ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ

Gautam Gambhir reacted on Rohit Sharma’s Test future

ನವದೆಹಲಿ: ಲಿಮಿಟೆಡ್ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಅನ್ನೋದರಲ್ಲಿ ಅನುಮಾನವಿಲ್ಲ. ಮುಖ್ಯವಾಗಿ 2019ರ ವರ್ಷದಲ್ಲಿ ರೋಹಿತ್ ಏಕದಿನದಲ್ಲಿ 1490 ರನ್ ಸಾಧನೆಯೊಂದಿಗೆ ಏಕದಿನದಲ್ಲಿ ಅತ್ಯಧಿಕ ರನ್ ಗಳಿಸಿದ ವರ್ಷದ ಆಟಗಾರನಾಗಿ ಗಮನ ಸೆಳೆದಿದ್ದರು. ರೋಹಿತ್ ಗಳಿಸಿದ್ದ ಈ ಒಟ್ಟು ರನ್‌ನಲ್ಲಿ ವಿಶ್ವಕಪ್ ವೇಳೆಯ 5 ಶತಕಗಳೂ ಸೇರಿದ್ದವು.

ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!

ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹಾಗಲ್ಲ. ಟಿ20 ಮತ್ತು ಏಕದಿನದಲ್ಲಿ ಶರ್ಮಾ ತೋರಿದ ರನ್ ಸಾಧನೆ ಟೆಸ್ಟ್‌ನಲ್ಲಿ ತೋರಿಸಿಲ್ಲ. ಆದರೆ ಸದ್ಯ ಟೆಸ್ಟ್‌ನಲ್ಲೂ ಹಿಟ್‌ಮ್ಯಾನ್ ರೋಹಿತ್ ಆರಂಭಿಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಮುಂಬರಲಿರುವ ಆಸ್ಟ್ರೇಲಿಯಾ vs ಭಾರತ ಟೆಸ್ಟ್ ಸರಣಿ ಕುತೂಹಲ ಮೂಡಿಸಿದೆ.

2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ

ಆಸ್ಟ್ರೇಲಿಯಾ vs ಭಾರತ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್, ರೋಹಿತ್ ಟೆಸ್ಟ್‌ ಭವಿಷ್ಯದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ರೋಹಿತ್‌ನನ್ನು ಕಾದು ನೋಡೋಣ

ರೋಹಿತ್‌ನನ್ನು ಕಾದು ನೋಡೋಣ

ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಅವರ ಸಾಧನೆಯನ್ನು ರೋಹಿತ್ ಮಾಜಿ ಟೀಮ್‌ಮೇಟ್ ಗೌತಮ್ ಗಂಭೀರ್ ಕೊಂಡಾಡಿದ್ದಾರೆ. ವೀರೇಂದ್ರ ಸೆಹ್ವಾಗ್ ರೀತಿಯೇ ರೋಹಿತ್‌ ಕೂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಿನುಗುತ್ತಾರೆ ಎಂಬ (ಮಾಜಿ ಆಟಗಾರ) ಇರ್ಫಾನ್ ಫಠಾಣ್ ಹೇಳಿಕೆಗೆ ಗಂಭೀರ್, ಯಾವುದಕ್ಕೂ ರೋಹಿತ್ ಅವರ ಟೆಸ್ಟ್‌ ಆಟವನ್ನು ಕಾದು ನೋಡಬೇಕು ಎಂದು ಅಭಿಪ್ರಾಯಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ ವಿಭಿನ್ನ ಆಟ

ಟೆಸ್ಟ್ ಕ್ರಿಕೆಟ್‌ ವಿಭಿನ್ನ ಆಟ

ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟ್ ಶೋನಲ್ಲಿ ಮಾತನಾಡಿದ ಗಂಭೀರ್, 'ರೋಹಿತ್ ಒಬ್ಬರು ಅದ್ಭುತ ವೈಟ್‌ಬಾಲ್ ಕ್ರಿಕೆಟರ್. ವೀರೇಂದ್ರ ಸೆಹ್ವಾಗ್ ಸೇರಿಸಿ ನಮ್ಮಲ್ಲಿ ಎಲ್ಲರಿಗಿಂತ ಒಳ್ಳೆಯ ಬ್ಯಾಟಿಂಗ್ ರೆಕಾರ್ಡ್ ಶರ್ಮಾ ಹೊಂದಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ ಸಂಪೂರ್ಣ ವಿಭಿನ್ನ ಚೆಂಡಿನಾಟ,' ಎಂದಿದ್ದಾರೆ.

ಸೆಹ್ವಾಗ್ ತ್ರಿಶತಕ ಬಾರಿಸಿದ್ದರು

ಸೆಹ್ವಾಗ್ ತ್ರಿಶತಕ ಬಾರಿಸಿದ್ದರು

'ಟೆಸ್ಟ್‌ ಕ್ರಿಕೆಟ್‌ನಲ್ಲೂ ಶರ್ಮಾ ಉತ್ತಮ ಪ್ರದರ್ಶನ ತೋರುವುದನ್ನು ನಾನು ನೋಡಬಲ್ಲೆನೋ ಏನೋ. ವೀರೇಂದ್ರ ಸೆಹ್ವಾಗ್ ತ್ರಿಶತಕ ಬಾರಿಸಿದಂತೆ ರೋಹಿತ್ ಅವರ ಟೆಸ್ಟ್ ಕ್ರಿಕೆಟ್‌ ಎಲ್ಲಿಗೆ ಹೋಗುತ್ತದೆ ನೋಡೋಣ. ನನಗನ್ನಿಸುವಂತೆ, ರೋಹಿತ್ ಕೂಡ ಸೆಹ್ವಾಗ್ ಅವರಂತೆ ಟೆಸ್ಟ್‌ನಲ್ಲಿ ಯಶಸ್ವಿ ಕ್ರಿಕೆಟರ್ ಅನ್ನಿಸಿಕೊಳ್ಳಬಹುದು,' ಎಂದು ಗಂಭೀರ್ ನುಡಿದರು.

ಶರ್ಮಾ ಹೆಸರಲ್ಲಿ ಅಪರೂಪದ ದಾಖಲೆ

ಶರ್ಮಾ ಹೆಸರಲ್ಲಿ ಅಪರೂಪದ ದಾಖಲೆ

ಈ ವರ್ಷದ ರಾಜೀವ್ ಗಾಂಧಿ ಖೇಲ್ ರತ್ನಾ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿರುವ ಹಿಟ್‌ಮ್ಯಾನ್ ರೋಹಿತ್ ಹೆಸರಲ್ಲಿ ಅಪರೂಪದ ದಾಖಲೆಗಳಿವೆ. ಟಿ20ಐನಲ್ಲಿ 4 ಶತಕಗಳನ್ನು ಬಾರಿಸಿದ ಮೊದಲ ಕ್ರಿಕೆಟರ್ ಆಗಿ ಶರ್ಮಾ ಗುರುತಿಸಿಕೊಂಡಿದ್ದಾರೆ. ಏಕದಿನದಲ್ಲಿ 8 ಬಾರಿ 150+ ರನ್ ಬಾರಿಸಿದ ವಿಶ್ವ ದಾಖಲೆ ಜೊತೆಗೆ ಅತ್ಯಧಿಕ ರನ್ (264 ರನ್) ವಿಶ್ವ ದಾಖಲೆಯೂ ರೋಹಿತ್ ಹೆಸರಿನಲ್ಲಿದೆ.

Story first published: Tuesday, July 28, 2020, 12:50 [IST]
Other articles published on Jul 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X