ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಲ್‌ಟೈಮ್ ಬೆಸ್ಟ್ ಟೆಸ್ಟ್ ತಂಡವನ್ನು ಹೆಸರಿಸಿದ ಗಂಭೀರ್: ಕುಂಬ್ಳೆ ಕ್ಯಾಪ್ಟನ್

Gautam Gambhirs Picks His All-Time India Test Xi Anil Kumble Leads The Side

ವಿಶ್ವಾದ್ಯಂತ ಕೊರೊನಾ ಹಾವಳಿ ಮುಂದುವರಿದಿದೆ. ಈ ಸಂದರ್ಭದಲ್ಲಿ ಕ್ರಿಕೆಟಿಗರು ಸೇರಿದಂತೆ ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಜೊತೆಗೆ ಕೆಲ ಸಂದರ್ಶನಗಳ ಮೂಲ ಅಭಿಮಾಗಳಿಗೆ ಕ್ರಿಕೆಟ್ ಮತ್ತು ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಕುತೂಹಲಕರ ಸಂಗತಿಗಳನ್ನು ಬಿಚ್ಚಿಡುತ್ತಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕೂಡ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ಆಲ್‌ಟೈಮ್ ಫೇವರೀಟ್ ಟೆಸ್ಟ್ ತಂಡವನ್ನು ಹೆಸರಿಸಿದ್ದಾರೆ.

 ಕನ್ನಡಿಗ ಅನಿಲ್ ಕುಂಬ್ಳೆ ನಾಯಕತ್ವವನ್ನು ಮನಸಾರೆ ಹೊಗಳಿದ ಗಂಭೀರ್ ಕನ್ನಡಿಗ ಅನಿಲ್ ಕುಂಬ್ಳೆ ನಾಯಕತ್ವವನ್ನು ಮನಸಾರೆ ಹೊಗಳಿದ ಗಂಭೀರ್

ಗಂಭೀರ್ ಹೆಸರಿಸಿದ ತಂಡ ಹೇಗಿದೆ. ಯಾರೆಲ್ಲಾ ಈ ತಂಡದಲ್ಲಿ ಅವಕಾಶವನ್ನು ಪಡೆದಿದ್ದಾರೆ ಮುಂದೆ ಓದಿ..

ಆರಂಭಿಕರಾಗಿ ಸೆಹ್ವಾಗ್ ಜೊತೆ ಗವಾಸ್ಕರ್

ಆರಂಭಿಕರಾಗಿ ಸೆಹ್ವಾಗ್ ಜೊತೆ ಗವಾಸ್ಕರ್

ಗಂಭೀರ್ ಹೆಸರಿಸಿದ ಸಾರ್ವಕಾಲಿಕ ಟೆಸ್ಟ್ ತಂಡದಲ್ಲಿ ಆರಂಭಿಕರಾಗಿ ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಕಾಣಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯದ್ಭುತ ದಾಖಲೆಯನ್ನು ಹೊಂದಿರುವ ಸುನಿಲ್ ಗವಾಸ್ಕರ್ 10,000 ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಆರಂಭಿಕನಾಗಿ ವೀರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ಗೆ ಹೊಸ ಆಯಾಮವನ್ನು ನೀಡಿದ ಆಟಗಾರನಾಗಿದ್ದಾರೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಮೂರನೇ ಕ್ರಮಾಂಕದಲ್ಲಿ ಗೋಡೆ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ಹೆಸರನ್ನು ಆಯ್ಕೆ ಮಾಡಿದ್ದರೆ ಅದಾದ ಬಳಿಕ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್‌ ಇತಿಹಾಸದಲ್ಲಿ ಈ ಇಬ್ಬರು ಆಟಗಾರರೂ ಸಾಕಷ್ಟು ದಾಖಲೆಗಳನ್ನು ಬರೆದುಕೊಂಡಿದ್ದಾರೆ. ಐದು ಮತ್ತು ಆರನೇ ಕ್ರಮಾಂಕದಲ್ಲಿ ಪ್ರಸಕ್ತ ಬಲಿಷ್ಠ ಆಟಗಾರ ವಿರಾಟ್ ಕೊಹ್ಲಿ ಹೆಸರನ್ನು ಸೂಚಿಸಿದ್ದಾರೆ ಅದಾದ ನಂತರದ ಕ್ರಮಾಂಕದಲ್ಲಿ ಕಪಿಲ್ ದೇವ್ ಅವರನ್ನು ಗಂಭೀರ್ ಹೆಸರಿಸಿದ್ದಾರೆ.

ಕೊಹ್ಲಿ ಜೊತೆಗ ಧೋನಿಗೂ ಅವಕಾಶ

ಕೊಹ್ಲಿ ಜೊತೆಗ ಧೋನಿಗೂ ಅವಕಾಶ

ಅಚ್ಚರಿಯೇನೆಂದರೆ ಪ್ರಸಕ್ತ ಕಾಲದ ಶ್ರೇಷ್ಠ ಆಟಗಾರನೆನಿಸಿರುವ ವಿರಾಟ್ ಕೊಹ್ಲಿ ಜೊತೆಗೆ ಮಹೇಂದ್ರ ಸಿಂಗ್ ಧೋನಿಗೂ ಕೂಡ ಶ್ರೇಷ್ಠ ತಂಡದಲ್ಲಿ ಸ್ಥಾನವನ್ನು ನೀಡಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ಗಂಭೀರ್ ಧೋನಿಗೆ ನೀಡಿದ್ದಾರೆ.

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗದಲ್ಲಿ ಇಬ್ಬರು ಸ್ಪಿನ್ನರ್ ಹಾಗೂ ಇಬ್ಬರು ವೇಗಿಗಳನ್ನು ಹೆಸರಿಸಿದ್ದಾರೆ. ಸ್ಪಿನ್ ವಿಭಾಗದಲ್ಲಿ ಭಾರತ ಕಂಡ ಶ್ರೇಷ್ಠ ಸ್ಪಿನ್ ಜೋಡಿಗಳಾದ ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಇದ್ದಾರೆ. ಅನಿಲ್ ಕುಂಬ್ಳೆಯೇ ಈ ತಂಡದ ನಾಯಕನಾಗಿ ಗಂಭೀರ್ ಹೆಸರಿಸಿದ್ದಾರೆ. ವೇಗದ ಬೌಲಿಂಗ್‌ನಲ್ಲಿಕನ್ನಡಿಗ ಜಾವಗಲ್ ಶ್ರೀನಾಥ್ ಹಾಗೂ ಜಹೀರ್ ಖಾನ್ ಈ ಶ್ರೇಷ್ಠ ತಂಡದಲ್ಲಿದ್ದಾರೆ.

ಗಂಭೀರ್ ಹೆಸರಿಸಿದ ತಂಡ ಹೀಗಿದೆ

ಗಂಭೀರ್ ಹೆಸರಿಸಿದ ತಂಡ ಹೀಗಿದೆ

ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕಪಿಲ್ ದೇವ್, ಎಂ.ಎಸ್.ಧೋನಿ (ವಿಕೆಟ್ ಕೀಪರ್), ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ (ನಾಯಕ), ಜಹೀರ್ ಖಾನ್, ಜಾವಗಲ್ ಶ್ರೀನಾಥ್

Story first published: Sunday, May 3, 2020, 17:03 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X