ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KKR ನಾಯಕತ್ವ ತ್ಯಜಿಸಿದ ದಿನೇಶ್ ಕಾರ್ತಿಕ್ ವಿರುದ್ದ ಕಿಡಿ ಕಾರಿದ ಗಂಭೀರ್

Gautam Gambir Slams Dinesh Karthik For Leaving KKR Captaincy

ಐಪಿಎಲ್ 13ನೇ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪ್ಲೇ ಆಫ್ ತಲುಪಲು ತುಂಬಾನೆ ಕಷ್ಟ ಪಡುತ್ತಿದೆ. ಕಳೆದ ಪಂದ್ಯದಲ್ಲಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳಿಂದ ಸೋತ ನಂತರ, ಅವರು ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳು ತುಂಬಾ ಕಡಿಮೆಯಿದೆ.

ಪಂದ್ಯಾವಳಿಯುದ್ದಕ್ಕೂ, ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಬದಲಾವಣೆ ಮಾಡಿದ್ದು ಕಂಡುಬಂತು. ಇದರ ಜೊತೆಗೆ ಕೆಕೆಆರ್ ನಾಯಕತ್ವವನ್ನು ದಿನೇಶ್ ಕಾರ್ತಿಕ್ ಅವರು ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್‌‌ಗೆ ಹಸ್ತಾಂತರಿಸಿದ್ದರು. ಈ ಕುರಿತು ಗಂಭೀರ್ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2020ರ ಮಧ್ಯದಲ್ಲೇ ದಿನೇಶ್ ಕಾರ್ತಿಕ್ ನಾಯಕತ್ವ ತ್ಯಜಿಸಿದ್ದು ಏಕೆ? ಕಾರಣ ಏನು?ಐಪಿಎಲ್ 2020ರ ಮಧ್ಯದಲ್ಲೇ ದಿನೇಶ್ ಕಾರ್ತಿಕ್ ನಾಯಕತ್ವ ತ್ಯಜಿಸಿದ್ದು ಏಕೆ? ಕಾರಣ ಏನು?

ಕ್ರಿಕೆಟ್ ಡಾಟ್ ಕಾಮ್ ಜೊತೆ ಮಾತನಾಡಿದ ಗಂಭೀರ್, "ಇದು ಕೇವಲ ಮನಸ್ಥಿತಿಯನ್ನು ತೋರಿಸುತ್ತದೆ. ನೀವು ಬ್ಯಾಟಿಂಗ್ ಬಗ್ಗೆ ಗಮನಹರಿಸಲು ಬಯಸಿದ್ದರಿಂದ ನೀವು ನಾಯಕತ್ವವನ್ನು ತೊರೆದಿದ್ದೀರಿ, ಆದರೆ ಅದು ಕೂಡ ನಿಮ್ಮ ಪರ ಕೆಲಸ ಮಾಡಿಲ್ಲ, ಆದ್ದರಿಂದ ನೀವು ಜವಾಬ್ದಾರಿಗಳನ್ನು ವಹಿಸಿಕೊಂಡಾಗ ಕೆಲವೊಮ್ಮೆ ಒಳ್ಳೆಯದು. 2014 ರಲ್ಲಿ ನಾನು ಕೆಟ್ಟ ಹಂತದಲ್ಲಿದ್ದಾಗ ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆದೆ. ಆಗ ನಾಯಕತ್ವದಿಂದಾಗಿ ನಾನು ಮತ್ತೆ ಫಾರ್ಮ್ಗೆ ಬರಲು ಸಹಾಯವಾಯಿತು "ಎಂದು ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದರು.

"ನಾನು ಬ್ಯಾಟಿಂಗ್ ಮಾಡದಿದ್ದಾಗ, ನನ್ನ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಮೂಲಕ ತಂಡವನ್ನು ಹೇಗೆ ಗೆಲ್ಲುವುದು ಎಂದು ನಾನು ಯೋಚಿಸುತ್ತಿದ್ದೆ. ಆದರೆ ನೀವು ನಾಯಕತ್ವ ವಹಿಸದಿದ್ದಾಗ, ನಿಮ್ಮ ಬ್ಯಾಟಿಂಗ್ ಬಗ್ಗೆ ಇನ್ನಷ್ಟು ಯೋಚಿಸುತ್ತಿದ್ದೀರಿ, "ಎಂದು ಅವರು ಹೇಳಿದರು.

ಕೆಕೆಆರ್ ಇನ್ನೂ ಪಾಯಿಂಟ್‌ಗಳಲ್ಲಿ ಅಗ್ರ 4 ಸ್ಥಾನ ಗಳಿಸುವ ಅವಕಾಶವನ್ನು ಹೊಂದಿದ್ದರೂ, ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸೇರಿದಂತೆ ಇತರ ಫ್ರಾಂಚೈಸಿಗಳು ತಮ್ಮ ಮುಂಬರುವ ಎರಡು ಪಂದ್ಯಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲೆ ಇದು ಹೆಚ್ಚು ಅವಲಂಬಿತವಾಗಿರುತ್ತದೆ. ಜೊತೆಗೆ ನವೆಂಬರ್ 1 ರ ಭಾನುವಾರದಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮುಂಬರುವ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾಗಿದೆ.

Story first published: Saturday, October 31, 2020, 9:41 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X