ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಮ್ಮ ಕೋವಿಡ್ ಪರೀಕ್ಷೆಯ ವರದಿ ಹಂಚಿಕೊಂಡ ಗೌತಮ್ ಗಂಭೀರ್

Gautam Gambhir tests negative after Covid-19 case detected at home

ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಲಿ ಸಂಸದ ಗೌತಮ್ ಗಂಭೀರ್ ಸ್ವಯಂ ಪ್ತತ್ಯೇಕವಾಗುಳಿದಿದ್ದರು. ತಮ್ಮ ಮನೆಯಲ್ಲಿನ ಸದಸ್ಯರೊಬ್ಬರು ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಹೀಗಾಗಿ ತಮಗೂ ವೈರಸ್ ಹಬ್ಬರುವ ಸಾಧ್ಯತೆಯಿರುವ ಕಾರಣ ಗಂಭೀರ್ ಮುಂಜಾಗ್ರಥೆಯನ್ನು ವಹಿಸಿಕೊಂಡಿದ್ದರು.

ಆದರೆ ಈಗ ಗಂಭೀರ್ ಈ ಆತಂಕದಿಂದ ಹೊರಬಂದಿದ್ದಾರೆ. ಸೆಲ್ಫ್ ಐಸೋಲೇಶನ್‌ನಲ್ಲಿದ್ದ ಗಂಭೀರ್ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಅದರ ವರದಿ ಬಂದಿದ್ದು ನೆಗೆಟಿವ್ ವರದಿ ಬಂದಿದೆ. ಹೀಗಾಗಿ ವೈರಸ್‌ನ ಆತಂಕದಿಂದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಪಾರಾಗಿದ್ದಾರೆ.

ಮನೆಯಲ್ಲಿ ಕೊರೊನಾ ಪ್ರಕರಣ: ಐಸೊಲೇಶನ್‌ನಲ್ಲಿ ಗೌತಮ್ ಗಂಭೀರ್ಮನೆಯಲ್ಲಿ ಕೊರೊನಾ ಪ್ರಕರಣ: ಐಸೊಲೇಶನ್‌ನಲ್ಲಿ ಗೌತಮ್ ಗಂಭೀರ್

ಈ ಬಗ್ಗೆ ಗೌತಮ್ ಗಂಭೀರ್ ಟ್ವಿಟ್ಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಇದರ ಜೊತೆಗೆ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊರೊನಾ ವೈರಸ್‌ನ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕನುಗುಣವಾಗಿ ನಡೆದುಕೊಳ್ಳಬೇಕೆಂದು ಕೇಳಿಕೊಂಡಿದ್ದಾರೆ.

"ನನ್ನ ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಪ್ರತಿಬ್ಬರೂ ಹಾರೈಕೆಗೂ ಧನ್ಯವಾದಗಳು. ಮತ್ತೊಮ್ಮೆ ಎಲ್ಲರಲ್ಲಿಯೂ ಕೇಳಿಕೊಲ್ಳುವುದು ಇಷ್ಟೇ, ನಿಯಮಗಳನ್ನು ಪಾಲಿಸಿ. ಸುರಕ್ಷಿತವಾಗಿರಿ" ಎಂದು ಗೌತಮ್ ಗಂಭೀರ್ ಟ್ವಿಟ್ ಮಾಡಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲೀನ ಆರ್‌ಸಿಬಿ ನಾಯಕತ್ವದಿಂದ ಕಿತ್ಹಾಕಿ: ಗೌತಮ್ ಗಂಭೀರ್ವಿರಾಟ್ ಕೊಹ್ಲೀನ ಆರ್‌ಸಿಬಿ ನಾಯಕತ್ವದಿಂದ ಕಿತ್ಹಾಕಿ: ಗೌತಮ್ ಗಂಭೀರ್

ಶುಕ್ರವಾರ ಗೌತಮ್ ಗಂಭೀರ್ ಟ್ವೀಟ್ ಮೂಲಕವೇ ತಮ್ಮ ನಿವಾಸದಲ್ಲಿ ಸದಸ್ಯರೊಬ್ಬರಿಗೆ ಕೊರೊನಾ ವೈರಸ್ ತಗುಲಿಸುವ ವಿಚಾರ ಹಾಗೂ ತಾನು ಐಸೋಲೇಶನ್‌ನಲ್ಲಿರುವ ಸಂಗತಿಯನ್ನು ಬಹಿರಂಗಪಡಿಸಿದ್ದರು. ತನ್ನ ಕೊರೊನಾ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು.

Story first published: Sunday, November 8, 2020, 16:49 [IST]
Other articles published on Nov 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X