ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್ ಗೇಲ್ ಫಾರ್ಮ್‌ ಕಂಡುಕೊಳ್ಳಲು ಗಂಭೀರ್ ಮಹತ್ವದ ಸಲಹೆ

Gautam Gambhir suggest Chris Gayle to open innings for Punjab Kings in IPL 2021

ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಉತ್ತಮ ಆರಂಭವನ್ನು ಪಡೆಯಿತಾದರೂ ನಂತರ ಮಂಕಾಗಿದೆ. ಆಡಿದ ನಾಲ್ಕು ಪಂದ್ಯಗಳ ಪೈಕಿ ಮೊದಲ ಪಂದ್ಯವನ್ನು ಹೊರತುಪಡಿಸಿ ಉಳಿದ ಮೂರು ಪಂದ್ಯಗಳಲ್ಲೂ ಸೋಲು ಕಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಹೊಂದಾಣಿಕೆಯ ಕೊರತೆ ಎದ್ದು ಕಾಣಿಸುತ್ತಿದೆ. ಈ ಮಧ್ಯೆ ಫಾರ್ಮ್‌ಕೊರತೆ ಅನುಭವಿಸುತ್ತಿರುವ ಕ್ರಿಸ್ ಗೇಲ್ ಮತ್ತೆ ಫಾರ್ಮ್‌ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.

ಫಾರ್ಮ್‌ನಲ್ಲಿ ಇಲ್ಲ ಎಂಬ ಕಾರಣಕ್ಕೆ ಕ್ರಿಸ್ ಗೇಲ್ ಅವರನ್ನು ತಂಡದಿಂದ ಹೊರಗಿಡುವುದು ಸೂಕ್ತವಾದ ನಿರ್ಧಾರವಲ್ಲ ಎಂದು ಗಂಭೀರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆವರನ್ನು ಆರಂಭಿಕನಾಗಿ ಕಣಕ್ಕಿಳಿಸಬೇಕು. ಆಗ ಅವರು ಖಂಡಿತಾ ತಮ್ಮ ಫಾರ್ಮ್‌ಗೆ ಮರಳಿ ಶತಕವನ್ನು ಸಿಡಿಸಬಲ್ಲರು ಎಂದು ಗಂಭೀರ್ ಹೇಳಿದ್ದಾರೆ.

ಪಡಿಕ್ಕಲ್ ಅಬ್ಬರದ ಶತಕಕ್ಕೆ 10 ವರ್ಷದ ಈ ಹಳೆಯ ದಾಖಲೆ ಧ್ವಂಸಪಡಿಕ್ಕಲ್ ಅಬ್ಬರದ ಶತಕಕ್ಕೆ 10 ವರ್ಷದ ಈ ಹಳೆಯ ದಾಖಲೆ ಧ್ವಂಸ

ಕ್ರಿಸ್ ಗೇಲ್ ಅವರನ್ನು ತಂಡದಿಂದ ಹೊರಗಿಟ್ಟು ಆ ಸ್ಥಾನಕ್ಕೆ ವಿಶ್ವ ಕ್ರಿಕೆಟ್‌ನಲ್ಲೊ ನಂಬರ್ 1 ಬ್ಯಾಟ್ಸ್‌ಮನ್ ಎನಿಸಿರುವ ಡೇವಿಡ್ ಮಲನ್ ಅವರನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸಬೇಕೆಂಬ ಚರ್ಚೆಗಳು ನಡೆಯುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಗಂಭೀರ್, "ಖಂಡಿತಾ ಇದು ಸೂಕ್ತವಲ್ಲ. ಕ್ರಿಸ್ ಗೇಲ್ ಅವರನ್ನು ಡೇವಿಡ್ ಮಲನ್ ಅವರೊಂದಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಖಂಡಿಯವಾಗಿಯೂ ಮಲನ್ ಟಿ20 ಕ್ರಿಕೆಟ್‌ನ ನಂಬರ್ 1 ಆಟಗಾರ. ಆದರೆ ನೀವು ಆಟದ ಪರಿಸ್ಥಿತಿಗಳನ್ನು ಕೂಡ ಗಮನಿಸಬೇಕು" ಎಂದಿದ್ದಾರೆ.

ಕ್ರಿಸ್ ಗೇಲ್ ಅವರಿಗೆ ನೀಡಿರುವ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಗಂಭೀರ್ ಅಸಮಾಧಾನವನ್ನು ವ್ಯಕ್ತಪಡಿಸಿದರು. ವೆಸ್ಟ್ ಇಂಡೀಸ್‌ನ ಸ್ಪೋಟಕ ಆಟಗಾರ ಮೂರನೇ ಕ್ರಮಾಂಕಕ್ಕಿಂತ ಆರಂಭಿಕ ಸ್ಥಾನಕ್ಕೆ ಹೆಚ್ಚು ಸೂಕ್ತವಾಗಿವ ಆಟಗಾರ. ಆತ ಕ್ರೀಸ್‌ನಲ್ಲಿ ಹೆಚ್ಚು ಕಾಲ ಇದ್ದಷ್ಟು ತಂಡ ದೊಡ್ಡ ಮೊತ್ತವನ್ನು ಗಳಿಸಬಲ್ಲದು ಎಂದು ಗಂಭೀರ್ ಹೇಳಿಕೆಯನ್ನು ನೀಡಿದ್ದಾರೆ.

MI vs PBKS Preview : ಪಂಜಾಬ್ vs ಮುಂಬೈ, ಸಂಭಾವ್ಯ ತಂಡ, ಡ್ರೀಮ್11 ಟಿಪ್ಸ್MI vs PBKS Preview : ಪಂಜಾಬ್ vs ಮುಂಬೈ, ಸಂಭಾವ್ಯ ತಂಡ, ಡ್ರೀಮ್11 ಟಿಪ್ಸ್

Punjab ವಿರುದ್ಧ ಸೋತರು ಭರ್ಜರಿ ದಾಖಲೆ ಬರೆದ ರೋಹಿತ್ ಶರ್ಮಾ | Oneindia Kannada

2020ರ ಐಪಿಎಲ್ ಆವೃತ್ತಿಯಿಂದ ಕ್ರಿಸ್ ಗೇಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಜೋಡಿ ಆರಂಭದಿಮದಲೇ ಉತ್ತಮ ಜೊತೆಯಾಟವನ್ನು ನಿಡುತ್ತಾ ಸಾಗಿದ್ದರು. ಹೀಗಾಗಿ ಈ ಜೋಡಿಯನ್ನು ಮುಂದುವರಿಸಲು ಬಯಸಿದ ಕಾರಣ ಕ್ರಿಸ್ ಗೇಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದಾರೆ. ಇದು ಈ ಆವೃತ್ತಿಯಲ್ಲೂ ಮುಂದುವರಿದಿದೆ

Story first published: Friday, April 23, 2021, 18:17 [IST]
Other articles published on Apr 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X