ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಲ್ಕತ್ತಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ದೂರಿದ ಗೌತಮ್ ಗಂಭೀರ್

Gautam Gambhir slams KKR batsmen for their poor performance against CSK

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಬೃಹತ್ ಮೊತ್ತವನ್ನು ಬೆನ್ನಟ್ಟಿ ಸೋಲು ಕಂಡಿತು. ಆದರೆ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿ ತಂಡಕ್ಕೆ ಹಿನ್ನಡೆಯುಂಟು ಮಾಡಿದರು. ಈ ಪ್ರದರ್ಶನಕ್ಕೆ ಕೆಕೆಆರ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಕಿಡಿ ಕಾರಿದ್ದಾರೆ.

"ಕೊಲ್ಕತ್ತಾ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ದೂಷಣೆಗೆ ಒಳಗಾಗಲೇಬೇಕಿದೆ. ಅವರ ಕಾರಣದಿಣದಾಗಿ ಕೆಳ ಕ್ರಮಾಂಕದ ಆಟಗಾರರಿಗೆ ಜೊತೆಗಾರರು ಇಲ್ಲದಂತಾಯಿತು. 6,7 ಹಾಗೂ 8ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇಷ್ಟು ಸನಿಹಕ್ಕೆ ತೆಗೆದುಕೊಂಡು ಹೋಗಿದ್ದಾರೆಂದರೆ ನಿಮಗೆ ಸಮರ್ಥನೆ ಮಾಡಲು ಅವಕಾಶಗಳು ಇಲ್ಲ" ಎಂದಿದ್ದಾರೆ ಗೌತಮ್ ಗಂಭೀರ್.

ಐಪಿಎಲ್ 2021: ಬೆಂಗಳೂರು vs ರಾಜಸ್ಥಾನ್ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?ಐಪಿಎಲ್ 2021: ಬೆಂಗಳೂರು vs ರಾಜಸ್ಥಾನ್ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?

ವಾಂಖೆಡೆ, ಚಿನ್ನಸ್ವಾಮಿಯಂತಾ ಕ್ರೀಡಾಂಗಣಗಳಲ್ಲಿ 220 ರನ್‌ಗಳ ಗುರಿಯನ್ನು ಪಡದರೆ ನೀವು ಆತಂಕಪಡುವಂತದ್ದು ಏನೂ ಇಲ್ಲ. ರನ್ ಬೆನ್ನಟ್ಟುವಾಗ ಅದನ್ನು ಗಳಿಸುವ ಅವಕಾಶಗಳು ಇರುತ್ತದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.

ಕೆಳ ಕ್ರಮಾಂಕದ ಆಟಗಾರರು ಪಂದ್ಯವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಇಲ್ಲವಾದರೆ ಅವರು 70-80 ರನ್‌ಗಳಿಗೆ ಆಲೌಟ್ ಆಗಬಹುದಿತ್ತು. ರಸ್ಸೆಲ್ ಹಾಗೂ ದಿನೇಶ್ ಕಾರ್ತಿಕ್ ಅವರಣತಾ ಆಟಗಾರರು ಚೆಂಡನ್ನು ನೋಡಿ ಬಾರಿಸಿದ ಕಾರಣ ಅವರು ದೊಡ್ಡ ಮೊತ್ತವನ್ನು ಗಳಿಸುವತ್ತ ಮುನ್ನುಗ್ಗಿದರು. ಹಾಗಾಗಿ ನೀವು ರಸೆಲ್, ದಿನೇಶ್ ಕಾರ್ತಿಕ್ ಪ್ಯಾಟ್‌ಕಮ್ಮಿನ್ಸ್ ಅವರಂತಾ ಬ್ಯಾಟ್ಸ್‌ಮನ್‌ಗಳಿಗೆ ಸೂಕ್ತ ವೇದಿಕೆಯನ್ನು ನೀಡಬೇಕಾಗುತ್ತದೆ" ಎಂದಿದ್ದಾರೆ ಗೌತಮ್ ಗಂಭೀರ್.

Story first published: Thursday, April 22, 2021, 17:51 [IST]
Other articles published on Apr 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X