕ್ರಿಕೆಟಿಗ ಶುಭ್‌ಮನ್ ಗಿಲ್, ಸಚಿನ್ ಪುತ್ರಿ ಸಾರಾ 'ಕಣ್ಣಿಟ್ಟ' ಗುಟ್ಟೇನು?

ವಿರಾಟ್ ಕೊಹ್ಲಿಯ ಮರೆಯಲಾರದ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ನೆನಪಿಸಿಕೊಂಡಿದ್ದಾರೆ. ಈ ರೋಚಕ ಪಂದ್ಯ ನಡೆದಿದ್ದು ಭಾರತದ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ.

ಕೊಹ್ಲಿಯ ಅದ್ಭುತ ಇನ್ನಿಂಗ್ಸ್‌

ಕೊಹ್ಲಿಯ ಅದ್ಭುತ ಇನ್ನಿಂಗ್ಸ್‌

ಏಕದಿನದಲ್ಲಿ ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್‌ ಯಾವುದು ಅಂತ ನಿಮ್ಮಲ್ಲೇನಾದರೂ ಕೇಳಿದರೆ ಯಾವುದನ್ನು ಆರಿಸುತ್ತೀರಿ? ಆಸ್ಟ್ರೇಲಿಯಾದ ವಿರುದ್ಧ 2013ರಲ್ಲಿ ಜೈಪುರದಲ್ಲಿ ಕೊಹ್ಲಿ ಬಾರಿಸಿದ 52 ಎಸೆತಗಳ ಶತಕ (ಏಕದಿನದಲ್ಲಿ ಭಾರತೀಯ ಬಾರಿಸಿದ ಅತೀ ವೇಗದ ಶತಕ), 2015ರಲ್ಲಿ ಪಾಕಿಸ್ತಾನ ವಿರುದ್ಧ ಬಾರಿಸಿದ್ದ 107 ರನ್, 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 160 ರನ್, 2015ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಬಾರಿಸಿದ್ದ 138 ರನ್. ಇವೆಲ್ಲ ಕೊಹ್ಲಿಯ ಬೆಸ್ಟ್ ಇನ್ನಿಂಗ್ಸ್‌ಗಳು.

'ವಿರಾಟ್' ರೂಪ ಸ್ಮರಿಸಿದ ಗಂಭೀರ್

'ವಿರಾಟ್' ರೂಪ ಸ್ಮರಿಸಿದ ಗಂಭೀರ್

ಕೊಹ್ಲಿಯ ಆಕರ್ಷಕ ಇನ್ನಿಂಗ್ಸ್‌ಗಳಲ್ಲಿ ಒಂದೆಂದರೆ ಪಾಕಿಸ್ತಾನ ವಿರುದ್ಧ ಬಾರಿಸಿದ 183 ಸ್ಫೋಟಕ ರನ್. 2012ರಲ್ಲಿ ಶೇರ್ ಇ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಏಷ್ಯಕಪ್‌ 5ನೇ ಪಂದ್ಯದಲ್ಲಿ ಕೊಹ್ಲಿ ವಿರಾಟ್ ರೂಪ ಪ್ರದರ್ಶಿಸಿದ್ದರು. ಕೊಹ್ಲಿಯ ಈ ಸ್ಫೋಟಕ ಇನ್ನಿಂಗ್ಸ್‌, ಹೋಬರ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಬಾರಿಸಿದ್ದ 133 ರನ್ ಬಳಿಕ 20 ದಿನಗಳಲ್ಲಿ ಬಂದಿತ್ತು. ಕೊಹ್ಲಿ ಕೊಟ್ಟ ಒಳ್ಳೆಯ ಇನ್ನಿಂಗ್ಸ್‌ಗಳಲ್ಲಿ ಪಾಕ್ ವಿರುದ್ಧದ ಆ ಇನ್ನಿಂಗ್ಸ್ ಮರೆಯಲಾರದ್ದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

330 ರನ್ ಗುರಿ, ಭಾರತ 0/1

330 ರನ್ ಗುರಿ, ಭಾರತ 0/1

ಸ್ಟಾರ್ ಸ್ಪೋರ್ಟ್‌ನಲ್ಲಿ ಮಾತನಾಡಿದ ಗಂಭೀರ್, 'ವಿರಾಟ್ ಕೊಹ್ಲಿ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಹಲವಾರು ನಂಬಲಾಗದ ಇನ್ನಿಂಗ್ಸ್‌ಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ನನ್ನ ಪ್ರಕಾರ, ಭಾರತ 330 ರನ್ ಗುರಿ ಬೆನ್ನಟ್ಟಲು ಹೊರಟು 0 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದಾಗ, ವಿರಾಟ್ ಕೊಟ್ಟ 183 ರನ್ ಇನ್ನಿಂಗ್ಸ್‌ ಬೆಸ್ಟ್ ಇನ್ನಿಂಗ್ಸ್. ಅದೂ ಪಾಕಿಸ್ತಾನ ವಿರುದ್ಧ. ಅದರಲ್ಲೂ ಕೊಹ್ಲಿಗೆ ಆಗ ಅಷ್ಟೊಂದು ಅನುಭವ ಇರಲಿಲ್ಲ. ಪ್ರಾಮಾಣಿಕವಾಗಿ ಹೇಳೋದಾದ್ರೆ ನನ್ನ ಪ್ರಕಾರ ಕೊಹ್ಲಿಯ ಶ್ರೇಷ್ಠ ಇನ್ನಿಂಗ್ಸ್‌ ಇದು,' ಎಂದು ವಿವರಿಸಿದರು.

ಆ ಪಂದ್ಯ ಏನಾಯಿತು?

ಆ ಪಂದ್ಯ ಏನಾಯಿತು?

ಆವತ್ತಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದ ಪಾಕಿಸ್ತಾನ, ಮೊಹಮ್ಮದ್ ಹಫೀಜ್ 105, ನಾಸೀರ್ ಜಮ್ಶದ್ 112 ರನ್‌ನೊಂದಿಗೆ 50 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 329 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಭಾರತ ರನ್ ಗಳಿಸುವ ಮುನ್ನವೇ ಗಂಭೀರ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಸಚಿನ್ 52 (48 ಎಸೆಯ), ವಿರಾಟ್ ಕೊಹ್ಲಿ 183 (148 ಎ), ರೋಹಿತ್ ಶರ್ಮಾ 68 (83 ಎ) ರನ್‌ನೊಂದಿಗೆ 47.5 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 330 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠರಾಗಿ ಮಿನುಗಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, August 1, 2020, 15:04 [IST]
Other articles published on Aug 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X