ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೀವೇಕೆ ಪಾಕಿಸ್ತಾನ ವಿರೋಧಿ? ಎಂಬ ಪ್ರಶ್ನೆಗೆ ಗೌತಮ್ ಗಂಭೀರ್ ಉತ್ತರ ಇದು

 Gautam Gambhirs Response To A Twitter User Question Why Are You So Anti Pakistan

ಬಿಜೆಪಿಯ ಸಂಸದರೂ ಆಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ತಮ್ಮ ರಾಜಕೀಯ ಹೇಳಿಕೆಗಳಲ್ಲಿ ಪಾಕಿಸ್ತಾನದ ವಿರುದ್ಧ ಆಗಾಗ ಟೀಕೆಗಳನ್ನು ಮಾಡುತ್ತಿರುತ್ತಾರೆ. ಅದರ ಕ್ರೀಡೆಯಲ್ಲಿಯೂ ಹೊರತಲ್ಲ. ಅದರಲ್ಲಿಯೂ ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಮತ್ತು ಗೌತಮ್ ಗಂಭೀರ್ ನಡುವೆ ಅನೇಕ ತಿಕ್ಕಾಟಗಳು ನಡೆದಿವೆ. ಅವಕಾಶ ಸಿಕ್ಕಾಗಲೆಲ್ಲಾ ಪಾಕಿಸ್ತಾನದ ಆಟಗಾರನ ಕಾಲೆಳೆಯುವುದರಲ್ಲಿ ಗಂಭೀರ್ ಹಿಂದೆ ಬೀಳುವುದಿಲ್ಲ.

ಸಂಸದರಾಗಿ ಒಂದು ವರ್ಷದ ಬಳಿಕ ಟ್ವಿಟ್ಟರ್‌ನಲ್ಲಿ ತಮಗೆ ಯಾವುದಾದರೂ ಪ್ರಶ್ನೆ ಕೇಳುವ ಅವಕಾಶವನ್ನು ಗಂಭೀರ್ ನೀಡಿದ್ದರು. ಆಸ್ಕ್ ಮಿ ಎನಿಥಿಂಗ್‌ನಲ್ಲಿ ಅವರಿಗೆ ಕ್ರಿಕೆಟ್, ರಾಜಕಾರಣ, ದೇಶಪ್ರೇಮ ಸೇರಿದಂತೆ ಅನೇಕ ಬಗೆಯ ಪ್ರಶ್ನೆಗಳು ಎದುರಾಗಿದ್ದವು.

ಯುಜವೇಂದ್ರ ಚಹಾಲ್‌ ಪ್ರದರ್ಶನಕ್ಕೆ 'ಭೇಷ್' ಎಂದ ಗೌತಮ್ ಗಂಭೀರ್ಯುಜವೇಂದ್ರ ಚಹಾಲ್‌ ಪ್ರದರ್ಶನಕ್ಕೆ 'ಭೇಷ್' ಎಂದ ಗೌತಮ್ ಗಂಭೀರ್

ಇದರಲ್ಲಿ ಜಮಿಮ್ ಸಿದ್ದಿಕಿ ಎಂಬುವವರು 'ನೀವೇಕೆ ಇಷ್ಟು ಪಾಕಿಸ್ತಾನ ವಿರೋಧಿ' ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಗಂಭೀರ್ ಸೂಕ್ಷ್ಮತೆ ಹಾಗೂ ಜಾಣ್ಮೆಯ ಉತ್ತರ ನೀಡಿದ್ದಾರೆ.

'ನಾನು ಪಾಕಿಸ್ತಾನ ವಿರೋಧಿಯಲ್ಲ. ಯಾವ ಭಾರತೀಯನೂ ಪಾಕಿಸ್ತಾನ ವಿರೋಧಿ ಎಂದು ನನಗೆ ಅನಿಸುವುದಿಲ್ಲ. ಆದರೆ ನಮ್ಮ ಸೈನಿಕರ ಜೀವ ಹಾಗೂ ಬೇರೆ ಯಾವುದೇ ವಿಚಾರ ಬಂದಾಗ ನಾವೆಲ್ಲರೂ ಒಂದೇ ಕಡೆ ನಿಲ್ಲುತ್ತೇವೆ' ಎಂದು ಹೇಳಿದ್ದಾರೆ.

'ಸಮಯ ಉರುಳುತ್ತಿದೆ': ರಾಬಿನ್ ಉತ್ತಪ್ಪಗೆ ಗೌತಮ್ ಗಂಭೀರ್ ಎಚ್ಚರಿಕೆ'ಸಮಯ ಉರುಳುತ್ತಿದೆ': ರಾಬಿನ್ ಉತ್ತಪ್ಪಗೆ ಗೌತಮ್ ಗಂಭೀರ್ ಎಚ್ಚರಿಕೆ

ಹಾಗೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದ್ವೇಷಿಸುತ್ತೀರಾ ಎಂಬ ಪ್ರಶ್ನೆಗೆ, 'ಇಲ್ಲ, ನಾನು ಎಂದಿಗೂ ಹಾಗೆ ಮಾಡಿಲ್ಲ. ಅವರು ಈ ಸ್ಥಾನದಲ್ಲಿರುವುದು ಜನರ ಕಾರಣದಿಂದ. ಆದರೆ ಅವರೊಬ್ಬ ಮುಖ್ಯಮಂತ್ರಿ. ದೆಹಲಿಯ ಪ್ರಜೆ ಮತ್ತು ಸಂಸದನಾಗಿ ಅವರನ್ನು ಪ್ರಶ್ನಿಸುವುದು ನನ್ನ ಜವಾಬ್ದಾರಿ' ಎಂದಿದ್ದಾರೆ.

Story first published: Friday, October 9, 2020, 10:15 [IST]
Other articles published on Oct 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X