ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೌರವ್ ಗಂಗೂಲಿ ಜೊತೆಗೆ ಕೊಹ್ಲಿಗೂ ಜೈ ಎಂದ ಗೌತಮ್ ಗಂಭೀರ್ !

No doubt India started winning more away from home under Sourav Ganguly.
Gautam Gambhir sides with Virat Kohli after Sunil Gavaskar criticism

ಅವಕಾಶ ಸಿಕ್ಕಲ್ಲೆಲ್ಲಾ ಗೌತಮ್ ಗಂಭೀರ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಗಮನಿಸಿದ್ದೇವೆ. ಗಂಭೀರ್ ಅವರ ಯಾವ ಮಾತುಗಳಿಗೂ ನಾಯಕ ವಿರಾಟ್ ಕೊಹ್ಲಿ ತಲೆಕೆಡಿಸಿಕೊಳ್ಳದೆ ತಮ್ಮ ಆಟದತ್ತ ಗಮನವಹಿಸಿದ್ದಾರೆ. ಆದರೆ ಈಗ ಗೌತಮ್ ಒಂದು ವಿಚಾರದಲ್ಲಿ ಕೊಹ್ಲಿ ಪರವಹಿಸಿ ಮಾತನಾಡಿದ್ದಾರೆ.

ಕೊಹ್ಲಿ ಆಡಿದ್ದ ಮಾತಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಿರುಗೇಟು ನೀಡಿದ್ದರು. ಆದರೆ ಗೌತಮ್ ಗಂಭೀರ್ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಪ್ರತಿಕ್ರಿಯೆಗೆ ಕೊಹ್ಲಿ ಪರವಾಗಿ ಸ್ಪಷ್ಟನೆಯನ್ನು ನೀಡಿ ಅಚ್ಚರಿಯನ್ನುಂಟು ಮಾಡಿದ್ದಾರೆ.

ಇತ್ತೀಚೆಗೆ ಐತಿಹಾಸಿಕ ಟೆಸ್ಟ್ ಪಂದ್ಯದ ಮುಕ್ತಾಯದ ಸಂದರ್ಭದಲ್ಲಿ ಮಾತನಾಡಿದ್ದ ಟೀಮ್ ಇಂಡಿಯಾ ನಾಯಕ ಕೊಹ್ಲಿ ಭಾರತ ವಿದೇಶಗಳಲ್ಲಿ ಟೆಸ್ಟ್ ಗೆಲ್ಲಲು ಆರಂಭಿಸಿದ್ದು ಗಂಗೂಲಿ ನಾಯಕರಾದ ಬಳಿಕ. ಈ ಗೆಲುವುಗಳೆಲ್ಲಾ ಅವರಿಂದಲೇ ಆರಂಭವಾಗಿದ್ದು ಎಂಬ ಮಾತುಗಳನ್ನು ಆಡಿದ್ದರು. ಆದರೆ ಇದು ಮಾಜಿ ನಾಯಕ, ಸುನಿಲ್ ಗವಾಸ್ಕರ್ ಅವರ ಸಿಟ್ಟಿಗೆ ಕಾರಣವಾಗಿತ್ತು.

ಕೊಹ್ಲಿ ಹುಟ್ಟುವ ಮುನ್ನವೇ ಭಾರತ ಟೆಸ್ಟ್‌ನಲ್ಲಿ ಗೆಲುವು ಕಂಡಿತ್ತು: ಕೊಹ್ಲಿಗೆ ಗವಾಸ್ಕರ್ ತಿರುಗೇಟುಕೊಹ್ಲಿ ಹುಟ್ಟುವ ಮುನ್ನವೇ ಭಾರತ ಟೆಸ್ಟ್‌ನಲ್ಲಿ ಗೆಲುವು ಕಂಡಿತ್ತು: ಕೊಹ್ಲಿಗೆ ಗವಾಸ್ಕರ್ ತಿರುಗೇಟು

ಸುನಿಲ್ ಗವಾಸ್ಕರ್ ಈ ಮಾತಿಗೆ ಸ್ಟಾರ್‌ ಸ್ಪೋರ್ಟ್‌ ವಾಹಿನಿಯಲ್ಲಿ ಮಾತನಾಡುತ್ತಾ, ಟೀಮ್ ಇಂಡಿಯಾ 70-80 ರ ದಶಕದಲ್ಲೇ ಗೆಲುವನ್ನು ಕಂಡಿತ್ತು. ಮಾತ್ರವಲ್ಲ ಡ್ರಾವನ್ನೂ ಮಾಡಿಕೊಂಡಿತ್ತು. ಆಗ ವಿರಾಟ್ ಕೊಹ್ಲಿ ಹುಟ್ಟಿರಲೇ ಇಲ್ಲಾ ಎಂದಿದ್ದರು.

ಈ ವಿಚಾರವಾಗಿ ಗೌತಮ್ ಗಂಭೀರ್, ಭಾರತ ಕಪಿಲ್ ದೇವ್ ಹಾಗೂ ಸುನಿಲ್ ಗವಾಸ್ಕರ್ ಅವರ ನೇತೃತ್ವದಲ್ಲಿ ಭಾರತದ ಪಿಚ್‌ನಲ್ಲಿ ಗೆಲುವನ್ನು ಕಂಡಿತ್ತು. ಆದರೆ ಟೀಮ್ ಇಂಡಿಯಾ ವಿದೇಶಿ ಪಿಚ್‌ಗಳಲ್ಲಿ ಗೆಲುವನ್ನು ಕಾಣಲು ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದು ಸೌರವ್ ಗಂಗೂಲಿ. ಆ ಬಳಿಕವೇ ಭಾರತ ವಿದೇಶಿ ನೆಲದಲ್ಲಿ ಸರಣಿಗೆಲ್ಲಲು ಆರಂಭಿಸಿದ್ದು ಎಂದು ವಿರಾಟ್ ಕೊಹ್ಲಿ ಮಾತಿಗೆ ಧ್ವನಿಗೂಡಿಸಿದ್ದಾರೆ.

Story first published: Thursday, November 28, 2019, 11:57 [IST]
Other articles published on Nov 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X